ಗುರುವಾರ , ನವೆಂಬರ್ 14, 2019
19 °C
ಸೆಮಿಫೈನಲ್‌ನಲ್ಲಿ ಸ್ವದೇಶದ ಕಿರಣ್‌ ಜಾರ್ಜ್ ವಿರುದ್ಧ ಜಯ

ಬ್ಯಾಡ್ಮಿಂಟನ್‌ ಫೈನಲ್‌ಗೆ ಲಕ್ಷ್ಯ ಸೇನ್‌

Published:
Updated:

ಸಾರ್‌ಬ್ರುಕನ್‌, ಜರ್ಮನಿ: ಭಾರತ ವ್ಯವಹಾರವಾಗಿದ್ದ ಸಮಿಫೈನಲ್‌ನಲ್ಲಿ ಲಕ್ಷ್ಯ ಸೇನ್‌ 21–13, 14–21, 21–9 ರಿಂದ ಕಿರಣ್‌  ಜಾರ್ಜ್‌ ಅವರನ್ನು ಸೋಲಿಸಿ ಸಾರ್‌ಲೊರ್‌ಲಕ್ಸ್‌ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯ ಪ್ರಶಸ್ತಿ ಸುತ್ತಿಗೆ ತಲುಪಿದರು.

ಎಂಟನೇ ಶ್ರೇಯಾಂಕ ಪಡೆದಿದ್ದ ಸೆನ್‌, ವಿಶ್ವದ 156ನೇ ಕ್ರಮಾಂಕದ ಜಾರ್ಜ್ ಮೇಲೆ ಜಯಗಳಿಸಲು 37 ನಿಮಿಷ ತೆಗೆದುಕೊಂಡರು. ಸೇನ್‌, ವಿಶ್ವ ಕ್ರಮಾಂಕದಲ್ಲಿ 51ನೇ ಸ್ಥಾನದಲ್ಲಿದ್ದಾರೆ. ಇವರಿಬ್ಬರು ಅಂತರರಾಷ್ಟ್ರೀಯ ಮಟ್ಟದಲ್ಲಿ ಐದು ಬಾರಿ ಮುಖಾಮುಖಿ ಆಗಿದ್ದು, ಸೇನ್‌ ಎಲ್ಲದರಲ್ಲಿ ಜಯಗಳಿದ್ದಾರೆ.
 

ಪ್ರತಿಕ್ರಿಯಿಸಿ (+)