ರಹಮಾನ್‌ ಶುಭಾರಂಭ

7
ಕೆಎಸ್‌ಬಿಎ ಮೇಯರ್‌ ಕಪ್‌ ಸ್ನೂಕರ್‌ ಟೂರ್ನಿ

ರಹಮಾನ್‌ ಶುಭಾರಂಭ

Published:
Updated:

ಬೆಂಗಳೂರು: ಉತ್ತಮ ಆಟ ಆಡಿದ ಹಫಿಜುರ್‌ ರಹಮಾನ್‌, ಕರ್ನಾಟಕ ರಾಜ್ಯ ಬಿಲಿಯರ್ಡ್ಸ್‌ ಸಂಸ್ಥೆ (ಕೆಎಸ್‌ಬಿಎ) ಆಶ್ರಯದ ಮೇಯರ್‌ ಕಪ್‌ ಸ್ನೂಕರ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಕೆಎಸ್‌ಬಿಎಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ರಹಮಾನ್‌ 55–29, 26–56, 36–67, 53–38, 70–60ರಲ್ಲಿ  ತೌಸಿಫ್‌ ಖಾನ್‌ ಅವರನ್ನು ಸೋಲಿಸಿದರು.

ಇನ್ನೊಂದು ಪಂದ್ಯದಲ್ಲಿ ಪಿ.ವಿ.ಸ್ಪರ್ಶ್‌ 73–36, 46–34, 35–62, 64–37ರಲ್ಲಿ ಡಿ.ಕಾರ್ತಿಕೇಯನ್‌ ವಿರುದ್ಧ ಗೆದ್ದರು.

ಈ ವಿಭಾಗದ ಇತರ ಪಂದ್ಯಗಳಲ್ಲಿ ರೋಹಿತ್‌ ರವಿಂದ್ರನ್‌ 40–81, 64–30, 41–61, 59–26, 54–43ರಲ್ಲಿ ವಿ.ಆನಂದ್‌ ಎದುರೂ; ಅಕ್ಮಲ್‌ ಹುಸೇನ್‌ 39–61, 76–09, 69–54, 57–48ರಲ್ಲಿ ಅಭಿರಾಮ್‌ ಚೆಗೊಂಡಿ ಮೇಲೂ; ಫೈಸಲ್‌ ಖಾನ್‌ 68–52, 56–46, 43–60, 54–67, 59–44ರಲ್ಲಿ ಎಂ.ಅರ್ಜುನ್‌ ವಿರುದ್ಧವೂ; ಮಧು ಚಂದ್ರ  66–35, 61–23, 74–41ರಲ್ಲಿ ಡೆನಿಸ್‌ ಜೇಮ್ಸ್‌ ಮೇಲೂ; ಮೈಕಲ್‌ ರೆಬೆಲ್ಲೊ 43–49, 62–43, 68–42, 56–17ರಲ್ಲಿ ಗುರುಪ್ರಸಾದ್‌ ಭಾವೆ ಎದುರೂ; ಹರೀಶ್‌ ಪಟೇಲ್‌ 39–68, 50–37, 68–39, 56–49ರಲ್ಲಿ ಎಫ್‌.ರುಬೇನ್‌ ವಿರುದ್ಧವೂ; ಪ್ರಗ್ನಾನ್‌ ಸಾಯಿ 56–30, 66–24, 54–64, 63–43ರಲ್ಲಿ ಇರ್ಷಾದ್‌ ಅಹ್ಮದ್‌ ಮೇಲೂ; ಪ್ರಣವ್‌ ಪ್ರಭಾಕರ್‌ 61–33, 68–32, 49–57, 63–28ರಲ್ಲಿ ಪ್ರವೀಣ್‌ ಮಾನೆ ಎದುರೂ; ಸೂಫಿಯಾನ್‌ ಅಹ್ಮದ್‌ 40–44, 54–14, 71–07, 40–38ರಲ್ಲಿ ಭರತ್‌ ಕುಮಾರ್‌ ಮೇಲೂ; ಎಚ್‌.ಇ.ಆನಂದ್‌ 29–71, 42–05, 73–25, 43–10ರಲ್ಲಿ ಎಂ.ಕೆ.ರಮೇಶ್‌ ಆನಂದ್‌ ವಿರುದ್ಧವೂ; ಮೊಹಮ್ಮದ್‌ ಜುಲ್ಫಿಕರ್‌ ಅಹ್ಮದ್‌ 51–39, 49–12, 48–34ರಲ್ಲಿ ಟಿ.ಪಿ.ಭರತ್‌ ಮೇಲೂ; ಸಿ.ಕುಶಾಲ್‌ 68–07, 51–19, 44–14ರಲ್ಲಿ ಸುಶೀಲ್‌ ದುಬೆ ವಿರುದ್ಧವೂ; ಮಂದಿರ್‌ ಶೆರಾಜಿ 58–19, 84–48, 65–09ರಲ್ಲಿ ಅಸಜಾದ್‌ ಹಬೀಬ್‌ ಎದುರೂ; ಅಶ್ವಿನ್‌ ಜಾನ್‌ 71–35, 59–52, 45–49, 34–66, 65–50ರಲ್ಲಿ ಟಿ.ರೋಹಿತ್‌ ಮೇಲೂ; ನಿಹಾಲ್‌ ವಾದ್ವಾ 23–65, 69–62, 55–07, 61–45ರಲ್ಲಿ ಕಾರ್ಲ್‌ ಅಲ್ಫೊನ್ಸೊ ಎದುರೂ ಗೆದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !