ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿತಿಸರನ್‌, ಸೆಯೊಂಗ್‌ಗೆ ಪ್ರಶಸ್ತಿ

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ
Last Updated 22 ಜನವರಿ 2023, 14:06 IST
ಅಕ್ಷರ ಗಾತ್ರ

ನವದೆಹಲಿ: ಥಾಯ್ಲೆಂಡ್‌ನ ಕುನ್ಲಾವುತ್‌ ವಿತಿಸರನ್‌ ಮತ್ತು ಕೊರಿಯಾದ ಆನ್ ಸೆಯೊಂಗ್‌ ಅವರು ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆದರು.

ಭಾನುವಾರ ನಡೆದ ಫೈನಲ್‌ನಲ್ಲಿ ಕುನ್ಲಾವುತ್‌ 22–20, 10–21, 21–12 ರಲ್ಲಿ ಒಲಿಂಪಿಕ್‌ ಚಾಂಪಿಯನ್‌ ಆಗಿರುವ ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸನ್‌ ವಿರುದ್ಧ ಗೆದ್ದರು. ಮಹಿಳೆಯರ ವಿಭಾಗದಲ್ಲಿ ಸೆಯೊಂಗ್ 15–21, 21–16, 21–12 ರಲ್ಲಿ ಜಪಾನ್‌ನ ಅಕಾನೆ ಯಮಗುಚಿ ಅವರನ್ನು ಮಣಿಸಿದರು.

ಕುನ್ಲಾವುತ್‌ ಅವರಿಗೆ ದೊರೆತ ಮೊದಲ ಸೂಪರ್‌ 750 ಪ್ರಶಸ್ತಿ ಇದಾಗಿದೆ. 64 ನಿಮಿಷ ನಡೆದ ಫೈನಲ್‌ನಲ್ಲಿ ಅವರು ಚುರುಕಿನ ಆಟವಾಡಿದರು.

ಚೀನಾದ ಲಿಯಾಂಗ್‌ ವಿ ಕೆಂಗ್‌– ವಾಂಗ್ ಚಾಂಗ್‌ ಜೋಡಿ 14–21, 21–19, 21–18 ರಲ್ಲಿ ಮಲೇಷ್ಯಾದ ಆ್ಯರನ್‌ ಚಿಯಾ– ಸೊ ವೂ ಯಿಕ್‌ ವಿರುದ್ಧ ಗೆದ್ದು ಪುರುಷರ ಡಬಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆಯಿತು.

ಮಹಿಳೆಯರ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ ವಿಭಾಗದ ಫೈನಲ್‌ ನಡೆಯಲಿಲ್ಲ. ಮಿಶ್ರ ಡಬಲ್ಸ್‌ನಲ್ಲಿ ಚೀನಾದ ವಾಂಗ್‌ ಯಿ ಲಿಯು– ಹುವಾಂಗ್‌ ಡಾಂಗ್‌ ಪಿಂಗ್‌ ಜೋಡಿ ಜಪಾನ್‌ನ ಯುಟ ವತನಾಬೆ– ಅರಿಸಾ ಹಿಗಶಿನೊ ಅವರನ್ನು ಎದುರಿಸಬೇಕಿತ್ತು. ಲಿಯು ಅನಾರೋಗ್ಯಕ್ಕೆ ಒಳಗಾದ್ದರಿಂದ ಚೀನಾದ ಜೋಡಿ ಹಿಂದೆ ಸರಿಯಿತು. ಜಪಾನ್‌ ಜೋಡಿ ಚಾಂಪಿಯನ್‌ ಆಯಿತು.

ಮಹಿಳೆಯರ ಡಬಲ್ಸ್‌ನಲ್ಲಿ ಚೀನಾದ ಜಿಯಾ ಯಿ ಫಾನ್‌ ಅವರ ಜತೆ ಆಡಬೇಕಿದ್ದ ಚೆನ್‌ ಕ್ವಿಂಗ್ ಚೆನ್‌ ಅನಾರೋಗ್ಯಕ್ಕೆ ಒಳಗಾದ್ದರಿಂದ ಚೀನಾದ ಜೋಡಿ ಹಿಂದೆ ಸರಿಯಿತು. ವಾಕ್‌ಓವರ್‌ ಪಡೆದ ಜಪಾನ್‌ನ ನಮಿ ಮತ್ಸುಯಮ– ಚಿಹರು ಶಿದಾ ಪ್ರಶಸ್ತಿ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT