ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಬ್ಲ್ಯುಎಫ್‌ ವಿಶ್ವ ಜೂನಿಯರ್‌ ಬ್ಯಾಡ್ಮಿಂಟನ್‌: ಸೆಮಿಫೈನಲ್‌ಗೆ ಲಕ್ಷ್ಯಸೇನ್‌

Last Updated 17 ನವೆಂಬರ್ 2018, 16:31 IST
ಅಕ್ಷರ ಗಾತ್ರ

ಮರ್ಖಾಮ್‌, ಕೆನಡಾ: ಭಾರತದ ಲಕ್ಷ್ಯಸೇನ್‌, ಬಿಡಬ್ಲ್ಯುಎಫ್‌ ವಿಶ್ವ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌
ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಲಕ್ಷ್ಯಸೇನ್‌, 21–8, 21–18 ರಿಂದ ಮಲೇಷ್ಯಾದ ಆದಿಲ್‌ ಶೂಲೆ ಅಲಿ ಅವರನ್ನು ಮಣಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಲಕ್ಷ್ಯಸೇನ್‌ 31 ನಿಮಿಷಗಳಲ್ಲಿ ಎದುರಾಳಿಯನ್ನು ಮಣಿಸಿದರು. ಅವರು ನಾಲ್ಕರ ಘಟ್ಟದಲ್ಲಿ ಅಗ್ರ ಶ್ರೇಯಾಂಕದ ಆಟಗಾರ, ಥಾಯ್ಲೆಂಡ್‌ನ ಕುನಲ್‌ವುತ್‌ ವಿಟಿಡ್ಸಾನ್‌ ಅವರನ್ನು ಎದುರಿಸಲಿದ್ದಾರೆ. ಎಂಟರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಕುನಲ್‌ವುತ್‌ 21–14, 21–17ರಿಂದ ಇಂಡೊನೇಷ್ಯಾದ ಆಲ್ಬರ್ಟೊ ಆಲ್ವಿನ್‌ ಅವರನ್ನು ಮಣಿಸಿದರು.

ಭಾರತದ ಜೋಡಿಗೆ ಸೋಲು: ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಭಾರತದ ವಿಷ್ಣುವರ್ಧನ್‌–ಶ್ರೀಕೃಷ್ಣ ಸಾಯಿ ಜೋಡಿ ಸೋಲನುಭವಿಸಿತು. ಕೊರಿಯಾದ ತಾಯ್‌ ಯಾಂಗ್‌ ಶಿನ್‌ ಮತ್ತು ಚಾನ್‌ ವಾಂಗ್‌ 21–11, 21–8ರಿಂದ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT