ಬ್ಯಾಸ್ಕೆಟ್‌ಬಾಲ್‌: ಫೈನಲ್‌ಗೆ ಕರ್ನಾಟಕ

7

ಬ್ಯಾಸ್ಕೆಟ್‌ಬಾಲ್‌: ಫೈನಲ್‌ಗೆ ಕರ್ನಾಟಕ

Published:
Updated:

ಬೆಂಗಳೂರು: ಕರ್ನಾಟಕದ ಬಾಲಕಿಯರ ತಂಡದವರು ರಾಜಸ್ಥಾನದ ಉದಯಪುರದಲ್ಲಿ ಆಯೋಜನೆಯಾಗಿರುವ 16 ವರ್ಷದೊಳಗಿನವರ ರಾಷ್ಟ್ರೀಯ ಯೂತ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಸೆಮಿಫೈನಲ್‌ ‍ಪಂದ್ಯದಲ್ಲಿ ಕರ್ನಾಟಕ  58–55 ‍ಪಾಯಿಂಟ್ಸ್‌ನಿಂದ ಛತ್ತೀಸಗಡ ತಂಡದ ಎದುರು ಗೆದ್ದಿತು.

ಮೊದಲಾರ್ಧದಲ್ಲಿ 27–32ರಿಂದ ಹಿನ್ನಡೆ ಕಂಡಿದ್ದ ಕರ್ನಾಟಕ ತಂಡ ದ್ವಿತೀಯಾರ್ಧದಲ್ಲಿ ಮೋಡಿ ಮಾಡಿತು. ಸಂತನ ಮತ್ತು ಮಾಯಾ ಕ್ರಮವಾಗಿ 14  ಹಾಗೂ 10 ಪಾಯಿಂಟ್ಸ್‌ ಗಳಿಸಿ ಗಮನ ಸೆಳೆದರು.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !