ಬ್ಯಾಡ್ಮಿಂಟನ್‌: ಲೀ ಚಾಂಗ್‌ಗೆ ಪ್ರಶಸ್ತಿ

7
ಮಲೇಷ್ಯಾ ಓಪನ್‌ ಟೂರ್ನಿ: ಐತಿಹಾಸಿಕ ಸಾಧನೆ ಮಾಡಿದ ಸ್ಥಳೀಯ ಆಟಗಾರ

ಬ್ಯಾಡ್ಮಿಂಟನ್‌: ಲೀ ಚಾಂಗ್‌ಗೆ ಪ್ರಶಸ್ತಿ

Published:
Updated:
ಲೀ ಚಾಂಗ್‌ ವೀ ಅವರು ಶಟಲ್‌ ಅನ್ನು ಹಿಂದಿರುಗಿಸಿದರು    ಪಿಟಿಐ ಚಿತ್ರ

ಕ್ವಾಲಾಲಂಪುರ: ಮಲೇಷ್ಯಾದ ಆಟಗಾರ ಲೀ ಚಾಂಗ್‌ ವೀ ಅವರು ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. 

ಭಾನುವಾರ ನಡೆದ ಸಿಂಗಲ್ಸ್‌ ವಿಭಾಗದ ‍ಪಂದ್ಯದಲ್ಲಿ ಅವರು ಜಪಾನ್‌ನ ಕೆಂಟೊ ಮೊಮೊಟಾ ಅವರನ್ನು 21–17, 23–21ರಿಂದ ಮಣಿಸಿದರು. ಈ ಮೂಲಕ 12ನೇ ಬಾರಿಗೆ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಸೋಲಿನೊಂದಿಗೆ ಸತತ 22ನೇ ಪಂದ್ಯ ಜಯಿಸುವ ಕೆಂಟೊ ಅವರ ಆಸೆಯು ಕಮರಿ ಹೋಯಿತು. 

ಏಪ್ರಿಲ್‌ನಲ್ಲಿ ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಮೊಮೊಟಾ ಅವರು ಲೀ ಅವರನ್ನು ಸೋಲಿಸಿದ್ದರು. 

ಪಂದ್ಯದ ಆರಂಭದಿಂದಲೂ ಬಿರುಸಿನ ಆಟಕ್ಕಿಳಿದ ಆತಿಥೇಯ ರಾಷ್ಟ್ರದ ಆಟಗಾರನ ಸವಾಲನ್ನು ಮೀರಲು ಕೆಂಟೊ ಅವರು ವಿಫಲವಾದರು. 

35 ವರ್ಷದ ಲೀ ಅವರಿಗೆ 23 ವರ್ಷದ ಕೆಂಟೊ ಅವರು ಎರಡನೇ ಗೇಮ್‌ನಲ್ಲಿ ತೀವ್ರ ಪೈಪೋಟಿ ನೀಡಿದರು. ಆದರೆ, ತಾವೇ ಮಾಡಿದ ಕೆಲವು ತಪ್ಪುಗಳಿಂದಾಗಿ ಪಾಯಿಂಟ್‌ಗಳನ್ನು ಕಳೆದುಕೊಂಡರು. 

ಪಂದ್ಯದುದ್ದಕ್ಕೂ ಮನಮೋಹಕ ಸ್ಮ್ಯಾಷ್‌ ಹಾಗೂ ರಿಟರ್ನ್‌ಗಳಿಂದ ಲೀ ಅವರು ಗಮನಸೆಳೆದರು. 

ಪಂದ್ಯದ ನಂತರ ಮಾತನಾಡಿದ ಕೆಂಟೊ, ‘ವಯಸ್ಸಿನಲ್ಲಿ ನನಗಿಂತ 12 ವರ್ಷ ದೊಡ್ಡವರಿರುವ ಲೀ ಅವರು ಅದ್ಭುತ ಆಟವಾಡಿದರು. ವಯಸ್ಸು ಅವರಲ್ಲಿನ ಸಾಮರ್ಥ್ಯವನ್ನು ಕುಂದಿಸಿಲ್ಲ. ಪುರುಷ ಬ್ಯಾಡ್ಮಿಂಟನ್‌ ಜಗತ್ತಿನ ಶ್ರೇಷ್ಠ ಆಟಗಾರ ಅವರು’ ಎಂದು ಲೀ ಅವರನ್ನು ಶ್ಲಾಘಿಸಿದ್ದಾರೆ.

ತೈ ಜು ಯಿಂಗ್‌ಗೆ ಜಯ: ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ತೈವಾನ್‌ನ ತೈ ಜು ಯಿಂಗ್‌ ಅವರು ಜಯಿಸಿದ್ದಾರೆ. 

ಅಗ್ರ ಶ್ರೇಯಾಂಕದ ಆಟಗಾರ್ತಿಯು ಚೀನಾದ ಹಿ ಬಿಂಗ್‌ಜಿಯಾವೊ ಅವರನ್ನು 22–20, 21–11ರಿಂದ ಮಣಿಸಿದರು. 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !