ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌: ಕಶ್ಯಪ್‌ ರನ್ನರ್‌ ಅಪ್‌

ಫೈನಲ್‌ನಲ್ಲಿ ಚೀನಾದ ಫೆಂಗ್‌ ಎದುರು ಎಡವಿದ ಭಾರತದ ಆಟಗಾರ
Last Updated 8 ಜುಲೈ 2019, 19:57 IST
ಅಕ್ಷರ ಗಾತ್ರ

ಕ್ಯಾಲ್ಗರಿ, ಕೆನಡಾ: ಕೆನಡಾ ಬ್ಯಾಡ್ಮಿಂಟನ್‌ ಓಪನ್‌ ಟೂರ್ನಿಯ ಪ್ರಶಸ್ತಿ ಕನಸು ಭಗ್ನಗೊಂಡಿದೆ. ಭಾನುವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್‌ ಪಂದ್ಯದಲ್ಲಿ ಅವರು ಚೀನಾದ ಲೀ ಶಿ ಫೆಂಗ್‌ ಎದುರು ಮುಗ್ಗರಿಸಿ ರನ್ನರ್‌ ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಟೂರ್ನಿಯುದ್ದಕ್ಕೂ ದಿಟ್ಟ ಆಟದ ಮೂಲಕ ಗಮನಸೆಳೆದಿದ್ದ ಅವರು, ಅಂತಿಮವಾಗಿ ಫೆಂಗ್‌ ಎದುರು 22–20, 14–21, 17–21ರಿಂದ ಸೋತರು. ಒಂದು ತಾಸು 16 ನಿಮಿಷಗಳಲ್ಲಿ ಪಂದ್ಯ ಮುಕ್ತಾಯವಾಯಿತು.

‘ಕೆನಡಾ ಓಪನ್‌ ಟೂರ್ನಿಯಲ್ಲಿ ಬೆಳ್ಳಿಪದಕ ಬಂದಿದೆ. ಫೈನಲ್‌ ಪಂದ್ಯ ಹೋರಾಟದಿಂದ ಕೂಡಿತ್ತು. ಫೆಂಗ್‌ ಎದುರು ಸೋತಿದ್ದೇನೆ. ಈ ವಾರ ನಾನು ಆಡಿದ ಆಟ ಶ್ರೇಷ್ಠ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಒಟ್ಟಾರೆ ಇದೊಂದು ಉತ್ತಮ ಆಟ. ಸಹಾಯ ಮಾಡಿದ ಎಚ್‌.ಎಸ್‌. ಪ್ರಣಯ್‌ಗೂ ಧನ್ಯವಾದ’ ಎಂದು ಕಶ್ಯಪ್‌ ಟ್ವೀಟ್‌ ಮಾಡಿದ್ದಾರೆ.

ಸಹ ಆಟಗಾರ ಪ್ರಣಯ್‌ ಅವರು ಕಶ್ಯಪ್‌ಗೆ ಕೋಚ್‌ ಹಾಗೂ ಫಿಸಿಯೊ ಆಗಿ ಕಾರ್ಯನಿರ್ವಹಿಸಿದ್ದರು. ಬ್ಯಾಡ್ಮಿಂಟನ್‌ ಕೋಚ್‌ ಅಮರೀಶ್‌ ಶಿಂಧೆ ಹಾಗೂ ಫಿಸಿಯೊ ಸುಮಾಂಶ್‌ ಸಿವಲಂಕಾ ಅಮೆರಿಕ ಓಪನ್‌ ವರ್ಲ್ಡ್ ಟೂರ್‌ ಟೂರ್ನಿಗಾಗಿ ತೆರಳಿದ್ದರು.

ಈ ಕಾರಣ ಪ್ರಣಯ್‌ ಈ ಎರಡೂ ಕಾರ್ಯದಲ್ಲಿ ಕಶ್ಯಪ್‌ಗೆ ಸಹಾಯ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT