ದೆಹಲಿ ರಣಜಿ ತಂಡಕ್ಕೆ ಕ್ಲುಸ್ನರ್‌ ಸಲಹೆಗಾರ

7

ದೆಹಲಿ ರಣಜಿ ತಂಡಕ್ಕೆ ಕ್ಲುಸ್ನರ್‌ ಸಲಹೆಗಾರ

Published:
Updated:

ನವದೆಹಲಿ: ದಕ್ಷಿಣ ಆಫ್ರಿಕಾದ ಹಿರಿಯ ಕ್ರಿಕೆಟಿಗ ಲ್ಯಾನ್ಸ್‌ ಕ್ಲುಸ್ನರ್‌ ಅವರು 2018–19ರ ಋತುವಿನ ದೆಹಲಿ ರಣಜಿ ತಂಡದ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ. 

‘ಇದೇ ತಿಂಗಳ 19ರಿಂದ ಆರಂಭವಾಗುವ ವಿಜಯ್‌ ಹಜಾರೆ ಹಾಗೂ ದಿಯೋಧರ್‌ ಟ್ರೋಫಿ ಹಾಗೂ 2019ರಲ್ಲಿ ನಡೆಯುವ ದೇಸಿ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಗಾಗಿ ದೆಹಲಿ ರಣಜಿ ತಂಡದ ಸಲಹೆಗಾರರಾಗಿ ಲ್ಯಾನ್ಸ್‌ ಕ್ಲುಸ್ನರ್‌ ಅವರು ಕಾರ್ಯನಿರ್ವಹಿಸಲಿದ್ದಾರೆ’ ಎಂದು ದೆಹಲಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆ (ಡಿಡಿಸಿಎ)ಯ ಅಧ್ಯಕ್ಷ ರಜತ್‌ ಶರ್ಮಾ ಹೇಳಿದ್ದಾರೆ. 

‘ಮಿಥುನ್‌ ಮನ್ಹಾಸ್‌ ಅವರೇ ತಂಡದ ಮುಖ್ಯ ಕೋಚ್‌ ಆಗಿ ಮುಂದುವರಿಯಲಿದ್ದಾರೆ’ ಎಂದು ಅವರು ತಿಳಿಸಿದ್ದಾರೆ. 

46 ವರ್ಷದ ಕ್ಲುಸ್ನರ್‌ ಅವರು ದಕ್ಷಿಣ ಆಫ್ರಿಕಾದ ಪರವಾಗಿ 49 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಇವುಗಳಲ್ಲಿ ಒಟ್ಟು 1906 ರನ್‌ ಗಳಿಸಿದ್ದಾರೆ. 80 ವಿಕೆಟ್‌ಗಳನ್ನು ಪಡೆದಿದ್ದಾರೆ. 171 ಏಕದಿನ ಪಂದ್ಯಗಳಲ್ಲಿ 3576 ರನ್‌ ದಾಖಲಿಸಿದ್ದು, 192 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !