ಮ್ಯಾರಥಾನ್‌: ಅಂಜಲಿಗೆ ಚಿನ್ನ

7

ಮ್ಯಾರಥಾನ್‌: ಅಂಜಲಿಗೆ ಚಿನ್ನ

Published:
Updated:

ಕೋಲ್ಕತ್ತ: ಉತ್ತಮ ಸಾಮರ್ಥ್ಯ ತೋರಿದ ಭಾರತದ ಅಂಜಲಿ ಸರವೊಗಿ, ಕೋಲ್ಕತ್ತ ಮ್ಯಾರಥಾನ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಭಾನುವಾರ ನಡೆದ ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ 45 ವರ್ಷ ವಯಸ್ಸಿನ ಅಂಜಲಿ, 3 ಗಂಟೆ, 16 ನಿಮಿಷ, 54 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿದರು. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ಸಮೀಕ್ಷಾ ರೈ (4:04:40ಸೆ.) ಮತ್ತು ರಶ್ಮಿ ಸೋಮಾನಿ (4:15:24ಸೆ.) ಅವರು ಕ್ರಮವಾಗಿ ಈ ವಿಭಾಗದ ಬೆಳ್ಳಿ ಮತ್ತು ಕಂಚಿನ ಪದಕ ಪಡೆದರು.

ಹಾಫ್‌ ಮ್ಯಾರಥಾನ್‌ನಲ್ಲಿ ಜ್ಯೋತಿ ಸಿಂಗ್‌ ಚಿನ್ನದ ಪದಕ ಗೆದ್ದರು. ಅವರು 1 ಗಂಟೆ, 23 ನಿಮಿಷ, 31 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು. ಡೇಟಿಬ್ಯಾಂಕಿನ್‌ಮಾವ್‌ ಮಾರ್ವೇ (1:39:08ಸೆ.) ಮತ್ತು ಶೆರಿಂಗ್‌ ಲಾಮು ಭುಟಿಯಾ (1:45:48ಸೆ.) ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.

ಪುರುಷರ ಮ್ಯಾರಥಾನ್‌ನಲ್ಲಿ ತಲಾಂಡಿಂಗ್‌ ವಹಲಾಂಗ್‌ (2:35:42ಸೆ.) ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

ಸೂರತ್‌ ರಾಜ್‌ ಸುಬ್ಬಾ (2:40:22ಸೆ.) ಬೆಳ್ಳಿಯ ಪದಕ ಜಯಿಸಿದರೆ, ಫುಲ್ನಿಂಗ್‌ಸ್ಟಾರ್‌ ನೊಂಗ್‌ಲಾಂಗ್‌ (2:41:58ಸೆ.) ಕಂಚಿನ ಪದಕಕ್ಕೆ ತೃ‍ಪ್ತಿಪಟ್ಟರು.

ಹ್ಯಾಫ್‌ ಮ್ಯಾರಥಾನ್‌ ವಿಭಾಗದ ಚಿನ್ನ ಮುಖೇಶ್‌ ಸಿಂಗ್‌ ಭಂಡಾರಿ (1:08:50.16ಸೆ.) ಅವರ ಪಾಲಾಯಿತು. ದೀಪಕ್‌ ಸಿಂಗ್‌ ರಾವತ್‌ (1:08:50.74ಸೆ.) ಮತ್ತು ಬತ್ಸ್‌ರಂಗ್‌ ಸಂಗ್ಮಾ ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಜಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !