ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

200 ಮೀ ಓಟ: ಧ್ರುವ, ವೈಭವಿ ಮೊದಲಿಗರು

ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್; ರಿಲೆಯಲ್ಲಿ ಕೊಡಗು, ದಕ್ಷಿಣ ಕನ್ನಡ ಪಾರಮ್ಯ
Last Updated 18 ಡಿಸೆಂಬರ್ 2022, 22:15 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಮಂಗಳೂರು: ಉಡುಪಿ ಜಿಲ್ಲೆಯ ಎನ್‌.ಧ್ರುವ ಬಲ್ಲಾಳ್‌ ಹಾಗೂ ಬೆಳಗಾವಿ ಜಿಲ್ಲೆಯ ವೈಭವಿ ಬಿ. ಅವರು ಇಲ್ಲಿ ನಡೆಯುತ್ತಿರುವ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಅಥ್ಲೆಟಿಕ್ ಕೂಟದ 200 ಮೀ ಓಟದ ಸ್ಪರ್ಧೆಯಲ್ಲಿ ಕ್ರಮವಾಗಿ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಮೊದಲಿಗರಾದರು.

ಮಂಗಳೂರು ರಥಬೀದಿಯ ಬಾಲಕಿಯರ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಮಂಗಳಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 200 ಮೀ ಓಟದ ಸ್ಪರ್ಧೆಯಲ್ಲಿ ಧ್ರುವ 22.4 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಬೆಂಗಳೂರು ದಕ್ಷಿಣ ಜಿಲ್ಲೆಯ ರಿಹಾನ್‌ ಸಿ.ಎಚ್‌ 22.6 ಸೆಕೆಂಡ್‌ಗಳಲ್ಲಿ ಗುರಿ ಸೇರಿದರು

ಬಾಲಕಿಯರ ವಿಭಾಗದ 200 ಮೀ ಓಟದ ಸ್ಪರ್ಧೆಯಲ್ಲಿ ವೈಭವಿ ಗುರಿ ತಲುಪಲು 25.9 ಸೆಕೆಂಡ್‌ ತೆಗೆದುಕೊಂಡರು. ಕೊಡಗು ಜಿಲ್ಲೆಯ ಮಾನಸ ಎನ್‌.ಸಿ. 26.2 ಸೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಅಮೂಲ್ಯ ಬಿ.ಎಂ. 26.5 ಸೆಕೆಂಡ್‌ಗಳಲ್ಲಿ ಗುರಿ ಸೇರಿದರು.

ಫಲಿತಾಂಶಗಳು: ಬಾಲಕರ 200 ಮೀ ಓಟ: ಎನ್‌.ಧ್ರುವ ಬಲ್ಲಾಳ್‌ (ಉಡುಪಿ)–1. ಕಾಲ: 22.4 ಸೆ, ರಿಹಾನ್ ಸಿ.ಎಚ್‌. (ಬೆಂಗಳೂರು ದಕ್ಷಿಣ)–2, ಆಯುಷ್‌ ಆರ್‌.ದೇವಾಡಿಗ (ದಕ್ಷಿಣ ಕನ್ನಡ)–3; 1500 ಮೀ. ಓಟ: ಚಿಂತನ್‌ ಎಚ್‌.ವಿ (ಕೊಡಗು)–1: ಕಾಲ: 4 ನಿ 07.6 ಸೆ, ಹನುಮಂತ ವರಾಳ್ಯಗೋಳ (ಬಾಗಲಕೋಟೆ)–2, ವಿನಾಯಕ ರಾಥೋಡ (ವಿಜಯಪುರ)–3; 5000 ಮೀ ಓಟ; ಲಕ್ಷ್ಮಣ್ ಪಾಟೀಲ (ಬೆಳಗಾವಿ)–1. ಕಾಲ: 16 ನಿ.40.3 ಸೆ, ವಿನೋದ್‌ ಕುಮಾರ್ (ಬೆಂಗಳೂರು ದಕ್ಷಿಣ)–2, ಭೀಮ ಶಂಕರ (ಕೊಡಗು)–3; 110 ಮೀ ಹರ್ಡಲ್ಸ್‌; ಅಂಕಿತ್‌ ಜೋಗಿ (ಉಡುಪಿ)–1.ಕಾಲ: 14.6 ಸೆ, ಚೈತನ್ಯ ಕಾರೆಕರ್‌ (ಬೆಳಗಾವಿ)–2, ಈಶ್ವರ ಗೌಡ (ಉತ್ತರ ಕನ್ನಡ)–3; 5 ಕಿ.ಮೀ ರೇಸ್ ವಾಕ್‌: ದರ್ಶನ್‌ ಬಿಗಾದಿ (ಬೆಳಗಾವಿ)–1. ಕಾಲ: 26 ನಿ 46.2 ಸೆ, ವಿಷ್ಣು ಕಾರಬಾರಿ (ಕೊಪ್ಪಳ)–2, ಬಸವರಾಜ್ ಕೂಡಲಗಿ (ಧಾರವಾಡ)–3; ಪೋಲ್‌ವಾಲ್ಟ್‌: ರಾಹುಲ್‌ ಅಶೋಕ್‌ ನಾಯಕ್‌ ಎಂ. (ದಕ್ಷಿಣ ಕನ್ನಡ)–1. ಎತ್ತರ: 3.40 ಮೀ, ಆದಿತ್ಯ ವಿ.ಎಂ. (ಬೆಂಗಳೂರು ಉತ್ತರ)–2, ಯಶವಂತ ಎಸ್‌.ಮರಾಠಿ (ಉತ್ತರ ಕನ್ನಡ)–3; ಹ್ಯಾಮರ್‌ ಥ್ರೋ: ಯಶಸ್‌ ಪ್ರವೀಣ್‌ ಕುರ್ಬಾರ್‌ (ಉತ್ತರ ಕನ್ನಡ): ದೂರ: 58.37 ಮೀ, ಶ್ರೀನಿವಾಸ್‌ ಆರ್‌. (ತುಮಕೂರು)–2, ಎಂ.ಎಸ್‌.ಶ್ರೀಕಾಂತ್‌ (ದಕ್ಷಿಣಕನ್ನಡ)–3; 4X400 ಮೀ ರಿಲೆ: ಕೊಡಗು–1, ಕಾಲ: 3 ನಿ 28.1 ಸೆ, ಉಡುಪಿ–2, ಮೈಸೂರು–3.

ಬಾಲಕಿಯರ 200 ಮೀ ಓಟ: ವೈಭವಿ ಭುದರುಕ (ಬೆಳಗಾವಿ)–1. ಕಾಲ: 25.9 ಸೆ, ಮಾನಸ ಎನ್‌.ಸಿ (ಕೊಡಗು)–2, ಅಮೂಲ್ಯ ಬಿ.ಎಂ. (ದಕ್ಷಿಣ ಕನ್ನಡ)–3; 1500 ಮೀ ಓಟ: ಪ್ರತಿಭಾ (ದಕ್ಷಿಣ ಕನ್ನಡ)–1.ಕಾಲ: 4 ನಿ 57.5 ಸೆ, ಶ್ರೀರಕ್ಷಾ (ಕೊಡಗು)–2, ಮಹಾಲಕ್ಷ್ಮೀ ಬಸಕಳಿ (ಬಾಗಲಕೋಟೆ)–3; 5000 ಮೀ ಓಟ: ನಂದಿನಿ ಜಿ. (ಉಡುಪಿ)–1. ಕಾಲ: 20 ನಿ 58.6ಸೆ, ನವ್ಯಶ್ರೀ ಜಿ.(ದಕ್ಷಿಣ ಕನ್ನಡ)–2, ಐಶ್ವರ್ಯ ಎಸ್‌. (ದಕ್ಷಿಣ ಕನ್ನಡ)–3; 100 ಮೀ ಹರ್ಡಲ್ಸ್‌: ದಿಶಾ ಗಣಪತಿ (ಮೈಸೂರು)–1. ಕಾಲ: 15.5 ಸೆ, ಅಪೂರ್ವ ನಾಯಕ್‌ (ಬೆಳಗಾವಿ)–2, ಎಂ.ಎಸ್‌.ಚೈತನ್ಯಾ (ದಕ್ಷಿಣ ಕನ್ನಡ)–3; 3 ಕಿ.ಮೀ ರೇಸ್‌ ವಾಕ್: ಪ್ರವಲಿಕ ಎಚ್‌. (ಮಂಡ್ಯ)–1. ಕಾಲ: 18 ನಿ 35.8 ಸೆ, ದೀಕ್ಷಾ (ಉಡುಪಿ)–2, ಶ್ವೇತಾ (ಉಡುಪಿ)–3; ಟ್ರಿಪಲ್‌ ಜಂಪ್‌: ಭೂಮಿಕಾ ಕೆ.ಎನ್‌. (ಕೊಡಗು)–1. ದೂರ: 12.05 ಮೀ, ಲಕ್ಷ್ಯಾ (ಮೈಸೂರು)–2, ಪ್ರಿಯಾಂಕ ಆರ್‌. (ದಕ್ಷಿಣ ಕನ್ನಡ)–3; ಪೋಲ್‌ ವಾಲ್ಟ್‌: ಪ್ರೀತಿಕಾ (ಉಡುಪಿ)–1. ಎತ್ತರ: 2.00 ಮೀ, ಲಕ್ಷ್ಮೀ ಕಮಟಮಣಿ (ಧಾರವಾಡ)–2, ಕವನ (ಶಿವಮೊಗ್ಗ)–3, ಸ್ವಾತಿ ಶೆಟ್ಟಿ (ಉತ್ತರ ಕನ್ನಡ)–3; ಜಾವೆಲಿನ್‌: ದೀಪಾ ಬಸನು ಕುಪನಿ (ಚಿಕ್ಕೋಡಿ)–1. ದೂರ: 34.48 ಮೀ, ಆರುಷಿ ಶ್ರೀವಾಸ್ತವ (ಬೆಂಗಳೂರು ಉತ್ತರ)–2, ಮಾಧುರ್ಯಾ (ಉಡುಪಿ)–3; ಹ್ಯಾಮರ್‌ ಥ್ರೋ: ಪಿ.ಕೀರ್ತಿ (ಬಳ್ಳಾರಿ)–1. ದೂರ: 49.03 ಮೀ, ವರ್ಷಾ (ದಕ್ಷಿಣ ಕನ್ನಡ)–2, ಕಾವ್ಯಾ ಮೊಕಾಶಿ (ದಕ್ಷಿಣ ಕನ್ನಡ)–3; 4X400 ಮೀ ರಿಲೆ: ದಕ್ಷಿಣ ಕನ್ನಡ–1. ಕಾಲ: 4 ನಿ 03.2 ಸೆ, ಉಡುಪಿ–2, ಬೆಂಗಳೂರು ಉತ್ತರ–3.

5000 ಮೀ ಓಟ ಪೂರೈಸಿದ ವಿಶೇಷ ವಿದ್ಯಾರ್ಥಿ

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ವಿಜಯನಗರ ಅನುದಾನಿತ ಪದವಿಪೂರ್ವ ಕಾಲೇಜಿನ ವಿಶೇಷ ವಿದ್ಯಾರ್ಥಿ ಎಂ.ಶಶಾಲಿ ಮೈಫೂಸ್ ಅವರು 5 ಸಾವಿರ ಮೀಟರ್‌ ಓಟದ ಸ್ಪರ್ಧೆಯಲ್ಲಿ ಓಟ ಪೂರ್ಣಗೊಳಿಸಿ ಗಮನ ಸೆಳೆದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT