ಭಾನುವಾರ, ಜುಲೈ 25, 2021
24 °C

ಆಸ್ಟ್ರಿಯನ್ ಗ್ರ್ಯಾನ್‌ ಪ್ರಿ ಮೋಟರ್ ರೇಸ್: ಅಭ್ಯಾಸದಲ್ಲಿ ಮಿಂಚಿದ ಹ್ಯಾಮಿಲ್ಟನ್

ಎಪಿ Updated:

ಅಕ್ಷರ ಗಾತ್ರ : | |

Prajavani

ಸ್ಪಿಲ್‌ಬರ್ಗ್‌, ಆಸ್ಟ್ರಿಯಾ: ಆಸ್ಟ್ರಿಯನ್‌ ಗ್ರ್ಯಾನ್‌ ಪ್ರಿ ಮೋಟರ್‌ ರೇಸ್‌ನಲ್ಲಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಹಾಲಿ ಫಾರ್ಮುಲಾ ಒನ್‌ ವಿಶ್ವ ಚಾಂಪಿಯನ್‌ ಲೂಯಿಸ್‌ ಹ್ಯಾಮಿಲ್ಟನ್‌ ಅವರು ಅಭ್ಯಾಸದಲ್ಲಿ ಮಿಂಚಿನ ಸಾಮರ್ಥ್ಯ ತೋರಿದ್ದಾರೆ.

ರೆಡ್‌ಬುಲ್‌ ರೇಸಿಂಗ್‌ ಸರ್ಕ್ಯೂಟ್‌ನಲ್ಲಿ ಶುಕ್ರವಾರ ನಡೆದ ಎರಡೂ ಸುತ್ತಿನ ತಾಲೀಮಿನಲ್ಲೂ ಮರ್ಸಿಡೀಸ್‌ ತಂಡದ ಚಾಲಕ ಹ್ಯಾಮಿಲ್ಟನ್‌ ಅವರು ಅತಿ ವೇಗವಾಗಿ ಗುರಿ ಮುಟ್ಟಿ ಗಮನ ಸೆಳೆದಿದ್ದಾರೆ.

ಮರ್ಸಿಡೀಸ್‌ ತಂಡದ ಮತ್ತೊಬ್ಬ ಚಾಲಕ ವಲಟ್ಟೆರಿ ಬೊಟ್ಟಾಸ್ ಎರಡನೇಯವರಾಗಿ ಸ್ಪರ್ಧೆ ಕೊನೆಗೊಳಿಸಿದರು. ರೆಡ್‌ಬುಲ್‌ ತಂಡದ ಚಾಲಕ ಮ್ಯಾಕ್ಸ್‌ ವರ್ಸ್ಟಾಪನ್,‌ ಮೊದಲ ರೇಸ್‌ನಲ್ಲಿ ಮೂರನೇಯವರಾಗಿ ಗುರಿ ಸೇರಿದರು. ಆದರೆ ಎರಡನೇ ರೇಸ್‌ನಲ್ಲಿ ಅವರು ಎಂಟನೇ ಸ್ಥಾನಕ್ಕೆ ಕುಸಿದರು. ಮ್ಯಾಕ್ಸ್‌ ಅವರು ಈ ರೇಸ್‌ನಲ್ಲಿ ಎರಡು ಬಾರಿ ಚಾಂಪಿಯನ್‌ ಆಗಿದ್ದಾರೆ. 

ಮೊದಲ ರೇಸ್‌ನಲ್ಲಿ 12ನೇಯವರಾಗಿ ಗುರಿ ತಲುಪಿದ್ದ ಫೆರಾರಿ ತಂಡದ ಸೆಬಾಸ್ಟಿಯನ್‌ ವೆಟಲ್‌ ಅವರು ಎರಡನೇ ರೇಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದರು. ಸ್ಪರ್ಧೆಯನ್ನು ನೋಡಲು ಪ್ರೇಕ್ಷಕರಿಗೆ ಅವಕಾಶ ಇರಲಿಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು