ಮಂಗಳವಾರ, ನವೆಂಬರ್ 12, 2019
28 °C

ಬ್ಯಾಸ್ಕೆಟ್‌ಬಾಲ್‌: ಸೆಮಿಗೆ ಕರ್ನಾಟಕ

Published:
Updated:

ಬೆಂಗಳೂರು: ಕರ್ನಾಟಕದ ಬಾಲಕಿಯರ ತಂಡದವರು ಕಟಕ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸಬ್‌ ಜೂನಿಯರ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಜವಾಹರಲಾಲ್‌ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕ 69–49 ಪಾಯಿಂಟ್ಸ್‌ನಿಂದ ಉತ್ತರ ಪ್ರದೇಶವನ್ನು ಮಣಿಸಿತು.

ಕರ್ನಾಟಕ ತಂಡದ ಎಂ.ಕೆ.ಯಶಸ್ವಿನಿ ಮತ್ತು ಹರಿಣಿ ಜಿ.ಅಯ್ಯರ್‌ ಅವರು ಕ್ರಮವಾಗಿ 17 ಮತ್ತು 11 ಪಾಯಿಂಟ್ಸ್‌ ಕಲೆಹಾಕಿದರು.

ನಾಲ್ಕರ ಘಟ್ಟದ ಹಣಾಹಣಿಯಲ್ಲಿ ರಾಜ್ಯ ತಂಡವು ತಮಿಳುನಾಡು ವಿರುದ್ಧ ಸೆಣಸಲಿದೆ.

ಎಂಟರ ಘಟ್ಟದ ಇನ್ನೊಂದು ಪೈಪೋಟಿಯಲ್ಲಿ ತಮಿಳುನಾಡು 76–27ರಿಂದ ಪಂಜಾಬ್‌ ತಂಡವನ್ನು ಪರಾಭವಗೊಳಿಸಿತು.

ವಿಜಯಿ ತಂಡದ ವುವಾನ್‌ ಕ್ರೊಸೊಲಿನ್‌ 27 ಪಾಯಿಂಟ್ಸ್‌ ಗಳಿಸಿ ಗಮನ ಸೆಳೆದರು. ತಮಿಳುನಾಡು ತಂಡವು ನಾಲ್ಕು ಕ್ವಾರ್ಟರ್‌ಗಳಲ್ಲೂ ಗುಣಮಟ್ಟದ ಆಟ ಆಡಿತು.

ಪ್ರತಿಕ್ರಿಯಿಸಿ (+)