ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಪುದಿಯೊಕ್ಕಡಕ್ಕೆ ಗೆಲುವು

Last Updated 2 ಮೇ 2019, 19:31 IST
ಅಕ್ಷರ ಗಾತ್ರ

ಮಡಿಕೇರಿ: ಕಾಂಡಂಡ ತಂಡವು ಕೊಡವ ಕೌಟುಂಬಿಕ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಗುರುವಾರ ಗೆಲುವು ಸಾಧಿಸಿತು.

ಕಾಕೋಟುಪರಂಬು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕಾಂಡಂಡ ತಂಡವು 1-0 ಗೋಲಿನಿಂದ ಕನ್ನಂಡ ತಂಡವನ್ನು ಸೋಲಿಸಿತು. ಅಪ್ಪಣ್ಣ ಏಕೈಕ ಗೋಲು ಗಳಿಸಿದರು. ಕಾಳೇಂಗಡ ತಂಡವು 4-0 ಗೋಲುಗಳಿಂದ ಸಣ್ಣುವಂಡ ತಂಡವನ್ನು ಪರಾಭವಗೊಳಿಸಿತು. ಕಾಳೇಂಗಡ ಪರ ಬೋಪಣ್ಣ ಎರಡು, ಯಶ್ವಿನ್ ಹಾಗೂ ಮೊನೀಶ್ ತಲಾ ಒಂದೊಂದು ಗೋಲು ತಂದಿತ್ತರು.

ಪುದಿಯೊಕ್ಕಡ ತಂಡವು 7-0 ಗೋಲುಗಳಿಂದ ಮಂಡಿರ ತಂಡದ ವಿರುದ್ಧ ಗೆಲುವು ಸಾಧಿಸಿತು. ವಿಜಯಿ ತಂಡದ ಪ್ರಧಾನ್, ವಿಪಿನ್ ತಲಾ ಎರಡು ಗೋಲು, ಸುಮನ್, ರತನ್ ಹಾಗೂ ಅಭಿನ್ ತಲಾ ಒಂದೊಂದು ದಾಖಲಿಸಿದರು.

ಕಡೇಮಾಡ ತಂಡವು 4-3 ಗೋಲು ಗಳಿಂದ ‘ಟೈಬ್ರೇಕರ್‌’ನಲ್ಲಿ ಕೋದಂಡ ತಂಡವನ್ನು ಸೋಲಿಸಿತು. ನಿಗದಿತ ಅವಧಿಯಲ್ಲಿ ತೀವ್ರ ಹೋರಾಟದಿಂದ ಪಂದ್ಯ ಸಮಬಲವಾಗಿತ್ತು. ಅರೆಯಡ ತಂಡವು 1-0 ಗೋಲಿನಿಂದ ಚೊಯ ಮಾಡಂಡ ತಂಡವನ್ನು ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT