ಅಥ್ಲೆಟಿಕ್ಸ್‌: ಭಾರತಕ್ಕೆ ಆರು ಪದಕ

ಸೋಮವಾರ, ಜೂಲೈ 15, 2019
25 °C
800 ಮೀಟರ್ಸ್‌ನಲ್ಲಿ ಚಿನ್ನ ಜಯಿಸಿದ ಮೊಹಮ್ಮದ್‌ ಅಫ್ಸಲ್‌

ಅಥ್ಲೆಟಿಕ್ಸ್‌: ಭಾರತಕ್ಕೆ ಆರು ಪದಕ

Published:
Updated:
Prajavani

ಅಲಮೆಟಿ, ಕಜಕಸ್ತಾನ (ಪಿಟಿಐ): ಭಾರತದ ಟ್ರ್ಯಾಕ್‌ ಮತ್ತು ಫೀಲ್ಡ್‌ ಅಥ್ಲೀಟ್‌ಗಳು ಕ್ವಾಸನೋವ್‌ ಸ್ಮಾರಕ ಅಥ್ಲೆಟಿಕ್‌ ಕೂಟದಲ್ಲಿ ಶನಿವಾರ ಆರು ಪದಕಗಳನ್ನು ಜಯಿಸಿದ್ದಾರೆ.

ಪುರುಷರ 800 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಮೊಹಮ್ಮದ್‌ ಅಫ್ಸಲ್‌ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಅವರು ಒಂದು ನಿಮಿಷ 49.12 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು. ಫೆಬ್ರುವರಿಯಲ್ಲಿ ಪಟಿಯಾಲದಲ್ಲಿ ನಡೆದಿದ್ದ ಇಂಡಿಯನ್‌ ಗ್ರ್ಯಾನ್‌ ಪ್ರೀ ಕೂಟದಲ್ಲಿ ಅಫ್ಸಲ್‌ ಒಂದು ನಿಮಿಷ 49.01 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು. ಈ ಸಾಧನೆ ಉತ್ತಮಪಡಿಸಿಕೊಳ್ಳಲು ವಿಫಲರಾದರು.

ಪುರುಷರ ಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿ ಗಗನದೀಪ್‌ ಸಿಂಗ್‌ ಚಿನ್ನದ ಸಾಧನೆ ಮಾಡಿದರು. ಅವರು 52.39 ಮೀಟರ್ಸ್ ಸಾಮರ್ಥ್ಯ ತೋರಿದರು. ಈ ವಿಭಾಗದ ಬೆಳ್ಳಿಯ ಪದಕ ಭಾರತದವರೇ ಆದ ಸೆಂಥಿಲ್‌ ಕುಮಾರ್‌ ಮಿತ್ರವರುಣ್‌ ಪಾಲಾಯಿತು. ಸೆಂಥಿಲ್‌ 49.54 ಮೀಟರ್ಸ್‌ ದೂರ ಡಿಸ್ಕಸ್‌ ಎಸೆದರು.

ಮಹಿಳೆಯರ ಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿ ಕಣದಲ್ಲಿದ್ದ ನವಜೀತ್‌ ಕೌರ್‌ ಧಿಲ್ಲೋನ್‌ ಭಾರತದ ಖಾತೆಗೆ ಮೂರನೇ ಚಿನ್ನದ ಪದಕ ಸೇರ್ಪಡೆ ಮಾಡಿದರು.

ನವಜೀತ್‌ ಅವರಿಂದ 54.80 ಮೀಟರ್ಸ್‌ ಸಾಮರ್ಥ್ಯ ಮೂಡಿಬಂತು. ನವಜೀತ್‌, 2018ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸಿದ್ದರು.

ಮಹಿಳೆಯರ ಹ್ಯಾಮರ್‌ ಥ್ರೋ ಸ್ಪರ್ಧೆಯಲ್ಲಿ ಜ್ಯೋತಿ ಜಾಖರ್‌ ಬೆಳ್ಳಿಯ ಪದಕ ಗೆದ್ದರು. ಅವರು 58.69 ಮೀಟರ್ಸ್‌ ದೂರ ಹ್ಯಾಮರ್‌ ಎಸೆದರು. ಅನಿತಾ (55.38 ಮೀ.) ಈ ವಿಭಾಗದ ಕಂಚಿನ ಪದಕ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !