ನಾಪೋಕ್ಲು (ಕೊಡಗು ಜಿಲ್ಲೆ): ತಾತಂಡ ತಂಡದವರು ಕೊಡವ ಕೌಟುಂಬಿಕ ಹಾಕಿ ಉತ್ಸವದ ಟೂರ್ನಿಯಲ್ಲಿ ಶುಕ್ರವಾರ ಗೆಲುವು ಸಾಧಿಸಿದರು.
ಸಮೀಪದ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತಾತಂಡ 6–1 ಗೋಲಿನಿಂದ ಮುಕ್ಕಾಟಿರ (ಕುಂಬಳ ದಾಳು) ತಂಡವನ್ನು ಮಣಿಸಿತು.
ಎಳ್ತಂಡ ತಂಡದವರು 4–0ರಲ್ಲಿ ನಾಪನೆರವಂಡ ತಂಡದವರನ್ನು ಸೋಲಿಸಿದರು. ನಾಪನೆರವಂಡ ತಂಡದ 84 ವರ್ಷದ ಪೊನ್ನಪ್ಪ ಅವರು ಹಾಕಿ ಸ್ಟಿಕ್ ಹಿಡಿದು ಎಲ್ಲರ ಗಮನ ಸೆಳೆದರು. ಅದೇ ತಂಡದಲ್ಲಿ ಒಂದೇ ಕುಟುಂಬದ ನಾಲ್ವರು ಆಟವಾಡಿದ್ದು ವಿಶೇಷವಾಗಿತ್ತು.
ಕಡೇಮಾಡ ತಂಡವು 4-1 ಅಂತರದಿಂದ ಮೂಕಂಡ ವಿರುದ್ಧ, ಪಾಲೆಯಂಡ 5-0ರಿಂದ ತೆನ್ನಿರ ತಂಡದ ಎದುರು ಜಯಿಸಿದವು. ಕೇಟೋಳಿರ ವಿರುದ್ಧ ಕೊಂಗಂಡ, ಮಂಡೆಯಂಡ ವಿರುದ್ಧ ಚೌರಿರ (ಹೊದವಾಡ), ಬಾಚಂಗಡ ಎದುರು ಕೊಕ್ಕಂಡ, ಸುಳ್ಳಿಮಾಡ ವಿರುದ್ಧ ಪೊನ್ನಚೆಟ್ಟಿರ ತಂಡದವರು ಗೆದ್ದರು.
ಪಾಲೆಯಂಡ ತಂಡದವರು 5-0 ಗೋಲುಗಳಿಂದ ತೆನ್ನಿರ ತಂಡದವರನ್ನು ಮಣಿಸಿದರು. ಚೊಟ್ಟೇರ ವಿರುದ್ಧ ಅಪ್ಪಡೇರಂಡ, ಬೊಳ್ಳೆರ ವಿರುದ್ಧ ಪೆಮ್ಮಂಡ, ಕೇಚಮಾಡ ವಿರುದ್ಧ ಇಟ್ಟೀರ ತಂಡ, ನಾಟೋಳಂಡ ಎದುರು ಮಲ್ಲಮಡ, ಕಾಣತಂಡ ವಿರುದ್ಧ ಮಂಡೇಡ ತಂಡವು ಜಯ ಸಾಧಿಸಿದವು. ಅಲ್ಲಂಡ ತಂಡದವರು 4–3 ಗೋಲುಗಳಿಂದ ಮಂಡೀರ (ನೆಲಜಿ) ವಿರುದ್ಧ ರೋಚಕವಾಗಿ ಗೆದ್ದರು.
ಮುಕ್ಕಾಟಿರ ತಂಡದವರು 2-1ರಲ್ಲಿ ಮಾಳೇಟಿರ ತಂಡವನ್ನು ಮಣಿಸಿದರೆ, ಕೋಡೀರ ತಂಡದವರು 1-0ರಲ್ಲಿ ಪಾಲಚಂಡ ವಿರುದ್ಧ ಗೆದ್ದರು. ಮೂಕಳೇರ ತಂಡದವರು 2-1 ಅಂತರದಿಂದ ಕಾಯಪಂಡ ಎದುರು, ಅಜ್ಜಿಕುಟ್ಟೀರ ವಿರುದ್ಧ ಬಲ್ಲಚಂಡ, ಪುಲ್ಲೇರ ವಿರುದ್ಧ 3–0 ಗೋಲುಗಳಿಂದ ಕಂಬೆಯಂಡ, ಕರ್ತಮಾಡ (ಶೆಟ್ಟಿಗೇರಿ )ತಂಡದ ವಿರುದ್ಧ ಉದಿಯಂಡ, ಮಾರ್ಕಂಡ ವಿರುದ್ಧ ಮುಕ್ಕಾಟಿರ ತಂಡಗಳು ಜಯ ಸಾಧಿಸಿದವು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.