ಶುಕ್ರವಾರ, 19 ಏಪ್ರಿಲ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲಾಪುರ: ಬಾವುಟ ಕಟ್ಟುವ ವಿಷಯಕ್ಕೆ ಎರಡು ಸಮಾಜದವರ ನಡುವೆ ಜಗಳ, ಪ್ರಕ್ಷುಬ್ಧ ವಾತಾವರಣ

Last Updated 19 ಫೆಬ್ರುವರಿ 2018, 10:02 IST
ಅಕ್ಷರ ಗಾತ್ರ

ಹೊಸಪೇಟೆ: ಬಾವುಟ ಕಟ್ಟುವ ವಿಷಯಕ್ಕೆ ಹಿಂದೂ– ಮುಸ್ಲಿಂ ಸಮಾಜದವರ ನಡುವೆ ತಾಲ್ಲೂಕಿನ ಕಮಲಾಪುರದಲ್ಲಿ ಸೋಮವಾರ ಜಗಳವಾಗಿದ್ದು, ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಪ್ರಯುಕ್ತ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತನೊಬ್ಬ ಧ್ವಜ ಕಟ್ಟಲು ಹೋಗಿದ್ದ. ಈ ವೇಳೆ ಮುಸ್ಲಿಂ ಸಮಾಜದವರು ಆತನನ್ನು ಥಳಿಸಿದ್ದಾರೆ. ಈ ವಿಷಯ ಮೆರವಣಿಗೆಯಲ್ಲಿದ್ದ ವೇದಿಕೆಯ ಕಾರ್ಯಕರ್ತರಿಗೆ ತಿಳಿದು ಅವರು ಮಸೀದಿ ಮೇಲೆ ಕಲ್ಲು ಎಸೆದು ಗಾಜು ಪುಡಿ ಮಾಡಿದ್ದಾರೆ. ಇದರಿಂದ ಇದು ವಿಕೋಪಕ್ಕೆ ಹೋಗಿ ಇಬ್ಬರು ಪರಸ್ಪರ ಕಾದಾಟಕ್ಕೆ ಇಳಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಉಪವಿಭಾಗಾಧಿಕಾರಿ ಗಾರ್ಗಿ ಜೈನ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚುವರಿ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಹಿಂದೂ ಹಾಗೂ ಮುಸ್ಲಿಂ ಯುವಕರು ದೊಣ್ಣೆ ಹಿಡಿದುಕೊಂಡು ರಾಜಾರೋಷವಾಗಿ ಓಡಾಡುತ್ತಿದ್ದಾರೆ.

ಮಸೀದಿ ಮೇಲೆ ಕಲ್ಲು ಎಸೆದವರನ್ನು ಬಂಧಿಸಲು ಆಗ್ರಹಿಸಿ ಮುಸ್ಲಿಂ ಸಮಾಜದ ಯುವಕರು ಹೊಸಪೇಟೆ- ಕಂಪ್ಲಿ ಮುಖ್ಯರಸ್ತೆಯಲ್ಲಿ ರಸ್ತೆತಡೆ ಚಳವಳಿ ನಡೆಸುತ್ತಿದ್ದಾರೆ. ಪೊಲೀಸರು ಎಷ್ಟೇ ಮನವಿ ಮಾಡಿದರೂ ಪ್ರತಿಭಟನೆ ಕೈಬಿಡಲು ನಿರಾಕರಿಸುತ್ತಿದ್ದಾರೆ. ಇದರಿಂದಾಗಿ ಹಂಪಿಗೆ ಹೋಗುವ ಪ್ರವಾಸಿಗರಿಗೆ ಪ್ರತಿಭಟನೆಯ ಬಿಸಿ ತಟ್ಟಿದೆ.

ಉಪವಿಭಾಗಾಧಿಕಾರಿ ಗಾರ್ಗಿ ಜೈನ್ ಅವರ ಮನವಿಗೆ ಸ್ಪಂದಿಸದ ಪ್ರತಿಭಟನಾಕಾರರು ರಸ್ತೆತಡೆ ಮುಂದುವರಿಸಿದ್ದಾರೆ. ಶಿವಮೊಗ್ಗ, ರಾಯಚೂರು ಕಡೆಗೆ ಹೋಗುವ ವಾಹನಗಳು ಸಾಲುಗಟ್ಟಿ ನಿಂತಿವೆ. ಪ್ರಯಾಣಿಕರು ಪರದಾಡುವಂತಾಗಿದೆ. ಘಟನೆಗೆ ಕಾರಣವಾದ ದೃಶ್ಯವಾಳಿಗಳನ್ನು ಉಪವಿಭಾಗಾಧಿಕಾರಿ ಪರಿಶೀಲಿಸುತ್ತಿದ್ದಾರೆ.

ಘಟನೆಗೆ ಕಾರಣವಾದ ದೃಶ್ಯವಾಳಿಗಳನ್ನು ಉಪವಿಭಾಗಾಧಿಕಾರಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT