ಬುಧವಾರ, ಮಾರ್ಚ್ 22, 2023
26 °C

ಸುರಪುರದಲ್ಲಿ ರಸ್ತೆ ಅಪಘಾತ: ಇಬ್ಬರು ಕೊಕ್ಕೊ ಆಟಗಾರರು ಸ್ಥಳದಲ್ಲೇ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಪುರ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ದೇವರಗೋನಾಲದ ಸಿದ್ಧಾಪುರ ಬಳಿ ಗುರುವಾರ ರಾತ್ರಿ ಟಂಟಂ ಅಟೊ ಮತ್ತು ಕಬ್ಬು ತುಂಬಿದ ಟ್ರ್ಯಾಕ್ಟರ್ ನಡುವೆ ಡಿಕ್ಕಿ ಸಂಭವಿಸಿ ರಾಜ್ಯ ಮಟ್ಟದ ಇಬ್ಬರು ಕೊಕ್ಕೊ ಆಟಗಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸುರಪುರ ತಾಲ್ಲೂಕಿನ ದೇವರ ಗೋನಾಲದ ವೆಂಕಟೇಶ ಭಂಟನೂರ (20) ಮತ್ತು ಶಿರಸಿ ತಾಲ್ಲೂಕಿನ ದೇವನಳ್ಳಿಯ ನಾರಾಯಣ ಕೃಷ್ಣ ಮರಾಠೆ(18) ಮೃತರು.

‘ಆಟೊ ಚಾಲಕ ಮಾಳಪ್ಪ ಭಂಟನೂರ, ಕ್ರೀಡಾಪಟು ಯಲ್ಲಪ್ಪ ದೇವದುರ್ಗ ಅವರನ್ನು ಕಲಬುರಗಿ ಆಸ್ಪ ತ್ರೆಗೆ ದಾಖಲಿಸಲಾಗಿದೆ.  ಆಟೊದಲ್ಲಿ 7 ಆಟಗಾರರಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ’ ಎಂದು ಸುರ ಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.

‘ಬುಡಕಟ್ಟು ಸಮುದಾಯದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸುರಪುರದ ವನವಾಸಿ ಕಲ್ಯಾಣ ಸಂಸ್ಥೆಯಲ್ಲಿ ಡಿಸೆಂಬರ್ 23ರಿಂದ ಆರಂಭವಾಗಲಿದ್ದ ತರಬೇತಿ ಶಿಬಿರಕ್ಕೆ ಬಂಟ್ವಾಳ, ಆಂಕೋಲಾ, ಶಿರಸಿಯಿಂದ ಆಟಗಾರರು ಬಂದಿದ್ದರು. ಕೆಲವರು ಸುರಪುರದಲ್ಲಿ ಉಳಿದರೆ, 7 ಮಂದಿ ವೆಂಕಟೇಶ ಜೊತೆಗೆ ಆಟೊದಲ್ಲಿ ದೇವರಗೋನಾಲಕ್ಕೆ ಹೊರಟಿದ್ದರು’ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು