ಶುಕ್ರವಾರ, ಜುಲೈ 1, 2022
23 °C

ಹಾಕಿ: ಟೋಕಿಯೊದಲ್ಲಿ ಆಡುವ ಭರವಸೆ ಇದೆ– ಲಾಲಿಮಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಯುವ ಪ್ರತಿಭೆಗಳು ಉತ್ತಮ ಲಯದಲ್ಲಿರುವುದರಿಂದ ಒಲಿಂಪಿಕ್ಸ್ ಅರ್ಹತೆಗೆ ಭಾರತ ಹಾಕಿ ತಂಡದಲ್ಲಿ ಆರೋಗ್ಯಕರ ಸ್ಪರ್ಧೆ ಇದೆ. ಆದರೂ ಟೋಕಿಯೊದಲ್ಲಿ ಆಡುವ ಭರವಸೆ ಇದೆ ಎಂದು ಅನುಭವಿ ಮಿಡ್‌ಫೀಲ್ಡರ್ ಲಾಲಿಮಾ ಮಿನೆಜ್ ಅಭಿಪ್ರಾಯಪಟ್ಟಿದ್ದಾರೆ. 

ಭಾರತ ಕ್ರೀಡಾ ಪ್ರಾಧಿಕಾರದ ಬೆಂಗಳೂರು ಕೇಂದ್ರದಲ್ಲಿ ಭಾರತ ಪುರುಷ ಮತ್ತು ಮಹಿಳಾ ತಂಡಗಳ ಅಭ್ಯಾಸ ನಡೆಯುತ್ತಿದೆ. ಮಿಡ್‌ಫೀಲ್ಡ್ ವಿಭಾಗದ ಶಕ್ತಿ ಎನಿಸಿರುವ ಲಾಲಿಮಾ 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಆಡಿದ್ದರು. 36 ವರ್ಷಗಳ ಬಳಿಕ ಭಾರತ ಮಹಿಳಾ ತಂಡ ಆ ವರ್ಷ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿತ್ತು. ಈ ವರೆಗೆ 133 ಪಂದ್ಯಗಳಲ್ಲಿ ಆಡಿದ್ದಾರೆ.

‘ರಾಷ್ಟ್ರೀಯ ಶಿಬಿರದಲ್ಲಿ ಈಗ ಅನೇಕ ಪ್ರತಿಭಾವಂತ ಯುವ ಆಟಗಾರ್ತಿಯರು ಇದ್ದಾರೆ. ಹೀಗಾಗಿ ಅತ್ಯುತ್ತಮ ಆಟಗಾರ್ತಿಯರು ಮಾತ್ರ ಒಲಿಂಪಿಕ್ಸ್‌ಗೆ ಆಯ್ಕೆಯಾಗಲಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಆಡುವುದು ಪ್ರತಿಯೊಬ್ಬರ ಕನಸಾಗಿದ್ದು ಎಲ್ಲರೂ ಉತ್ತಮ ಸಾಮರ್ಥ್ಯ ಮೆರೆಯಲು ಪ್ರಯತ್ನಿಸುತ್ತಿದ್ದಾರೆ‘ ಎಂದು ಒಡಿಶಾದ ಸುಂದರ್‌ಘರ್‌ ಜಿಲ್ಲೆಯವರಾದ 27 ವರ್ಷದ ಲಾಲಿಮಾ ಹೇಳಿದ್ದಾರೆ.

‘ಒಲಿಂಪಿಕ್ಸ್‌ಗೆ ತೆರಳುವ ತಂಡದಲ್ಲಿ ಅನುಭವಿ ಮತ್ತು ಯುವ ಆಟಗಾರ್ತಿಯರ ಮಿಶ್ರಣ ಇರುವ ಸಾಧ್ಯತೆ ಇದೆ. ಕಳೆದ ಒಲಿಂಪಿಕ್ಸ್‌ನಲ್ಲಿ ಆಡಿದ್ದ ಅನೇಕರು ಶಿಬಿರದಲ್ಲಿದ್ದಾರೆ. ಇದು ತಂಡಕ್ಕೆ ಶಕ್ತಿಯನ್ನೂ ಒದಗಿಸಿದೆ’ ಎಂದು ಅವರು ನುಡಿದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು