ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಈಜು ಚಾಂಪಿಯನ್‌ಷಿಪ್‌: ಅನೀಶ್‌ ಗೌಡಗೆ ಎರಡು ಕೂಟ ದಾಖಲೆ

ಮೂರನೇ ದಿನ ಬಸವನಗುಡಿ ಪಾರಮ್ಯ
Last Updated 25 ಸೆಪ್ಟೆಂಬರ್ 2021, 22:15 IST
ಅಕ್ಷರ ಗಾತ್ರ

ಬೆಂಗಳೂರು:ಬಸವನಗುಡಿ ಈಜು ಕೇಂದ್ರದ ಅನೀಶ್ ಎಸ್‌. ಗೌಡ ಅವರು ರಾಜ್ಯ ಈಜು ಸಂಸ್ಥೆ ಆಶ್ರಯದ ಈಜು ಚಾಂಪಿಯನ್‌ಷಿಪ್‌ನ ಮೂರನೇ ದಿನವಾದ ಶನಿವಾರ ಎರಡು ಕೂಟ ದಾಖಲೆ ಬರೆದರು.

ಬಸವನಗುಡಿ ಈಜುಕೇಂದ್ರದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಬಾಲಕರ ಗುಂಪು ಒಂದರ 1500 ಮೀಟರ್ಸ್‌ ಫ್ರೀಸ್ಟೈಲ್‌ (16 ನಿಮಿಷ, 8.68 ಸೆ) ಹಾಗೂ 400 ಮೀ. ಫ್ರೀಸ್ಟೈಲ್‌ (4 ನಿ. 4.76 ಸೆ.) ಸ್ಪರ್ಧೆಗಳಲ್ಲಿ ಅವರು ದಾಖಲೆಯೊಂದಿಗೆ ಚಿನ್ನ ಗಳಿಸಿದರು.

ಗುಂಪು ಒಂದರ 100 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಡಾಲ್ಫಿನ್‌ನ ವಿದಿತ್ ಶಂಕರ್‌ ( 1 ನಿ. 5.5 ಸೆ.) ಕೂಡ ಕೂಟ ದಾಖಲೆ ಬರೆದರು.

ಬಾಲಕಿಯರ ಗುಂಪು 2ರ 1500 ಮೀ. ಫ್ರೀಸ್ಟೈಲ್‌ನಲ್ಲಿ ಬಸವನಗುಡಿ ಈಜು ಕೇಂದ್ರದ ಶಿರಿನ್ ಕೂಡ ಕೂಟ ದಾಖಲೆ ಬರೆದರು. ಅವರು 18 ನಿ. 34.24 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಬಾಲಕಿಯರ ಗುಂಪು 2ರ 400 ಮೀ. ಫ್ರೀಸ್ಟೈಲ್‌ನಲ್ಲಿ ಡಾಲ್ಫಿನ್ ಅಕ್ವಾಟಿಕ್ಸ್‌ನ ಹಷಿಕಾ ರಾಮಚಂದ್ರ 4ನಿಮಿಷ 38.66 ಸೆಕೆಂಡುಗಳೊಂದಿಗೆ ಗುರಿ ಮುಟ್ಟಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು.

ಮೂರನೇ ದಿನದ ಫಲಿತಾಂಶಗಳು
ಬಾಲಕರು: 1500 ಮೀ. ಫ್ರೀಸ್ಟೈಲ್‌
ಗುಂಪು 1:
ಅನೀಶ್ ಎಸ್‌. ಗೌಡ (ಬಸವನಗುಡಿ ಈಜು ಕೇಂದ್ರ)–1, ಕಾಲ: 16:08.68 ನಿ. (ಕೂಟ ದಾಖಲೆ), ಧ್ಯಾನ್ ಬಾಲಕೃಷ್ಣ (ಜಿಎಎಫ್‌ಆರ್‌ಎವೈ)–2, ಶಿವಾಂಕ್ ವಿಶ್ವನಾಥ್ (ಜಿಎಎಫ್‌ಆರ್‌ಎವೈ)–3.
ಗುಂಪು 2: ಪವನ್ ಧನಂಜಯ (ಬಿಎಸಿ)–1 ಕಾಲ: 17:20.93, ಅಲೆಸ್ಟರ್ ಸ್ಯಾಮುಯೆಲ್ ರೆಗೊ–2, ಕ್ರಿಶ್ ಸುಕುಮಾರ್–3 (ಇಬ್ಬರೂ ಡಾಲ್ಫಿನ್ಸ್).

ಪುರುಷರು: ಕೌಸ್ತುಭ್ ಅಗರವಾಲ್‌ (ಬಿಎಸಿ)–1, ಕಾಲ: 17:16.02, ಮನೀಷ್ ನಾಯ್ಡು (ಜಿಎಎಫ್‌ಆರ್‌ಎವೈ)–2, ಯತೀಶ್ ಗೌಡ (ಬಿಎಸಿ)–3. 400 ಮೀ.

ಫ್ರೀಸ್ಟೈಲ್‌
ಬಾಲಕರ ಗುಂಪು 3: ದ್ರುಪದ್ ರಾಮಕೃಷ್ಣ (ಬಿಎಸಿ)–1, ಕಾಲ: 5:07.30, ರಕ್ಷಣ್ ಪಿ. (ಡಾಲ್ಫಿನ್ಸ್)–2, ರಿಷಿತ್ ರಂಗನ್‌ (ಬಿಎಸಿ)–3.
ಗುಂಪು 1: ಅನೀಶ್ ಎಸ್‌. ಗೌಡ (ಬಿಎಸಿ)–1, ಕಾಲ: 4:04.76 (ಕೂಟ ದಾಖಲೆ), ಶೋನ್ ಗಂಗೂಲಿ (ಬಿಎಸಿ)–2, ಧ್ಯಾನ್ ಬಾಲಕೃಷ್ಣ (ಜಿಎಎಫ್‌ಆರ್‌ಎವೈ)–3.
ಗುಂಪು 2: ಪವನ್ ಧನಂಜಯ (ಬಿಎಸಿ)–1, ಕಾಲ:4:26.15, ಅಲೆಸ್ಟರ್ ಸ್ಯಾಮುಯೆಲ್ ರೆಗೊ–2, ಕ್ರಿಶ್ ಸುಕುಮಾರ್–3 (ಇಬ್ಬರೂ ಡಾಲ್ಫಿನ್ಸ್).

ಪುರುಷರು: ಕೌಸ್ತುಭ್ ಅಗರವಾಲ್‌ –1 ಕಾಲ: 4:25.87, ಲಿತೀಶ್‌ ಜಿ. ಗೌಡ–2, ಮ್ಯಾಥ್ಯೂಸ್‌ ಕೋಶ್ತಿ–3 ( ಎಲ್ಲರೂ ಬಿಎಸಿ). 100 ಮೀ.

ಬ್ರೆಸ್ಟ್‌ಸ್ಟ್ರೋಕ್‌
ಬಾಲಕರ ಗುಂಪು 1:
ವಿದಿತ್ ಶಂಕರ್‌ (ಡಾಲ್ಫಿನ್‌)–1 ಕಾಲ:1:05.05 (ಕೂಟ ದಾಖಲೆ), ಕಲ್ಪ್ ಎಸ್‌.ಬೊಹ್ರಾ–2, ಪ್ರಣವ್ ಭಾರತಿ–3 (ಇಬ್ಬರೂ ಬಿಎಸಿ).
ಗುಂಪು 2: ಸೂರ್ಯ ಜೋಯಪ್ಪ (ಬಿಎಸಿ)–1 ಕಾಲ: 1:12.69, ಸುಯೋಗ್ ಗೌಡ ಎಲ್‌. (ನೆಟ್ಟಕಲ್ಲಪ್ಪ ಈಜು ಕೇಂದ್ರ)–2, ನವನೀತ್ ಆರ್‌. ಗೌಡ (ಡಾಲ್ಫಿನ್‌)–3.

ಪುರುಷರು: ಪೃಥ್ವಿ ಡಿ.ಎಸ್‌–1, ಕಾಲ: 1:08.88, ಲಿತೀಶ್ ಗೌಡ–2, ಹರ್ಷವರ್ಧನ್ ಎಸ್‌.ಎನ್‌.–3 (ಎಲ್ಲರೂ ಬಿಎಸಿ). 200 ಮೀ.

ಬಟರ್‌ಫ್ಲೈ
ಬಾಲಕರ ಗುಂಪು 1: ಉತ್ಕರ್ಷ್ ಪಾಟೀಲ್ (ಬಿಎಸಿ)–1, ಕಾಲ: 2:07.54, ನಯನ್ ವಿಘ್ನೇಶ್‌ (ಎನ್‌ಎಸಿ)–2, ಕಾರ್ತಿಕೇಯನ್ ನಾಯರ್‌ (ಡಾಲ್ಫಿನ್)–3.
ಗುಂಪು 2: ನಿರಂಜನ್ ಕಾರ್ತಿಕ್ ಬಿ.(ಬಿಎಸ್‌ಆರ್‌ಸಿ)–1, ಕಾಲ: 2:21.07, ಸ್ಟೀವ್ ಜೆಫ್‌ ಲೋಬೊ (ಡಾಲ್ಫಿನ್)–2, ಆರ್ಯನ್ ಪಾಟೀಲ್‌ (ಸ್ವಿಮರ್ಸ್‌ ಕ್ಲಬ್ ಬೆಳಗಾವಿ)–3.

ಪುರುಷರು: ತನಿಶ್ ಜಾರ್ಜ್–1, ಕಾಲ:2:07.29, ಶ್ರವಂತ್ ಶ್ರೀನಿವಾಸ್‌ –2 (ಇಬ್ಬರೂ ಬಿಎಸಿ). 100 ಮೀ.

ಬ್ಯಾಕ್‌ಸ್ಟ್ರೋಕ್‌
ಬಾಲಕರ ಗುಂಪು 1: ಉತ್ಕರ್ಷ್ ಪಾಟೀಲ್‌ (ಬಿಎಸಿ)–1, ಕಾಲ: 58.53, ಅಕ್ಷಯ್ ಆರ್‌. ಶೇಟ್‌ (ಬಿಎಸ್‌ಆರ್‌ಸಿ)–2, ವಿಶ್ವನಾಥ್ ಎಸ್‌. (ಬಿಎಸಿ)–3.
ಗುಂಪು 2: ಅನಂತಜೀತ್ ಮುಖರ್ಜಿ (ಬಿಎಸ್‌ಆರ್‌ಸಿ)–1, ಕಾಲ:1:08.86, ಸಾತ್ವಿಕ್ ಪ್ರಸನ್ನ (ಎನ್‌ಎಸಿ)–2, ದಿಗಂತ್ ವಿ.ಎಸ್. (ಡಾಲ್ಫಿನ್‌) ಮತ್ತು ಆರ್ಯನ್ ಪಾಟೀಲ್‌ (ಸ್ವಿಮರ್ಸ್ ಕ್ಲಬ್ ಬೆಳಗಾವಿ)–3.

ಪುರುಷರು: ಶ್ರೀಹರಿ ನಟರಾಜ್‌ (ಡಾಲ್ಫಿನ್‌)–1, ಕಾಲ: 55.91, ಶಿವ ಎಸ್‌. (ಬಿಎಸಿ)–2, ಭಾವೇಶ್ ಆರ್‌. (ಬಿಎಸ್‌ಆರ್‌ಸಿ)–3. 4X200 ಮೀ. ಫ್ರೀಸ್ಟೈಲ್‌: ಬಾಲಕರ ಗುಂಪು 1: ಬಿಎಸಿ ‘ಎ’–1 ಕಾಲ: 8:11.12, ಬಿಎಸಿ ‘ಬಿ‘–2, ಡಾಲ್ಫಿನ್‌–3.

ಬಾಲಕಿಯರು
1500 ಮೀ. ಫ್ರೀಸ್ಟೈಲ್‌: ಗುಂಪು 1:
ಅಶ್ಮಿತಾ ಚಂದ್ರ (ಜಿಎಎಫ್‌ಆರ್‌ಎವೈ)–1, ಕಾಲ: 19:02.48, ಅನ್ವಯಿ ಮಸ್ಕೆ (ಡಾಲ್ಫಿನ್)–2, ಸಿಂಥಿಯಾ ಚೌಧರಿ (ಬಿಎಸಿ)–3.
ಗುಂಪು 2: ಶಿರಿನ್‌ (ಬಿಎಸಿ)–1, ಕಾಲ: 18:34.24 (ಕೂಟ ದಾಖಲೆ), ಅಂಬರ್ ಸಿಂಗ್‌ (ಡಾಲ್ಫಿನ್)–2, ರಿತಿಕಾ ಬಿ.ಎಂ (ಬಿಎಸಿ)–3.

ಮಹಿಳೆಯರು: ನಿಖಿತಾ ಎಸ್‌.ವಿ–1, ಕಾಲ:19:41.63, ಇಂಚರಾ ನಾರಾಯಣ್‌–2 (ಇಬ್ಬರೂ ಬಿಎಸಿ). 400 ಮೀ.

ಫ್ರೀಸ್ಟೈಲ್
ಬಾಲಕಿಯರ ಗುಂಪು 3: ಧಿನಿಧಿ ದೇಸಿಂಗು (ಡಾಲ್ಫಿನ್‌)–1, ಕಾಲ:4:52.63, ನಯಿಶಾ (ಜೀ ಸ್ವಿಮ್‌)–2, ಸಂಜನಾ ಪಿ.ವಿ (ಜಿಎಎಫ್‌ಆರ್‌ಎವೈ)–3.
ಗುಂಪು 1: ಅನ್ವಯಿ ಮಸ್ಕೆ (ಡಾಲ್ಫಿನ್‌)–1, ಕಾಲ: 4:52.21, ಅಸ್ಮಿತಾ ಚಂದ್ರ (ಜಿಎಎಫ್‌ಆರ್‌ಎವೈ)–2, ಸಿಂಥಿಯಾ ಚೌಧರಿ (ಬಿಎಸಿ)–3.
ಗುಂಪು 2: ಹಷಿಕಾ ರಾಮಚಂದ್ರ (ಡಾಲ್ಫಿನ್‌)–1, ಕಾಲ:4:38.66 (ಕೂಟ ದಾಖಲೆ), ಶಿರಿನ್‌ (ಬಿಎಸಿ)–2, ಅಂಬರ್‌ (ಡಾಲ್ಫಿನ್‌)–3.

ಮಹಿಳೆಯರು: ನಿಖಿತಾ ಎಸ್‌.ವಿ. (ಬಿಎಸಿ)–1, ಕಾಲ:4:58.63, ವಿ.ಪ್ರೀತಾ (ಡಿಕೆವಿ)–2, ಧೃತಿ ಮುರಳೀಧರ್‌ (ಬಿಎಸಿ)–3. 100 ಮೀ.

ಬ್ರೆಸ್ಟ್‌ಸ್ಟ್ರೋಕ್‌
ಗುಂಪು 1:
ಸಾನ್ವಿ ರಾವ್‌ (ಬಿಎಸ್‌ಆರ್‌ಸಿ)–1, ಕಾಲ:1:17.40, ಲಕ್ಷ್ಯಾ ಎಸ್‌ (ಬಿಎಸಿ)–2, ಹಿತೈಷಿ ವಿ. (ವಿಜಯನಗರ)–3.
ಗುಂಪು 2: ಲಿನೇಶಾ ಎ.ಕೆ. (ಬಿಎಸ್‌ಆರ್‌ಸಿ)–1, ಕಾಲ:1:18.09, ರಿಯಾನ್ನಾ ಧೃತಿ ಫರ್ನಾಂಡಿಸ್–2, ಮಾನವಿ ವರ್ಮಾ–3 (ಇಬ್ಬರೂ ಡಾಲ್ಫಿನ್‌).

ಮಹಿಳೆಯರು: ಇಂಚರಾ ನಾರಾಯಣ್ (ಬಿಎಸಿ)–1, ಕಾಲ:1:32.99, ಸಿರಿ ಪಯನೇನಿ (ಡಿಕೆವಿ)–2. 200 ಮೀ.

ಬಟರ್‌ಫ್ಲೈ
ಬಾಲಕಿಯರ ಗುಂಪು 1:
ಅನ್ವೇಷಾ ಗಿರೀಶ್ (ಡಾಲ್ಫಿನ್‌)–1, ಕಾಲ:2:31.45, ಎ.ಜೆದಿದಾ (ಡಿಕೆವಿ)–2, ತಿತೀಕ್ಷಾ ಎಚ್‌. (ಬಿಎಸ್‌ಆರ್‌ಸಿ)–3.
ಗುಂಪು 2: ಹಷಿಕಾ ರಾಮಚಂದ್ರ (ಡಾಲ್ಫಿನ್)–1, ಕಾಲ:2:27.03, ರಿತಿಕಾ ಬಿ.ಎಂ. (ಬಿಎಸಿ)–2, ಅನ್ಶು ದೇಶಪಾಂಡೆ (ವಿಜಯನಗರ)–3.

ಮಹಿಳೆಯರು: ವಿಭಾ ಭೋಸ್ಲೆ –1, ಕಾಲ:2:43.48, ನಿಖಿತಾ ಎಸ್‌.ವಿ–2 (ಇಬ್ಬರೂ ಬಿಎಸಿ). 100 ಮೀ.

ಬ್ಯಾಕ್‌ಸ್ಟ್ರೋಕ್
ಬಾಲಕಿಯರ ಗುಂಪು 1:
ನೀನಾ ವೆಂಕಟೇಶ್‌ (ಡಾಲ್ಫಿನ್‌)–1, ಕಾಲ: 1:06.25, ರಿತು ಭರಮರೆಡ್ಡಿ (ಬಿಎಸಿ)–2, ಲೇತಿಶಾ ಮಂದಣ್ಣ (ಜಿಎಎಫ್‌ಆರ್‌ಎವೈ)–3.
ಗುಂಪು 2: ರಿಧಿಮಾ ವೀರೇಂದ್ರ ಕುಮಾರ್‌ (ಬಿಎಸಿ)–1, ಕಾಲ:1:07.10, ಶಾಲಿನಿ. ಆರ್‌. ದೀಕ್ಷಿತ್ (ಡಾಲ್ಫಿನ್)–2, ಸುನಿಧಿ ಹಲ್ಕೆರೆ (ಸ್ವಿಮರ್ಸ್ ಕ್ಲಬ್, ಬೆಳಗಾವಿ)–3.

ಮಹಿಳೆಯರು: ದಾಮಿನಿ ಕೆ. ಗೌಡ (ಬಿಎಸಿ)–1, ಕಾಲ:1:11.02, ಭೂಮಿಕಾ ಕೇಸರಕರ್‌ (ಬಿಎಸ್‌ಆರ್‌ಸಿ)–2, ಕ್ಷಿತಿಜಾ ಕೆ. (ಬಿಎಸಿ)–3.

ಮಹಿಳೆಯರ 4X200 ಮೀ. ಫ್ರೀಸ್ಟೈಲ್‌: ಡಾಲ್ಫಿನ್‌ ತಂಡ ‘ಎ’–1, ಕಾಲ: 9:23.00, ಬಿಎಸಿ ತಂಡ ‘ಎ‘–2, ಡಾಲ್ಫಿನ್ ತಂಡ ‘ಬಿ‘ –3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT