ಮಂಗಳವಾರ, ನವೆಂಬರ್ 19, 2019
27 °C

ಸೆಮಿಫೈನಲ್‌ಗೆ ಲಕ್ಷ್ಯ ಸೇನ್‌

Published:
Updated:
Prajavani

ಲ್ಯುವೆನ್‌, ಬೆಲ್ಜಿಯಂ: ಭಾರತದ ಯುವ ಆಟಗಾರ ಲಕ್ಷ್ಯ ಸೇನ್‌ ಬೆಲ್ಜಿಯನ್‌ ಇಂಟರ್‌ನ್ಯಾಷನಲ್‌ ಚಾಲೆಂಜ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ನೇರ ಗೇಮ್‌ಗಳಿಂದ ಫಿನ್ಲೆಂಡ್‌ನ ಇಟು ಹೀನೊ ಅವರನ್ನು ಸೋಲಿಸಿ ಸೆಮಿಫೈನಲ್‌ ಪ್ರವೇಶಿಸಿದರು.

ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ, ಏಷ್ಯನ್‌ ಜೂನಿಯರ್‌ ಚಾಂಪಿಯನ್‌ ಲಕ್ಷ್ಯ 21–15, 21–10 ರಿಂದ ಜಯಗಳಿಸಿದರು. ಲಕ್ಷ್ಯ ಅವರ ಮುಂದಿನ ಎದುರಾಳಿ ಡೆನ್ಮಾರ್ಕ್‌ನ ಕಿಮ್‌ ಬ್ರುನ್‌.

ಬಿ.ಎಂ.ರಾಹುಲ್‌ ಭಾರದ್ವಾಜ್‌ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ 14–21, 22–24 ರಲ್ಲಿ ಮಾರ್ಕ್ ಕಲ್ಯುವ್‌ ಅವರಿಗೆ ಮಣಿದಿದ್ದರು. ಮಹಿಳೆಯರ ಸಿಂಗಲ್ಸ್‌ ಮೂರನೇ ಸುತ್ತಿನಲ್ಲಿ ಟರ್ಕಿಯ ನೆಸ್ಲಿಹಾನ್‌ ಯಿಜಿಟ್‌ 21–12, 21–16ರಲ್ಲಿ ಭಾರತದ ಶಿಖಾ ಗೌತಮ್‌ ಅವರನ್ನು ಸೋಲಿಸಿದ್ದರು.

ಪ್ರತಿಕ್ರಿಯಿಸಿ (+)