ಬುಧವಾರ, ಜುಲೈ 28, 2021
22 °C

ಹಾಕಿ ಸಂಸ್ಥೆ ಜಂಟಿ ಕಾರ್ಯದರ್ಶಿ ಜಾನ್‌ ಮೈಕೆಲ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ಹಾಕಿ ಸಂಸ್ಥೆಯ (ಕೆಎಸ್‌ಎಚ್‌ಎ) ಜಂಟಿ ಕಾರ್ಯದರ್ಶಿ ಜಾನ್ ಮೈಕೆಲ್‌ ಸೋಮವಾರ ಬೆಳಿಗ್ಗೆ ನಿಧನರಾದರು. ದೀರ್ಘಕಾಲದಿಂದ ಅವರು ಅನಾರೋಗ್ಯಪೀಡಿತರಾಗಿದ್ದರು.

‘ಜಾನ್‌ ಅವರಿಗೆ ಕೋವಿಡ್ ಇರುವುದೂ ದೃಢಪಟ್ಟಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ನಂತರ ‘ನೆಗೆಟಿವ್‘ ವರದಿ ಬಂದಿತ್ತು. ಆದರೆ ಸೋಂಕು ಅವರ ಶ್ವಾಸಕೋಶಗಳಿಗೆ ಬಹಳಷ್ಟು ಹಾನಿ ಮಾಡಿತ್ತು‘ ಎಂದು ಕೆಎಸ್‌ಎಚ್‌ಎ ಪ್ರಕಟಣೆಯಲ್ಲಿ ತಿಳಿಸಿದೆ.

ಜಾನ್ ಅವರ ಪುತ್ರ ಸಂದೀಪ್ ಮೈಕೆಲ್ ಭಾರತ ತಂಡದಲ್ಲಿ ಆಡಿದ್ದರು. ಜಾನ್, ಕೆಎಸ್‌ಎಚ್ಎಯಲ್ಲಿ 25 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು