ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌: ಮತ್ತೆ ದಾಖಲೆ ಬರೆದ ಶ್ರೀಹರಿ, ಕುಶಾಗ್ರ

Last Updated 27 ಅಕ್ಟೋಬರ್ 2021, 15:14 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಶ್ರೀಹರಿ ನಟರಾಜ್ ಮತ್ತು ದೆಹಲಿಯ ಕುಶಾಗ್ರ ರಾವತ್ ರಾಜ್ಯ ಈಜು ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನ ಎರಡನೇ ದಿನವೂ ದಾಖಲೆ ನಿರ್ಮಿಸಿದರು.

ಪುರುಷರ 100 ಮೀಟರ್ಸ್‌ ಫ್ರೀಸ್ಟೈಲ್‌ ವಿಭಾಗದಲ್ಲಿ ಶ್ರೀಹರಿ ನಟರಾಜ್ ಮತ್ತು 800 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಕುಶಾಗ್ರ ಪಾರಮ್ಯ ಮೆರೆದರು.

ಬುಧವಾರ 49.94 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಶ್ರೀಹರಿ ತಮ್ಮದೇ ದಾಖಲೆ ಉತ್ತಮಪಡಿಸಿಕೊಂಡರು. ಈ ಹಿಂದೆ ಅವರು 50.17 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು. ಕುಶಾಗ್ರ 8 ನಿಮಿಷ 8.32 ಸೆಕೆಂಡುಗಳಲ್ಲಿ ಗುರಿ ತಲುಪಿ ತಮ್ಮದೇ ಹೆಸರಿನಲ್ಲಿದ್ದ ದಾಖಲೆ ಮುರಿದರು. ಭೋಪಾಲ್‌ನಲ್ಲಿ 2019ರಲ್ಲಿ ನಡೆದ ಕೂಟದಲ್ಲಿ ಅವರು ಮೇಲುಗೈ ಸಾಧಿಸಿದ್ದರು.

ಮೊದಲ ದಿನ ಪುರುಷರ 100 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಶ್ರೀಹರಿ ಮತ್ತು ಕುಶಾಗ್ರ 400 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ದಾಖಲೆ ನಿರ್ಮಿಸಿದ್ದರು.

ಎರಡನೇ ದಿನದ ಫಲಿತಾಂಶಗಳು: ಪುರುಷರ 800 ಮೀಟರ್ಸ್ ಫ್ರೀಸ್ಟೈಲ್‌: ಕುಶಾಗ್ರ ರಾವತ್ (ದೆಹಲಿ)–1. ಕಾಲ: 8:08.32, ಅನೀಶ್ ಎಸ್‌.ಗೌಡ (ಕರ್ನಾಟಕ)–2, ವೇದಾಂತ್ ಮಾಧವನ್ (ಮಹಾರಾಷ್ಟ್ರ)–3;200 ಮೀ ಮೆಡ್ಲೆ: ಶಾನ್ ಗಂಗೂಲಿ (ಕರ್ನಾಟಕ)–1. ಕಾಲ:2:07.37, ಶಿವ ಎಸ್‌ (ಕರ್ನಾಟಕ)–2, ರಾಬಿನ್ ಸಿಂಗ್ (ಆರ್‌ಎಸ್‌ಪಿಬಿ)–3; 100 ಮೀ ಫ್ರೀಸ್ಟೈಲ್‌: ಶ್ರೀಹರಿ ನಟರಾಜ್ (ಕರ್ನಾಟಕ)–1. ಕಾಲ:49.94, ಆನಂದ್‌ ಎ.ಎಸ್‌ (ಎಸ್‌ಎಸ್‌ಸಿಬಿ)–2, ತನಿಷ್‌ ಜಾರ್ಜ್ ಮ್ಯಾಥ್ಯೂ (ಕರ್ನಾಟಕ)–3; 50 ಮೀ ಬ್ರೆಸ್ಟ್‌ಸ್ಟ್ರೋಕ್‌: ಧನುಷ್ ಎಸ್‌ (ತಮಿಳುನಾಡು)–1. ಕಾಲ:29.27, ವೈಷ್ಣವ್‌ ಹೆಗಡೆ (ಎಸ್‌ಎಸ್‌ಸಿಬಿ)–2, ಲೋಹಿತ್ ಎಂ (ಆರ್‌ಎಸ್‌ಪಿಬಿ)–3. ಮಹಿಳೆಯರ 1500 ಮೀಟರ್ಸ್ ಫ್ರೀಸ್ಟೈಲ್‌: ಪ್ರಾಚಿ ಟೋಕಾಸ್ (ದೆಹಲಿ)–1. ಕಾಲ:17:47.28, ರಿಚಾ ಮಿಶ್ರಾ (ಪೊಲೀಸ್‌)–2, ವೃತ್ತಿ ಅಗರವಾಲ್‌ (ತೆಲಂಗಾಣ)–3; 200 ಮೀ ಮೆಡ್ಲೆ: ಅಪೇಕ್ಷಾ ಫೆರ್ನಾಂಡಿಸ್‌ (ಮಹಾರಾಷ್ಟ್ರ)–1. ಕಾಲ: 2:26.28, ದಿಶಾ ಭಂಡಾರಿ (ಉತ್ತರಪ್ರದೇಶ)–2, ಜೇಡಿಡ (ಕರ್ನಾಟಕ)–3; 100 ಮೀ ಫ್ರೀಸ್ಟೈಲ್‌: ಶಿವಾಂಗಿ ಸಮ (ಅಸ್ಸಾಂ)–1. ಕಾಲ: 59.07, ಅವಂತಿಕಾ ಚವಾಣ್ (ಆರ್‌ಎಸ್‌ಪಿಬಿ)–2, ಶಿವಾನಿ ಕಟಾರಿಯ (ಹರಿಯಾಣ)–3; 50 ಮೀ ಬ್ರೆಸ್ಟ್‌ಸ್ಟ್ರೋಕ್‌: ಚಾಹತ್ ಅರೋರ (ಪಂಜಾಬ್‌)–1. ಕಾಲ:33.86, ಅಪೇಕ್ಷಾ ಫೆರ್ನಾಂಡಿಸ್ (ಮಹಾರಾಷ್ಟ್ರ)–2, ಮಾನವಿ ವರ್ಮಾ (ಕರ್ನಾಟಕ)–3.

4x50 ಮೀ ಫ್ರೀಸ್ಟೈಲ್: ಕರ್ನಾಟಕ (ಶ್ರೀಹರಿ ನಟರಾಜ್, ನೀನಾ ವೆಂಕಟೇಶ್‌, ರಿಧಿಮಾ ವೀರೇಂದ್ರ ಕುಮಾರ್‌, ಸಂಭವ್‌)–1. ಕಾಲ: 1:41.73, ಮಹಾರಾಷ್ಟ್ರ–2, ಆರ್‌ಎಸ್‌ಪಿಬಿ–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT