ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್‌ ಬಾಕ್ಸಿಂಗ್‌ ಟೂರ್ನಿ: ಫೈನಲ್‌ಗೆ ಅಮಿತ್‌, ಕವಿಂದರ್‌, ಸಂಜೀತ್‌

ಶಿವ ಥಾಪಾಗೆ ಕಂಚು
Last Updated 30 ಅಕ್ಟೋಬರ್ 2020, 11:23 IST
ಅಕ್ಷರ ಗಾತ್ರ

ನವದೆಹಲಿ: ಅಮೋಘ ಸಾಮರ್ಥ್ಯ ತೋರಿದ ಭಾರತದ ಕವಿಂದರ್‌ ಸಿಂಗ್‌ ಬಿಷ್ತ್‌, ಅಮಿತ್‌ ಪಂಗಲ್‌ ಹಾಗೂ ಸಂಜೀತ್‌ ಅವರು ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಅಲೆಕ್ಸಿಸ್‌ ವ್ಯಾಸ್ಟಿನ್‌ ಅಂತರರಾಷ್ಟ್ರೀಯ ಬಾಕ್ಸಿಂಗ್‌ ಟೂರ್ನಿಯ ಫೈನಲ್‌ಗೆ ಕಾಲಿಟ್ಟಿದ್ದಾರೆ.

ಏಷ್ಯನ್‌ ಚಾಂಪಿಯನ್‌ಷಿಪ್‌ ಬೆಳ್ಳಿ ಪದಕ ವಿಜೇತ ಕವಿಂದರ್‌ 57 ಕೆಜಿ ವಿಭಾಗದಲ್ಲಿ 3–0ಯಿಂದ ಫ್ರಾನ್ಸ್‌ನ ಬೆನಿಕ್‌ ಜಾರ್ಜ್‌ ಮೆಕುಮಿಯಾನ್‌ ಅವರಿಗೆ ಸೋಲಿನ ಪಂಚ್‌ ನೀಡಿ ಚಿನ್ನದ ಪದಕದ ಸುತ್ತಿಗೆ ಲಗ್ಗೆಯಿಟ್ಟರು. ಫೈನಲ್‌ನಲ್ಲಿ ಅವರು ಫ್ರಾನ್ಸ್‌ನ ಸ್ಯಾಮ್ಯುಯೆಲ್‌ ಕಿಸ್ಟೊಹರಿ ಎದುರು ಸೆಣಸಲಿದ್ದಾರೆ.

ಇಂಡಿಯನ್‌ ಓಪನ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಸಂಜೀತ್‌ (91 ಕೆಜಿ), 2–1ರಿಂದ ಅಮೆರಿಕದ ಶೆರಾಡ್‌ ಫುಲ್ಗಮ್‌ ಅವರನ್ನು ಮಣಿಸಿದರು. ಫೈನಲ್‌ನಲ್ಲಿ ಅವರು ಫ್ರಾನ್ಸ್‌ನ ಸೋಹೆಬ್‌ ಬೌಫಿಯಾ ಅವರಿಗೆ ಮುಖಾಮುಖಿಯಾಗಲಿದ್ದಾರೆ.

ವಿಶ್ವ ಚಾಂಪಿಯನ್‌ಷಿಪ್‌ ಬೆಳ್ಳಿ ಪದಕ ವಿಜೇತ ಅಮಿತ್ ಪಂಗಲ್‌ (52 ಕೆಜಿ) ಅವರು ಅಮೆರಿಕದ ಕ್ರಿಸ್ಟೋಫರ್‌ ಹೆರೆರಾ ಅವರನ್ನು ಮಣಿಸಿ ಫೈನಲ್‌ ತಲುಪಿದರು.

ಮತ್ತೊಂದು ಸೆಮಿಫೈನಲ್‌ನಲ್ಲಿ ಎಡವಿದ ಶಿವ ಥಾಪಾ (63 ಕೆಜಿ) ಕಂಚಿನ ಪದಕ ತಮ್ಮದಾಗಿಸಿಕೊಂಡರು. ನಾಲ್ಕರ ಘಟ್ಟದ ಬೌಟ್‌ನಲ್ಲಿ ಅವರು 1–2ರಿಂದ ಸ್ಥಳೀಯ ಬಾಕ್ಸರ್‌ ಲೌನೆಸ್‌ ಹಮ್ರೊಯ್‌ ಎದುರು ಸೋತರು.

ಮಾರ್ಚ್‌ನಲ್ಲಿ ಜೋರ್ಡಾನ್‌ನಲ್ಲಿ ನಡೆದ ಒಲಿಂಪಿಕ್ಸ್‌ ಅರ್ಹತಾ ಬೌಟ್‌ಗಳ ಭಾರತದ ಬಾಕ್ಸರ್‌ಗಳು ಸ್ಪರ್ಧಿಸಿದ ಮೊದಲ ಟೂರ್ನಿ ಇದಾಗಿತ್ತು. ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಬಾಕ್ಸರ್‌ಗಳ ತರಬೇತಿ ಹಾಗೂ ಸ್ಪರ್ಧೆಗಳಿಗೆ ತಡೆಯುಂಟಾಗಿತ್ತು.

ಭಾರತದ ಬಾಕ್ಸರ್‌ಗಳು ಸದ್ಯ ತರಬೇತಿಗಾಗಿ ಯೂರೋಪ್‌ ಪ್ರವಾಸದಲ್ಲಿದ್ದು, ಇಟಲಿಯ ಅಸ್ಸಿಸಿ ಎಂಬಲ್ಲಿ ತಂಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT