ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಡನ್‌ ಮ್ಯಾರಥಾನ್‌: ಕಿಟಾಟ, ಬ್ರಿಗಿಡ್ ಚಾಂಪಿಯನ್‌

Last Updated 4 ಅಕ್ಟೋಬರ್ 2020, 14:03 IST
ಅಕ್ಷರ ಗಾತ್ರ

ಲಂಡನ್‌ : ಪ್ರತಿಷ್ಠಿತ ಲಂಡನ್‌ ಮ್ಯಾರಥಾನ್‌ನಲ್ಲಿ ಇಥಿಯೋಪಿಯಾದ ಶುರಾ ಕಿಟಾಟಾ ಹಾಗೂ ಕೆನ್ಯಾದ ಬ್ರಿಗಿಡ್‌ ಕೋಸ್ಗಿ ಅವರು ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ಗಳಾಗಿ ಆಗಿ ಹೊರಹೊಮ್ಮಿದ್ದಾರೆ.

ಶುರಾ ಕಿಟಾಟಾ (2 ತಾಸು 5 ನಿಮಿಷ 41 ಸೆಕೆಂಡು) ಅವರು ಇಲ್ಲಿ ಮೊದಲ ಬಾರಿ ಪ್ರಶಸ್ತಿ ಜಯಿಸಿದ್ದಲ್ಲದೆ, ಎಲ್ಯೂಡ್‌ ಕಿಪ್ಚೊಗೆ ಅವರ ನಾಲ್ಕು ವರ್ಷಗಳ ಅಧಿಪತ್ಯಕ್ಕೆ ಅಂತ್ಯ ಹಾಡಿದರು. ಎರಡನೇ ಸ್ಥಾನವು ಕೆನ್ಯಾದ ವಿನ್ಸೆಂಟ್‌ ಕಿಪ್ಚುಂಬಾ (2 ತಾಸು, 5 ನಿಮಿಷ, 42 ಸೆಕೆಂಡು) ಅವರ ಪಾಲಾಯಿತು. 2 ತಾಸು, 5 ನಿಮಿಷ, 45 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಇಥಿಯೋಪಿಯಾದ ಸಿಸಾಯ್‌ ಲೆಮ್ಮಾ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು. ವಿಶ್ವದಾಖಲೆಯ ಶ್ರೇಯ ಹೊಂದಿರುವ ಎಲ್ಯೂಡ್‌ ಕಿಪ್ಚೊಗೆ ಅವರು ಎಂಟನೇ ಸ್ಥಾನ ಗಳಿಸಿದರು.

ಮಹಿಳಾ ವಿಭಾಗದಲ್ಲಿ ಕೋಸ್ಗಿ (2 ಗಂಟೆ, 18 ನಿಮಿಷ, 58 ಸೆಕೆಂಡು), ಅಮೆರಿಕದ ಸಾರಾ ಹಾಲ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದರು.ಹಿಂದಿನ ಆವೃತ್ತಿಯಲ್ಲೂ ಕೋಸ್ಗಿ ಅವರು ಪ್ರಶಸ್ತಿ ಜಯಿಸಿದ್ದರು. ಸಾರಾ 2 ಗಂಟೆ 22 ನಿಮಿಷ 1 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಮೂರನೇ ಸ್ಥಾನವು ಕೆನ್ಯಾದ ರುತ್‌ ಚೆಪ್ನೆಟಿಚ್‌ ( 2 ಗಂಟೆ, 22 ನಿಮಿಷ, 5 ಸೆಕೆಂಡು) ಅವರ ಪಾಲಾಯಿತು.

ಚಾಂಪಿಯನ್‌ಗಳಾದ ಶುರಾ ಹಾಗೂ ಕೋಸ್ಗಿ ಅವರು ತಲಾ ₹ 40 ಲಕ್ಷ ನಗದು ಬಹುಮಾನ ಪಡೆದರು.

ಲಂಡನ್‌ ಮ್ಯಾರಥಾನ್‌ ಮೊದಲು ಏಪ್ರಿಲ್‌ನಲ್ಲಿ ನಿಗದಿಯಾಗಿತ್ತು. ಕೊರೊನಾ ಹಾವಳಿಯ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಸಾಂಪ್ರದಾಯಿಕ ರಸ್ತೆ ಮಾರ್ಗದ ಬದಲಾಗಿ ಸೇಂಟ್‌ ಜೇಮ್ಸ್ ಪಾರ್ಕ್‌ನಲ್ಲಿ ರೇಸ್‌ ಆಯೋಜಿಸಲಾಗಿತ್ತು. ಎಲೀಟ್‌ ಓಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT