ಪಾಸ್‌ಪೋರ್ಟ್‌ ಕಳೆದುಕೊಂಡ ಕಶ್ಯಪ್‌

5

ಪಾಸ್‌ಪೋರ್ಟ್‌ ಕಳೆದುಕೊಂಡ ಕಶ್ಯಪ್‌

Published:
Updated:
Deccan Herald

ನವದೆಹಲಿ: ಭಾರತದ ಬ್ಯಾಡ್ಮಿಂಟನ್ ಆಟಗಾರ ಪರುಪಳ್ಳಿ ಕಶ್ಯಪ್, ಡೆನ್ಮಾರ್ಕ್‌ ಓಪನ್‌ ಟೂರ್ನಿಯಲ್ಲಿ ಭಾಗವಹಿಸಲು ಒಡೆನ್ಸ್‌ಗೆ ಹೊರಟಿದ್ದ ವೇಳೆ ಆ್ಯಮ್‌ಸ್ಟರ್‌ಡ್ಯಾಂನಲ್ಲಿ ಪಾಸ್‌ಪೋರ್ಟ್‌ ಕಳೆದುಕೊಂಡಿದ್ದಾರೆ.

‘ನಮಸ್ಕಾರ ಮೇಡಂ. ಶನಿವಾರ ರಾತ್ರಿ ಆ್ಯಮ್‌ಸ್ಟರ್‌ಡ್ಯಾಂನಲ್ಲಿ ಪಾಸ್‌ಪೋರ್ಟ್‌ ಕಳೆದುಹೋಗಿದೆ. ನಾನು ಡೆನ್ಮಾರ್ಕ್‌, ಫ್ರೆಂಚ್‌ ಮತ್ತು ಸಾರಲೌಕ್ಸ್‌ ಓಪನ್‌ ಟೂರ್ನಿಗಳಲ್ಲಿ ಭಾಗವಹಿಸಬೇಕಿದೆ. ಭಾನುವಾರ ಒಡೆನ್ಸ್‌ಗೆ ಹೋಗಬೇಕು. ಪಾಸ್‌ಪೋರ್ಟ್‌ ಇಲ್ಲದೆ ಪ್ರಯಾಣ ಮುಂದುವರಿಸುವುದು ಸಾಧ್ಯವಿಲ್ಲ. ದಯಮಾಡಿ ನೆರವಾಗಿ’ ಎಂದು ಕಶ್ಯಪ್‌, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಟ್ವೀಟ್‌ ಮೂಲಕ ಮನವಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್‌ ರಾಥೋಡ್‌ ಅವರಿಗೂ ಇದನ್ನು ಟ್ಯಾಗ್‌ ಮಾಡಿದ್ದಾರೆ.

ಕಶ್ಯಪ್‌ ಅವರು 2014ರ ಗ್ಲಾಸ್ಗೊ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !