ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟ್‌ಬಾಲ್‌: ಕರ್ನಾಟಕದ ವನಿತೆಯರಿಗೆ ಪ್ರಶಸ್ತಿ

Last Updated 28 ಮಾರ್ಚ್ 2019, 19:24 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ವನಿತೆಯರ ತಂಡದವರು ರಾಷ್ಟ್ರೀಯ ಸೀನಿಯರ್‌ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಿಗದಿಯಾಗಿದ್ದ ಫೈನಲ್‌ನಲ್ಲಿ ಕರ್ನಾಟಕ ತಂಡ ಹರಿಯಾಣ ಎದುರು ಆಡಬೇಕಿತ್ತು. ಎದುರಾಳಿ ತಂಡ ಪಂದ್ಯದಿಂದ ಹಿಂದೆ ಸರಿದ ಕಾರಣ ರಾಜ್ಯದ ವನಿತೆಯರಿಗೆ ಪ್ರಶಸ್ತಿ ಒಲಿಯಿತು.

ಸೆಮಿಫೈನಲ್‌ನಲ್ಲಿ ರಾಜ್ಯ ತಂಡದವರು 31–29 ಪಾಯಿಂಟ್ಸ್‌ನಿಂದ ದೆಹಲಿ ಎದುರು ಗೆದ್ದಿದ್ದರು.ನಾಲ್ಕರ ಘಟ್ಟದ ಇನ್ನೊಂದು ಹಣಾಹಣಿಯಲ್ಲಿ ಹರಿಯಾಣ 31–12ರಲ್ಲಿ ಕೇರಳ ತಂಡವನ್ನು ಪರಾಭವಗೊಳಿಸಿತ್ತು.

ಪುರುಷರ ವಿಭಾಗದಲ್ಲಿ ಪಂಜಾಬ್‌ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು.ಫೈನಲ್‌ನಲ್ಲಿ ಪಂಜಾಬ್ 37–34ರಲ್ಲಿ ಹರಿಯಾಣವನ್ನು ಮಣಿಸಿತು. ರೋಚಕ ಹಣಾಹಣಿಯ ಅಂತಿಮ ಅವಧಿಯಲ್ಲಿ ಪಂಜಾಬ್‌ ಆಟಗಾರರು ಮಿಂಚಿನ ಆಟ ಆಡಿದರು.

ಕರ್ನಾಟಕ ತಂಡದವರು ನಾಲ್ಕನೇ ಸ್ಥಾನಕ್ಕೆ ತೃಪ್ತರಾದರು. ಸೆಮಿಫೈನಲ್‌ನಲ್ಲಿ ಆತಿಥೇಯರು 19–25ರಲ್ಲಿ ಹರಿಯಾಣ ಎದುರು ಸೋತರು.ನಾಲ್ಕರ ಘಟ್ಟದ ಮತ್ತೊಂದು ಪೈಪೋಟಿಯಲ್ಲಿ ಪಂಜಾಬ್‌ 37–27ರಲ್ಲಿ ಕೇರಳವನ್ನು ಸೋಲಿಸಿತು.

ಮಹಿಳಾ ವಿಭಾಗದಲ್ಲಿ ದೆಹಲಿ ಮತ್ತು ಕೇರಳ ಜಂಟಿಯಾಗಿ ಮೂರನೇ ಸ್ಥಾನ ಪಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT