ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರಣ್‌, ಅನಿರುದ್ಧ ಸೆಮಿಫೈನಲ್‌ಗೆ

ಯೊನೆಕ್ಸ್ ಸನ್‌ರೈಸ್‌ ರಾಜ್ಯ ಚಾಂಪಿಯನ್‌ಷಿಪ್‌ ಬ್ಯಾಡ್ಮಿಂಟನ್‌
Last Updated 7 ಸೆಪ್ಟೆಂಬರ್ 2019, 20:32 IST
ಅಕ್ಷರ ಗಾತ್ರ

ಬೆಂಗಳೂರು: ಕಿರಣ್‌ ಬಾಲಾಜಿ ಹಾಗೂ ಅನಿರುದ್ಧ ದೇಶಪಾಂಡೆ ಅವರು ಇಲ್ಲಿ ನಡೆಯುತ್ತಿರುವ ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್ ಸೆಮಿಫೈನಲ್‌ಗೆ ಕಾಲಿಟ್ಟಿದ್ದಾರೆ. ಕಿರಣ್‌ ಅವರು 21–7, 24–22ರಿಂದಹೇಮಂತ್‌ ಗೌಡ ಅವರನ್ನು ಮಣಿಸಿದರು. ಅನಿರುದ್ಧ ದೇಶಪಾಂಡೆ, ಚಿರಾಗ್‌ ಬಿ. ಅವರನ್ನು 21–19, 21–15ರಿಂದ ಸೋಲಿಸಿದರು.

ಪುರುಷರ ಸಿಂಗಲ್ಸ್ ಇತರ ಕ್ವಾರ್ಟರ್‌ಫೈನಲ್‌ ಪಂದ್ಯಗಳಲ್ಲಿ ಭಾರ್ಗವ್‌ ಎಸ್‌. ಅವರು ರೋಹಿತ್‌ ಎಂ. ಎದುರು 21–12, 21–11ರಿಂದ ಗೆದ್ದರೆ, ಡೇನಿಯಲ್‌ ಫರೀದ್‌, ರಘು ಮರಿಸ್ವಾಮಿ ವಿರುದ್ಧ 21–13, 18–21, 21–19ರಿಂದ ಗೆದ್ದರು.

ಮಹಿಳಾ ಸಿಂಗಲ್ಸ್ ಎಂಟರ ಘಟ್ಟದ ಪಂದ್ಯಗಳಲ್ಲಿ ರುತ್‌ ಮಿಶ್ರಾ ವಿನೋದ್‌ ಅವರು ಕೃತಿ ಭಾರಧ್ವಾಜ್‌ ವಿರುದ್ಧ 21–14, 21–19ರಿಂದ, ಪ್ರೇರಣಾ ಎನ್‌.ಎಸ್‌. ಅವರು ಸ್ಪಂದನಾ ಬೇಕಲ್‌ ವಿರುದ್ಧ 21–7, 11–21, 21–6ರಿಂದ ಗೆದ್ದರು. ಶೀತಲ್‌ ಡಿ. ಅವರು ವರ್ಷಾ ವಿನೀತ್‌ ಭಟ್‌ ವಿರುದ್ಧ 21–15, 21–17ರಿಂದ ಮತ್ತು ಗ್ಲೋರಿಯಾ ವಿನಯಕುಮಾರ್‌ ಅಥಾವಳೆ ಅವರು ರಿಯಾ ಪಿಳ್ಳೈ ಎದುರು 21–19, 22–20ರಿಂದ ಗೆದ್ದು ಸೆಮಿಫೈನಲ್‌ ಪ್ರವೇಶಿಸಿದರು.

ಪುರುಷರ ಡಬಲ್ಸ್ ಸೆಮಿಫೈನಲ್‌ ಪಂದ್ಯದಲ್ಲಿ ಆದರ್ಶ್‌ಕುಮಾರ್‌ – ಸಂಜೀತ್‌ ಎಸ್‌. ಜೋಡಿಯು ವಸಂತ್‌ಕುಮಾರ್‌ ಎಚ್‌.ಆರ್‌– ಆಶಿತ್‌ ಸೂರ್ಯ ಜೋಡಿಯನ್ನು 15–21, 21–17, 21–15ರಿಂದ ಸೋಲಿಸಿ ಫೈನಲ್‌ಗೆ ಕಾಲಿಟ್ಟಿತು. ಇನ್ನೊಂದು ಪಂದ್ಯದಲ್ಲಿ ಪ್ರಕಾಶ್‌ರಾಜ್‌ ಎಸ್‌.–ವೈಭವ್‌ ವೈಭವ್‌ ಜೋಡಿಯು ಸೈಫ್‌ ಅಲಿ–ಕಿರಣ್‌ಕುಮಾರ್‌ ಜೋಡಿಯನ್ನು 19–21, 21–17, 21–18ರಿಂದ ಮಣಿಸಿತು.

ಮಹಿಳಾ ಡಬಲ್ಸ್ ಕ್ವಾರ್ಟರ್‌ಫೈನಲ್‌ ಪಂದ್ಯಗಳಲ್ಲಿ ಗ್ಲೋರಿಯಾ ವಿನಯಕುಮಾರ್‌ ಅಥಾವಳೆ – ಆಕಾಂಕ್ಷಾ ಎಸ್‌. ಪೈ ಜೋಡಿಯು ದೀತ್ಯಾ–ರಚನಾ ಕೆ.ಬಿ ಜೋಡಿಯನ್ನು 11–21, 21–17, 21–11ರಿಂದ, ರಿಯಾ ಪಿಳ್ಳೈ– ರುತ್‌ ಮಿಶ್ರಾ ವಿನೋದ್‌ ಜೋಡಿಯು ವರ್ಷಾ ಭಟ್‌–ಶ್ರುತಿ ನಿತಿನ್‌ ಮೊಘೆ ವಿರುದ್ಧ 21–13, 21–18ರಿಂದ, ಸ್ಪಂದನಾ ಬೇಕಲ್‌–ನೇಹಾ ಗಣೇಶ್‌ ಜೋಡಿಯು ದಿವ್ಯಾ ಎ.–ಧರಣಿ ರವಿಕುಮಾರ್‌ ರಾಜರತ್ನಂ ವಿರುದ್ಧ 21–17, 21–18ರಿಂದ, ಜಿ.ಎಮ್‌. ನಿಶ್ಚಿತಾ– ಪಾರ್ವತಿ ಕೃಷ್ಣನ್‌ ಜೋಡಿಯು ಜಾಹ್ನವಿ ಶೆಟ್ಟಿ–ರಿಶಾ ಶೆಟ್ಟಿ ಎದುರು 21–16, 21–10ರಿಂದ ಗೆದ್ದು ಸೆಮಿಫೈನಲ್‌ ತಲುಪಿದರು.

ಮಿಶ್ರ ಡಬಲ್ಸ್ ಕ್ವಾರ್ಟರ್‌ಫೈನಲ್‌ ಪಂದ್ಯಗಳಲ್ಲಿ ಕಿರಣ್‌ಕುಮಾರ್‌– ಜಿ.ಎಮ್‌. ನಿಶ್ಚಿತಾ ಜೋಡಿಯು ಸಂಜೀತ್‌ ಎಸ್‌– ದಿವ್ಯಾ ಎ. ಎದುರು 21–15, 19–21, 21–16ರಿಂದ, ಚಿರಾಗ್‌ ಬಿ.–ದೀಪ್ತಿ ರಮೇಶ್‌ ಅವರು ಸಾಗರ್‌ ಮೊಯ್ಲಿ–ನಿಧಿಶ್ರೀ ದೇವದಾಸ್‌ ಜೋಡಿಯ ವಿರುದ್ಧ 21–13, 21–8ರಿಂದ ಗೆದ್ದರು. ಸೈಫ್‌ ಅಲಿ–ಪಾರ್ವತಿ ಕೃಷ್ಣನ್‌ ಅವರು ಆದರ್ಶ್‌ ಕುಮಾರ್‌–ಧರಣಿ ರವಿಕುಮಾರ್‌ ರಾಜರತ್ನಂ ಎದುರು 21–7, 21–18, ನಿತಿನ್‌ ಎಚ್‌.ವಿ–ರಮ್ಯಾ ವೆಂಕಟೇಶ್‌ ಅವರು ಕಾಶೀರಾಮ್‌ ಪೈ–ಶಾಲಿನಿ ವಿರುದ್ಧ 21–8, 21–13ರಿಂದ ಗೆದ್ದು ಸೆಮಿಫೈನಲ್‌ ಪ್ರವೇಶಿಸಿದರು.

19 ವರ್ಷದೊಳಗಿವರ ಬಾಲಕರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ ಪಂದ್ಯಗಳಲ್ಲಿ ತೇಜಸ್‌ ಸಂಜಯ್‌ ಕಲ್ಲೋಳ್ಕರ್‌ ಅವರು ನರೇನ್‌ ಎಸ್‌.ಅಯ್ಯರ್‌ ವಿರುದ್ಧ 21–15, 21–16ರಿಂದ, ಪೃಥ್ವಿರಾಯ್‌ ಕೆ. ಅವರು ಅಭಿಮಾನ್‌ ಅಂದೆಕುಲಿ ವಿರುದ್ಧ 21–16, 21–16ರಿಂದ, ಸನೀತ್‌ ಎಸ್‌. ದಯಾನಂದ್‌ ಅವರು ಸಂಕೇತ್‌ ಎಮ್‌. ದೈತೋಟ ಎದುರು 21–9, 21–6ರಿಂದ, ಭಾರ್ಗವ್‌ ಎಸ್‌. ಅವರು ಶಶಾಂಕ್‌ ಎಚ್‌. ಎನ್‌. ವಿರುದ್ಧ 21–14, 21–15ರಿಂದ ಗೆದ್ದರು.

ಬಾಲಕಿಯರ(19 ವರ್ಷದೊಳಗಿನವರು) ಸಿಂಗಲ್ಸ್ ಅನುಷ್ಕಾ ಗಣೇಶ್‌ ಅವರು ರಶ್ಮಿ ದಿನೇಶ್‌ ವಿರುದ್ಧ 21–19, 21–10 ಹಾಗೂ ಕೃತಿ ಭಾರಧ್ವಾಜ್‌ ಅವರು ಸ್ಪಂದನಾ ಬೇಕಲ್‌ ವಿರುದ್ಧ 12–21, 21–6, 21–15ರಿಂದ ಗೆದ್ದರು.

ಪುರುಷರ (45 ವರ್ಷದವರು) ಸಿಂಗಲ್ಸ್ ಫೈನಲ್‌ನಲ್ಲಿ ಅಶೋಕ್‌ಕುಮಾರ್‌ ರಘುರಾಮ್‌ ಚೇರ್ಕಳ ಅವರು ಹರೀಶ್‌ ರಾಜು ಅವರನ್ನು ಸೋಲಿಸಿದರು. ಸ್ಕೋರ್‌ 2–1 ಆದ ವೇಳೆ ಹರೀಶ್‌ ಗಾಯಗೊಂಡು ನಿವೃತ್ತಿಯಾದರು.

ಪುರುಷರ ಡಬಲ್ಸ್ (45 ವರ್ಷದವರು) ಫೈನಲ್‌ನಲ್ಲಿ ಪರಿಮೇಳರಗನ್‌– ದೀಪಕ್‌ ರಾಜ್‌ ಅವರು ಸಂಜಯ್‌ ಪೈ–ಸಂಜಯ್‌ ಆರ್‌.ಎಮ್‌ ಜೋಡಿಯನ್ನು 21–15, 21–11ರಿಂದ ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT