ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಂಗ್‍ಫಿಷರ್ ಅಲ್ಟ್ರಾ ಡರ್ಬಿ ಬೆಂಗಳೂರು: ಲಗಾರ್ಡ್‌ ಮುಡಿಗೆ ಕಿರೀಟ

‘ಸಾವರಿನ್ ಲೆಜೆಂಡ್’ಗೆ 2ನೇ ಸ್ಥಾನ
Last Updated 26 ಜನವರಿ 2021, 18:54 IST
ಅಕ್ಷರ ಗಾತ್ರ

ಬೆಂಗಳೂರು: ಮೊದಲೇ ನಿರೀಕ್ಷಿಸಿದಂತೆ ಸುಲೈಮಾನ್ ಅಟ್ಟೊಲಾಹಿ ತರಬೇತಿಯಲ್ಲಿ ಪಳಗಿರುವ ಲಗಾರ್ಡ್‌ ಮಂಗಳವಾರ ನಡೆದ ಕಿಂಗ್‌ಫಿಷರ್ ಅಲ್ಟ್ರಾ ಡರ್ಬಿ ರೇಸ್‌ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಜಾಕಿ ಅಕ್ಷಯ್‍ಕುಮಾರ್ ಸವಾರಿ ಮಾಡಿದ ಲಗಾರ್ಡ್‌ ಅಶ್ವವು ಈ ಗೆಲುವಿನೊಂದಿಗೆ ಕ್ಲಾಸಿಕ್ ಹ್ಯಾಟ್ರಿಕ್ ಸಾಧನೆ ಮಾಡಿತು. ಈಗಾಗಲೇ ಬೆಂಗಳೂರು ಮತ್ತು ಮುಂಬೈ 2000 ಗಿನ್ನೀಸ್ ರೇಸ್‌ಗಳನ್ನೂ ಲಗಾರ್ಡ್‌ ಗೆದ್ದಿತ್ತು.

2400 ಮೀಟರ್ಸ್ ದೂರದ ಈ ಡರ್ಬಿಯಲ್ಲಿ 2 ನಿಮಿಷ 32.21 ಸೆಕೆಂಡುಗಳಲ್ಲಿ ‘ಲಗಾರ್ಡ್’ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ಸುಂದರ ಟ್ರೋಫಿಯೊಂದಿಗೆ, ₹.77,56,154 ಗಳನ್ನು ‘ಲಗಾರ್ಡ್’ ತನ್ನದಾಗಿಸಿಕೊಂಡಿದೆ.

ಲಗಾರ್ಡ್‌ ಗೆಲುವು ನಿರೀಕ್ಷಿತವೇ ಆಗಿದ್ದರೂ, ಬೆಟ್ಟಿಂಗ್ ನಿಟ್ಟಿನಲ್ಲಿ ಮುಕ್ತ ರೇಸ್ ಆಗಿತ್ತು. ಲಗಾರ್ಡನ ಸ್ಟೇಬಲ್‍ಮೇಟ್ 5 ರೇಸ್‍ಗಳಲ್ಲಿ ಅಜೇಯವಾಗಿದ್ದ ‘ಫಾರೆಸ್ಟ್ ಫ್ಲೇಮ್’ 5/2 ಆಸುಪಾಸಿನ ಫೇವರಿಟ್ ಆಗಿದ್ದರೆ, ಲಗಾರ್ಡ್ ಎರಡನೇ ಫೇವರಿಟ್ ಆಗಿ 3 ರಿಂದ 7/2 ಆಸುಪಾಸಿನ ಬೇಡಿಕೆಯಲ್ಲಿತ್ತು.

ಲಗಾರ್ಡ್‌ನ ಈ ಗೆಲುವು ಎಂದಿನ ಓಟದ ವೈಖರಿಯಾಗಿರದೆ ಭಿನ್ನ ರೀತಿಯದಾಗಿತ್ತು. 9 ಸ್ಪರ್ಧಿಗಳ ಡರ್ಬಿ ರೇಸ್‍ಗೆ ಚಾಲನೆ ದೊರೆತ ಕೂಡಲೇ ಲಗಾರ್ಡ್ ಮುನ್ನುಗ್ಗಿ ಲೀಡ್ ಪಡೆದು ‘ಸ್ಟಾರ್ಟ್ ಟು ಫಿನಿಷ್’ ಗೆಲುವು ಸಾಧಿಸಿತು.

ಕೊನೆಯ 400 ಮೀಟರ್ಸ್ ನೇರ ಓಟದಲ್ಲಿ ‘ಲಗಾರ್ಡ್’ ತುಸು ಒತ್ತಡದಲ್ಲಿ ಇದ್ದಂತೆ ಕಂಡಿತು. ಆದರೆ, ಜಾಕಿ ಅಕ್ಷಯ್‍ಕುಮಾರ್ ಧೃತಿಗೆಡದೆ ‘ಲಗಾರ್ಡ್’ಗೆ 1 1/2 ಲೆಂಗ್ತ್‌ಗಳ ಗೆಲುವು ಸಂಪಾದಿಸಿಕೊಡುವಲ್ಲಿ ಯಶಸ್ವಿ ಆದರು. ಎರಡನೇ ಸ್ಥಾನಕ್ಕಾಗಿ ನಡೆದ ತೀವ್ರ ಪೈಪೋಟಿಯಲ್ಲಿ ‘ಸಾವರಿನ್ ಲೆಜೆಂಡ್’ ‘ಫಾರೆಸ್ಟ್ ಫ್ಲೇರ್’ನ್ನು ಕೂದಲೆಳೆ ಅಂತರದಿಂದ ಮೂರನೇ ಸ್ಥಾನಕ್ಕೆ ತಳ್ಳಿತು. ‘ಫ್ಲಾರೆಸ್ಟ್ ಫ್ಲೇಮ್’ ನ 2 1/2 ಲೆಂಗ್ತ್ ಹಿಂದೆ ಓಡಿ ‘ಆಂಟೀಸ್’ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT