ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್: ಲಿಯೋನ್ ಮೆಂಡೊನ್ಕಾಗೆ ಪ್ರಶಸ್ತಿ

Last Updated 26 ಮಾರ್ಚ್ 2021, 13:19 IST
ಅಕ್ಷರ ಗಾತ್ರ

ಚೆನ್ನೈ: ಚುರುಕಿನ ಆಟವಾಡಿದ ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್‌ ಲಿಯೋನ್‌ ಲ್ಯೂಕ್ ಮೆಂಡೊನ್ಕಾ, ಹಂಗರಿಯ ಕಿಸುಜಲ್ಲಾಸ್‌ನಲ್ಲಿ ನಡೆದ ಎರಡನೇ ಕುಮಾನಿಯಾ ಜಿಎಂ ಚೆಸ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದರು. ಗುರುವಾರ ಕೊನೆಗೊಂಡ ಟೂರ್ನಿಯ ಒಂಬತ್ತು ಸುತ್ತುಗಳಲ್ಲಿ 6.5 ಪಾಯಿಂಟ್ಸ್ ಕಲೆಹಾಕಿದ ಅವರು ಅಗ್ರಸ್ಥಾನ ಗಳಿಸಿದರು.

ಗೋವಾದ 15 ವರ್ಷದ ಲಿಯೋನ್‌, ಕಳೆದ ವರ್ಷದ ಡಿಸೆಂಬರ್‌ನಲ್ಲಿ ಭಾರತದ 67ನೇ ಗ್ರ್ಯಾಂಡ್‌ಮಾಸ್ಟರ್ ಎನಿಸಿಕೊಂಡಿದ್ದರು. ಈ ಟೂರ್ನಿಯಲ್ಲಿ ಅವರು ಐದು ಸುತ್ತುಗಳಲ್ಲಿ ಡ್ರಾ ಹಾಗೂ ನಾಲ್ಕರಲ್ಲಿ ಗೆಲುವು ಸಾಧಿಸಿದ್ದರು.

‘ವಿಶ್ವ ಸ್ಕೂಲ್ ಆನ್‌ಲೈನ್ ಟೂರ್ನಿಗಳಲ್ಲಿನಿರಂತರವಾಗಿ ಭಾಗವಹಿಸಿದ್ದರೂ, ಇಲ್ಲಿ ಪ್ರಶಸ್ತಿ ಗಳಿಸಿರುವುದು ಖುಷಿಯ ಕ್ಷಣ‘ ಎಂದು ಮೆಂಡೊನ್ಕಾ ಹೇಳಿದರು. ಟೂರ್ನಿಯಲ್ಲಿ ಐದು ಯುವ ಗ್ರ್ಯಾಂಡ್‌ಮಾಸ್ಟರ್‌ಗಳನ್ನು ಅವರು ಹಿಂದಿಕ್ಕಿದರು.

ಟೂರ್ನಿಯಲ್ಲಿ ಮೆಂಡೊನ್ಕಾ (ಇಎಲ್‌ಒ ರೇಟಿಂಗ್ 2532) ಹಾಗೂ ಸ್ಲೋವೆಕಿಯಾದ ಮಿಲಾನ್‌ ಪ್ಯಾಚೆರ್‌ ಸಮನಾದ ಪಾಯಿಂಟ್ಸ್ ಗಳಿಸಿದ್ದರು. ಆದರೆ ಟೈಬ್ರೇಕ್‌ನಲ್ಲಿ ಗಳಿಸಿದ ಉತ್ತಮ ಸ್ಕೋರ್ ಆಧಾರದಲ್ಲಿ ಲಿಯೋನ್‌ ಅವರಿಗೆ ಪ್ರಶಸ್ತಿ ಒಲಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT