ಬುಧವಾರ, ಜನವರಿ 19, 2022
27 °C

ಸ್ನೂಕರ್‌: ಕೆಎಸ್‌ಬಿಎ ’ಎ‘ ತಂಡ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆಎಸ್‌ಬಿಎ ’ಎ‘ ತಂಡ ಇಲ್ಲಿ ನಡೆಯುತ್ತಿರುವ ಎಂ.ಚೆನ್ನಿಯಪ್ಪನ್ ಸ್ಮಾರಕ ಅಂತರ ಕ್ಲಬ್ ಸ್ನೂಕರ್ ಟೂರ್ನಿಯಲ್ಲಿ ಸೋಮವಾರ ಅಮೋಘ ಜಯ ಸಾಧಿಸಿತು.

ದಿನದ ಎರಡು ಲೀಗ್ ಪಂದ್ಯಗಳಲ್ಲಿ ತಂಡ ಸದಾಶಿವನಗರ ಕ್ಲಬ್ ಮತ್ತು ಎಚ್‌ಬಿಸಿಸಿ ’ಬಿ‘ಯನ್ನು ಮಣಿಸಿತು. ಸದಾಶಿವನಗರ ಕ್ಲಬ್ ಮಿಶ್ರ ಫಲ ಕಂಡಿತು.

’ಎ‘ ಗುಂಪಿನ ಹಣಾಹಣಿಯಲ್ಲಿ ಕೆಎಸ್‌ಬಿಎ ’ಎ‘ ತಂಡ ಸದಾಶಿವನಗರ ಕ್ಲಬ್‌ ವಿರುದ್ಧ 2–0ಯಿಂದ ಜಯಿಸಿತು. ಎಚ್.ಇ. ಆನಂದ್‌ 38-52, 50-47, 50-34ರಲ್ಲಿ ವಿಜಯ್ ಗೌಡ ವಿರುದ್ಧ, ನವೀನ್ ಕುಮಾರ್ 47-08, 38-43, 44-43ರಲ್ಲಿ ಉದಯ್ ದೇವ್ ಎದುರು ಗೆದ್ದರು.  

ಮತ್ತೊಂದು ಪಂದ್ಯದಲ್ಲಿ ಕೆಎಸ್‌ಬಿಎ ’ಎ‘ ತಂಡ ಎಚ್‌ಬಿಸಿಸಿಯನ್ನು 2–0ಯಿಂದ ಸೋಲಿಸಿತು. ನವೀನ್ ಕುಮಾರ್ 62-26, 41-37ರಲ್ಲಿ ಡೆನಿ ಜೇಮ್ಸ್ ವಿರುದ್ಧ ಮತ್ತು ದೀಪಕ್ ಎ 63-53, 28-67, 72-40ರಲ್ಲಿ ರಾಜಾ ಎಸ್ ವಿರುದ್ಧ ಜಯ ಸಾಧಿಸಿದರು. 

ಎಂಆರ್‌ಎಲ್‌ಎಫ್ ಎದುರಿನ ಪಂದ್ಯದಲ್ಲಿ ಸದಾಶಿವನಗರ ಕ್ಲಬ್ 2–0ಯಿಂದ ಗೆಲುವು ಸಾಧಿಸಿತು. ಸಂತೋಷ್ 55-37, 33-47, 38-14ರಲ್ಲಿ ಮಧುಸೂದನ್ ವಿರುದ್ಧ, ವಿಜಯ್ ಗೌಡ 40-10, 24-39, 54-22ರಲ್ಲಿ ಹರೀಶ್ ವಿದುದ್ಧ ಗೆದ್ದರು.

’ಬಿ‘ ಗುಂಪಿನಲ್ಲಿ ಬೆಂಗಳೂರು ಸಿಟಿ ಇನ್‌ಸ್ಟಿಟ್ಯೂಟ್ 2–1ರಲ್ಲಿ ಕೆಎಸ್‌ಸಿಎ ’ಎ‘ ವಿರುದ್ಧ, ಈಸ್ಟ್ ಕಲ್ಚರಲ್ ಅಸೋಸಿಯೇಷನ್ ’ಬಿ‘ ಕೆಎಸ್‌ಬಿಎ ’ಡಿ‘ ವಿರುದ್ಧ 2–1ರಲ್ಲಿ, ಕೆಎಸ್‌ಬಿಎ ‘ಡಿ‘ ತಂಡ 2–0ಯಿಂದ ಬೆಂಗಳೂರು ಸಿಟಿ ಇನ್‌ಸ್ಟಿಟ್ಯೂಟ್ ’ಬಿ‘ ವಿರುದ್ಧ ಜಯಿಸಿತು.

’ಸಿ‘ ಗುಂಪಿನಲ್ಲಿ ಇಂಡಿಯನ್ ಜಿಮ್ಖಾನಾ ’ಬಿ‘ ತಂಡ ಮಲ್ಲೇಶ್ವರಂ ಅಸೋಸಿಯೇಷನ್‌ ವಿರುದ್ಧ 2–0ಯಿಂದ, ಕ್ಯಾಥೊಲಿಕ್ ಕ್ಲಬ್‌ ’ಎ‘ ತಂಡ ಕೆಎಸ್‌ಬಿ ಜೂನಿಯರ್ಸ್ ವಿರುದ್ಧ 2–1ರಲ್ಲಿ, ಇಂಡಿಯನ್ ಜಿಮ್ಖಾನಾ 2–0ಯಿಂದ ಕೆಎಸ್‌ಬಿಎ ಜೂನಿಯರ್ಸ್‌ ವಿರುದ್ಧ, ಕ್ಯಾಥೊಲಿಕ್ ಕ್ಲಬ್‌ ’ಎ‘ ತಂಡ 2–0ಯಿಂದ ಮಲ್ಲೇಶ್ವರಂ ಅಸೋಸಿಯೇಷನ್‌ ವಿರುದ್ಧ,  ಎಂಆರ್‌ಎಲ್‌ಎಫ್‌ 2–1ರಲ್ಲಿ ಎಚ್‌ಬಿಸಿಸಿ ’ಬಿ‘ ವಿರುದ್ಧ ಗೆಲುವು ಸಾಧಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು