ಪವರ್‌ ಲಿಫ್ಟರ್‌ಗೆ ರಜೆ ಸಮಸ್ಯೆ

7

ಪವರ್‌ ಲಿಫ್ಟರ್‌ಗೆ ರಜೆ ಸಮಸ್ಯೆ

Published:
Updated:

ಮಂಗಳೂರು: ಇದೇ 18ರಿಂದ 24 ವರೆಗೆ ದುಬೈನಲ್ಲಿ ನಡೆಯಲಿರುವ ಏಷ್ಯನ್‌ ಬೆಂಚ್‌ಪ್ರೆಸ್‌ ಪವರ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅಬಕಾರಿ ಇಲಾಖೆಯ ಇಬ್ಬರು ಸಿಬ್ಬಂದಿಗೆ ರಜೆಯ ಸಮಸ್ಯೆ ಎದುರಾಗಿದೆ.

ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ವಲಯದಲ್ಲಿ ಅಬಕಾರಿ ಇಲಾಖೆ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸತೀಶ್‌ಕುಮಾರ್‌ ಕುದ್ರೋಳಿ ತರಬೇತುದಾರರಾಗಿದ್ದು, ಮಂಗಳೂರಿನ ಅಬಕಾರಿ ಜಂಟಿ ಆಯುಕ್ತರ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ವಿನ್ಸಂಟ್‌ ಪ್ರಕಾಶ್‌ ಕಾರ್ಲೋ ಸ್ಪರ್ಧಿಯಾಗಿದ್ದಾರೆ. ಅವರಿಗೆ ಇಲಾಖೆ ರಜೆ ಹಾಗೂ ಅನುಮತಿ ನೀಡುವಂತೆ ಕರ್ನಾಟಕ ಪವರ್‌ ಲಿಫ್ಟಿಂಗ್‌ ಅಸೋಶಿಯೇಷನ್‌ ಉಪಾಧ್ಯಕ್ಷ ಪುರಂದರದಾಸ್‌ ಕೂಳೂರು ಒತ್ತಾಯಿಸಿದ್ದಾರೆ.

ಆಯ್ಕೆಯಾಗಿರುವ ಇಬ್ಬರು ಸಿಬ್ಬಂದಿ ಸಾಕಷ್ಟು ಮೊದಲೇ ರಜೆ ಹಾಗೂ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದರೂ ಇಲಾಖೆಯಿಂದ ಸ್ಪಷ್ಟವಾದ ಮಾಹಿತಿ ಬಾರದೇ ಇರುವುದರಿಂದ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸದೇ ಇರುವಂತಹ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಭಾರತ ತಂಡ ಪ್ರತಿನಿಧಿಸಲಿರುವ ಈ ಇಬ್ಬರು ಸಿಬ್ಬಂದಿಗೆ ಇಲಾಖೆ ಕೂಡಲೇ ರಜೆ ಹಾಗೂ ಅನುಮತಿ ಆದೇಶ ಪತ್ರವನ್ನು ನೀಡುವಂತೆ ಮುಖ್ಯಮಂತ್ರಿ, ಕ್ರೀಡಾ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಕಾರ್ಯದರ್ಶಿಗೆ ಇಮೇಲ್‌ ಮೂಲಕ ಮನವಿ ಪತ್ರ ರವಾನೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !