ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಜೂನಿಯರ್ ಬ್ಯಾಡ್ಮಿಂಟನ್: ಎಂಟರ ಘಟ್ಟ ಪ್ರವೇಶಿಸಿದ ಲಕ್ಷ್ಯ ಸೇನ್‌

ವಿಷ್ಣುವರ್ಧನ್‌–ಶ್ರೀಕೃಷ್ಣ ಕ್ವಾರ್ಟರ್‌ಗೆ
Last Updated 16 ನವೆಂಬರ್ 2018, 15:49 IST
ಅಕ್ಷರ ಗಾತ್ರ

ಮರ್ಖಾಮ್‌, ಕೆನಡಾ: ಭಾರತದ ಭರವಸೆಯ ಆಟಗಾರ ಲಕ್ಷ್ಯಸೇನ್‌, ಬಿಡಬ್ಲ್ಯುಎಫ್‌ ವಿಶ್ವ ಜೂನಿಯರ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಗುರುವಾರ ರಾತ್ರಿ ನಡೆದ 16ರ ಘಟ್ಟದ ಪಂದ್ಯದಲ್ಲಿ ಅವರು ಚೀನಾ ತೈಪೆಯ ಚೆನ್‌ ಶ್ಯಾ ಚೆಂಗ್ ಅವರನ್ನು 15–21, 21–17, 21–14ರಿಂದ ಮಣಿಸಿದರು.

ಜುಲೈ ತಿಂಗಳಲ್ಲಿ ಏಷ್ಯಾ ಜೂನಿಯರ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಗೆದ್ದಿದ್ದ ಲಕ್ಷ್ಯ ಸೇನ್‌ಗೆ ಇಲ್ಲಿ ನಾಲ್ಕನೇ ಶ್ರೇಯಾಂಕ ನೀಡಲಾಗಿತ್ತು. ಒಂಬತ್ತನೇ ಶ್ರೇಯಾಂಕಿತ ಚೆಂಗ್, ಒಂದು ತಾಸು ನಡೆದ ಪಂದ್ಯದಲ್ಲಿ ಸೇನ್‌ಗೆ ಭಾರಿ ಪೈಪೋಟಿ ಒಡ್ಡಿದರು. ಆದರೆ ಪಟ್ಟು ಬಿಡದೆ ಕಾದಾಡಿದ ಭಾರತದ ಆಟಗಾರ ಗೆದ್ದು ಸಂಭ್ರಮಿಸಿದರು. ಮುಂದಿನ ಹಂತದಲ್ಲಿ ಅವರು ಮಲೇಷ್ಯಾದ ಆದಿಲ್‌ ಶೊಲೆ ಅಲಿ ಅವರನ್ನು ಎದುರಿಸುವರು.

ವಿಷ್ಣುವರ್ಧನ್‌ – ಶ್ರೀಕೃಷ್ಣ ಜೊಡಿಗೆ ಜಯ: ಪುರುಷರ ಡಬಲ್ಸ್ ವಿಭಾಗದಲ್ಲಿ ವಿಷ್ಣುವರ್ಧನ್‌ ಗೌಡ್‌ ಮತ್ತು ಶ್ರೀಕೃಷ್ಣ ಸಾಯಿ ಕುಮಾರ್ ಜೋಡಿ 21–11, 21–17ರಿಂದ ಇಂಡೊನೇಷ್ಯಾದ ದ್ವಿಕಿ ರಫಿಯಾನ್‌ ಮತ್ತು ಬೆರ್ನಾಡಸ್‌ ಬಗಾಸ್‌ ಕುಸುಮವರ್ಧನ ಅವರನ್ನು ಸೋಲಿಸಿದರು. ಈ ಮೂಲಕ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಎಂಟರ ಘಟ್ಟದಲ್ಲಿ ಭಾರತದ ಜೋಡಿ ಕೊರಿಯಾದ ತಾಯ್‌ ಯಾಂಗ್‌ ಶಿನ್ ಮತ್ತು ಚಾನ್‌ ವಾಂಗ್‌ ಅವರನ್ನು ಎದುರಿಸುವರು.

ಪುರುಷರ ಸಿಂಗಲ್ಸ್‌ನ ಇತರ ಪಂದ್ಯಗಳಲ್ಲಿ ಭಾರತದ ಪ್ರಿಯಾಂಶು ರಾಜವತ್‌, ಆಲಾಪ್‌ ಮಿಶ್ರಾ ಮತ್ತು ಕಿರಣ್‌ ಜಾರ್ಜ್‌ ಮೂರನೇ ಸುತ್ತಿನಲ್ಲಿ ಸೋತರು. ಮಾಳವಿಕ ಬನಸೂದ್‌ ಮೊದಲ ಸುತ್ತಿನಲ್ಲೂ ಗಾಯತ್ರಿ ಗೋಪಿಚಂದ್‌ ಎರಡನೇ ಸುತ್ತಿನಲ್ಲೂ ಸೋತರು. ಮೊದಲ ಸುತ್ತಿನಲ್ಲಿ ಬೈ ಲಭಿಸಿದ್ದ ಎಂಟನೇ ಶ್ರೇಯಾಂಕದ ಪುರವ ಬರ್ವೆ ಮೂರನೇ ಸುತ್ತಿನಲ್ಲಿ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT