ಸೋಮವಾರ, ಮೇ 10, 2021
19 °C
ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌

ಯೋಗೇಶ್‌ಗೆ ಪ್ಯಾರಾಲಿಂಪಿಕ್ಸ್ ಟಿಕೆಟ್‌

ಪಿಟಿಐ Updated:

ಅಕ್ಷರ ಗಾತ್ರ : | |

ದುಬೈ: ಭಾರತದ ಯೋಗೇಶ್‌ ಕುಮಾರ್‌ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಡಿಸ್ಕಸ್‌ ಥ್ರೊ ಎಫ್‌56 ವಿಭಾಗದಲ್ಲಿ   ಮಂಗಳವಾರ ಕಂಚಿನ ಪದಕ ಗೆದ್ದರು. ಇದರೊಂದಿಗೆ ಟೋಕಿಯೊ ಪ್ಯಾರಾಲಿಂಪಿಕ್ಸ್‌ಗೆ ಟಿಕೆಟ್‌ ಗಿಟ್ಟಿಸಿದರು. 

ತಮ್ಮ ಆರನೇ ಪ್ರಯತ್ನದಲ್ಲಿ ಅವರು 42.51 ಮೀ. ದೂರ ಡಿಸ್ಕಸ್‌ ಎಸೆದರು. ಬ್ರೆಜಿಲ್‌ನ ಕ್ಲಾಡಿನಿ ಬ್ಯಾಟಿಸ್ಟಾ ಡೊಸ್‌ ಸ್ಯಾಂಟೊಸ್‌ (45.92 ಮೀ.) ಈ ವಿಭಾಗದಲ್ಲಿ ಚಿನ್ನ ಗೆದ್ದರೆ, ಇರಾನ್‌ನ ಅಲಿ ಮೊಹಮ್ಮದಿಯಾರಿ (43.51 ಮೀ.) ಬೆಳ್ಳಿ ತಮ್ಮದಾಗಿಸಿಕೊಂಡರು.

ಭಾರತ ಈ ಚಾಂಪಿಯನ್‌ಷಿಪ್‌ನಲ್ಲಿ ಇಲ್ಲಿಯವರೆಗೆ ಎರಡು ಚಿನ್ನ, ಒಂದು ಬೆಳ್ಳಿ, ಎರಡು ಕಂಚಿನ ಪದಕ ಗೆದ್ದಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು