72ನೇ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ಗೆ ರಾಜ್ಯ ಸೀನಿಯರ್‌ ತಂಡ ಪ್ರಕಟ

7

72ನೇ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ಗೆ ರಾಜ್ಯ ಸೀನಿಯರ್‌ ತಂಡ ಪ್ರಕಟ

Published:
Updated:
Deccan Herald

ಬೆಂಗಳೂರು: ಮುಂಬರುವ 72ನೇ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ಗೆ ಭಾನುವಾರ ಕರ್ನಾಟಕದ ಪುರುಷರ ಮತ್ತು ಮಹಿಳೆಯರ ತಂಡಗಳನ್ನು ಪ್ರಕಟಿಸಲಾಗಿದೆ.

ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಸೆಪ್ಟೆಂಬರ್‌ 19ರಿಂದ 23ರವರೆಗೆ ಕೇರಳದ ತಿರುವನಂತಪುರದಲ್ಲಿ ನಡೆಯಲಿದೆ. ಈಜು, ಡೈವಿಂಗ್‌ ಮತ್ತು ವಾಟರ್‌ ‍ಪೊಲೊ ವಿಭಾಗಗಳಲ್ಲಿ ಸ್ಪರ್ಧೆಗಳು ಜರುಗಲಿವೆ.

ಏಷ್ಯನ್‌ ಕ್ರೀಡಾಕೂಟದಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿದ್ದ ಶ್ರೀಹರಿ ನಟರಾಜ್‌ ಕರ್ನಾಟಕದ ಭರವಸೆಯಾಗಿದ್ದಾರೆ. ಸಲೋನಿ ದಲಾಲ್‌, ಸುವನ ಸಿ ಭಾಸ್ಕರ್‌, ದಾಮಿನಿ ಗೌಡ ಮತ್ತು ಖುಷಿ ದಿನೇಶ್‌ ಅವರು ಮಹಿಳಾ ವಿಭಾಗದಲ್ಲಿ ಪದಕ ಗೆಲ್ಲುವ ನೆಚ್ಚಿನ ಈಜುಪಟುಗಳೆನಿಸಿದ್ದಾರೆ.

ತಂಡಗಳು ಇಂತಿವೆ: ‍‍ಪುರುಷರು: ಎಸ್‌.ಪಿ.ಲಿಖಿತ್‌, ತನೀಷ್‌ ಜಾರ್ಜ್‌ ಮ್ಯಾಥ್ಯೂ, ಅವಿನಾಶ್‌ ಮಣಿ, ಶ್ರೀಹರಿ ನಟರಾಜ್‌, ಎಂ.ರಾಹುಲ್‌, ಸಿ.ಜೆ.ಸಂಜಯ್‌, ಮೋಹಿತ್‌ ವೆಂಕಟೇಶ್‌, ಕೆ.ಎಸ್‌.ಸೈಫ್‌ ಚಂದನ್‌ ಅಲಿ, ರಕ್ಷಿತ್‌ ಯು ಶೆಟ್ಟಿ, ಶಿವ ಶ್ರೀಧರ್‌, ಮಾನವ್‌ ದಿಲೀಪ್‌, ಪಿ.ಚಂದ್ರು, ಡಿ.ಎಸ್‌.ಪೃಥ್ವಿಕ್‌, ವಿ.ಬಿ.ಹೇಮಂತ್‌ ಜೇನುಕಲ್‌, ಆದಿತ್ಯ ದಿನೇಶ್‌ ರಾವ್‌, ಓಂ ಅಮರ್‌ ಹೊನಗೇಕರ್‌, ಹೇಮಮ್‌ ಲಂಡನ್‌ ಸಿಂಗ್‌, ಜಸ್ಟಿನ್‌ ಮ್ಯಾಥ್ಯೂ, ವಿಷ್ಣು ವಿಜಯನ್‌, ಆರ್‌.ರೆಜಿನ್‌, ಎಸ್‌.ವಿಷ್ಣು, ಅಖಿಲ್‌ ಜೋಸೆಫ್‌, ಆರ್‌.ವಿಷ್ಣು, ಹರ್ಷಿತ್‌, ಧೀರನ್‌, ಧನುಷ್‌, ಪ್ರಮುಖ್‌ ದೇವ್‌ ರಾವ್‌, ಸೂರಜ್‌ ಅಜ್ಜಂಪುರ, ಕೆ.ಎ.ವಿಷ್ಣು ಮತ್ತು ಮನೀಷ್‌ ಭೂಷಣ್‌.

ಮಹಿಳೆಯರು: ದೀಕ್ಷಾ ರಮೇಶ್‌, ಟಿ.ಸ್ನೇಹಾ, ಖುಷಿ ದಿನೇಶ್‌, ಸ್ಮೃತಿ ಮಹಾಲಿಂಗಮ್‌, ದಿವ್ಯಾ ಘೋಷ್‌, ಎಚ್‌.ಎಂ.ಪ್ರೇಕ್ಷಾ, ಸುವನ ಸಿ ಭಾಸ್ಕರ್‌, ನೀನಾ ವೆಂಕಟೇಶ್‌, ಸಲೋನಿ ದಲಾಲ್‌, ರಚನಾ ಎಸ್‌.ಆರ್‌. ರಾವ್‌, ಸಾನ್ವಿ ಎಸ್‌.ರಾವ್‌, ದಾಮಿನಿ ಕೆ.ಗೌಡ, ಹಿತಾ ನಾಯಕ್‌, ರಿಯಾ ಸಿಂಗ್‌, ಜಿ.ಸಾಚಿ, ಅದಿತಿ ದಿನೇಶ್‌ ರಾವ್‌, ಶಖ್ಯಾನ ಜೆ.ರಾವ್, ರುತುಜಾ ವಿ.ಪವಾರ್‌, ಅಯನ ಹೊಳ್ಳಾ, ವಿಶಾಖ ಭಟ್‌, ಅಮೂಲ್ಯ ಜೆ.ಪಿ., ಕಂಕಣ ಆರ್‌.ಭಿಡೆ, ಶಿವಾನಿ ರೆಡ್ಡಿ, ಎಂ.ಶ್ವೇತಾ, ಆರ್‌.ಟಿ.ರೇಣು, ನಯನ ಎಂ ಮಣ್ಣೂರ್‌, ಎಸ್‌.ಶಿವಾನಿ, ರಚನಾ ಅಜ್ಜಂಪುರ, ಅಸ್ಮಿತಾ, ಕೆ.ಎಂ.ಐಶ್ವರ್ಯ ಮತ್ತು ಗೌತಮಿ.

ಕೋಚ್‌ಗಳು: ಎ.ಸಿ.ಜಯರಾಜನ್‌ (ಈಜು), ವಿ.ಪದ್ಮನಾಭ ರಾವ್‌ (ಈಜು), ಪಿ.ಅಲ್ಫ್ರೆಡ್‌ ಮತ್ತು ಜಿ.ಆರ್‌.ಬಾಲರಾಜು (ಡೈವಿಂಗ್‌).

ಮ್ಯಾನೇಜರ್‌ಗಳು: ಎನ್‌.ರೋಹಿತ್‌ ಬಾಬು, ವಿಲಾಸ್‌ ಪೋಪಟ್‌ (ಪುರುಷರ ವಾಟರ್‌ ಪೊಲೊ ತಂಡ), ಮಾಳವಿಕಾ ಗುಬ್ಬಿ (ಮಹಿಳೆಯರ ವಾಟರ್‌ ಪೊಲೊ ತಂಡ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !