ಮಂಗಳವಾರ, ಆಗಸ್ಟ್ 20, 2019
27 °C

ಬ್ಯಾಡ್ಮಿಂಟನ್: ಸೆಮಿಗೆ ತೇಜಸ್‌

Published:
Updated:
Prajavani

ಬೆಂಗಳೂರು: ಅಗ್ರಶ್ರೇಯಾಂಕದ ಆಟಗಾರ ತೇಜಸ್‌ ಸಂಜಯ್‌ ಕಲ್ಲೋಳಕರ್‌ ಅವರು ಎಂ.ಎಸ್‌.ರಾಮಯ್ಯ ಆನಂದಾಶ್ರಮ ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಮಂಗಳವಾರ ನಡೆದ 19 ವರ್ಷದೊಳಗಿನವರ ಬಾಲಕರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ತೇಜಸ್‌ 21–11, 21–14ರಲ್ಲಿ ಬಿ.ಎಸ್‌.ವೈಭವ್‌ ಎದುರು ಗೆದ್ದರು.

ಇತರ ಪಂದ್ಯಗಳಲ್ಲಿ ಎಚ್‌.ಎನ್‌.ಶಶಾಂಕ್‌ 21–19, 21–14ರಲ್ಲಿ ಶ್ರೀಕರ್‌ ರಾಜೇಶ್‌ ಎದುರೂ, ಕೆ.ಪೃಥ್ವಿ ರಾಯ್‌ 21–19, 21–14ರಲ್ಲಿ ಪಿ.ಮೋಹಿತ್‌ ಗೌಡ ಮೇಲೂ, ಎಸ್‌.ಭಾರ್ಗವ್‌ 21–12, 22–20ರಲ್ಲಿ ಸನೀತ್‌ ವಿರುದ್ಧವೂ ಗೆದ್ದರು.

ಡಬಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಹಣಾಹಣಿಗಳಲ್ಲಿ  ಎಚ್‌.ವಿ.ನಿತಿನ್‌ ಮತ್ತು ಎಸ್‌.ಭಾರ್ಗವ್‌ 21–10, 21–16ರಲ್ಲಿ ಎನ್‌.ಕುಶಾಲ್‌ ರಾಜ್‌ ಮತ್ತು ನಿತಿನ್‌ ನಾರಾಯಣ ಎದುರೂ, ಎಸ್‌.ಚಿರಂಜೀವಿ ರೆಡ್ಡಿ ಮತ್ತು ವಿಶೇಷ್‌ ಶರ್ಮಾ 21–9, 21–16ರಲ್ಲಿ ಗಗನ್‌ ದೀಪ್‌ ಮತ್ತು ಎಸ್‌.ತೇಜಸ್‌ ಮೇಲೂ, ಸಿ.ಎಸ್‌.ಸಾಕೇತ್‌ ಮತ್ತು ತೇಜಸ್‌ ಸಂಜಯ್‌ ಕಲ್ಲೋಳಕರ್‌ 21–16, 21–14ರಲ್ಲಿ ಅಭಿಮಾನ್‌ ಅಂಡೆಕುಳಿ ಮತ್ತು ಪಿ.ಎಂ.ರಾಘವೇಂದ್ರ ವಿರುದ್ಧವೂ, ಕೆ.ಎನ್‌.ಪುನೀತ್‌ ಮತ್ತು ಎಂ.ಸಾಕೇತ್‌ 21–15, 19–21, 21–13ರಲ್ಲಿ ದೇವದತ್ತ ಹಾನಗಲ್‌ ಮತ್ತು ವಿ.ಸುಹಾಸ್‌ ಎದುರೂ ಗೆದ್ದು ನಾಲ್ಕರ ಘಟ್ಟ ಪ್ರವೇಶಿಸಿದರು.

19 ವರ್ಷದೊಳಗಿನವರ ಬಾಲಕಿಯರ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ವಿಜೇತಾ ಹರೀಶ್ 21–14, 21–18ರಲ್ಲಿ ಅಗ್ರಶ್ರೇಯಾಂಕದ ಆಟಗಾರ್ತಿ ಅನನ್ಯ ಪ್ರವೀಣ್‌ಗೆ ಆಘಾತ ನೀಡಿದರು.

ಅನುಷ್ಕಾ ಗಣೇಶ್‌ 21–9, 17–21, 21–9ರಲ್ಲಿ ವರ್ಷಾ ವಿನೀತ್‌ ಭಟ್‌ ಎದುರೂ, ಡಿ.ಶೀತಲ್‌ 21–17, 21–12ರಲ್ಲಿ ಜಾಹ್ನವಿ ಜೆ.ಶೆಟ್ಟಿ ಮೇಲೂ, ಮೇಧಾ ಶಶಿಧರನ್‌ 21–6, 21–8ರಲ್ಲಿ ವಿಭಾ ಕೌಡುನ್ಯ ವಿರುದ್ಧವೂ ವಿಜಯಿಯಾದರು.

ಡಬಲ್ಸ್‌ ವಿಭಾಗದ ಎಂಟರ ಘಟ್ಟದ ಹಣಾಹಣಿಗಳಲ್ಲಿ ದೀತ್ಯಾ ಮತ್ತು ರಮ್ಯಾ ವೆಂಕಟೇಶ್‌ 21–8, 21–13ರಲ್ಲಿ ರೈನಾ ಅರ್ಷೀನ್‌ ಮತ್ತು ಸಮಿಕಾ ಎನ್‌.ಸಿಂಗ್‌ ಎದುರೂ, ಜಯಶ್ರೀ ಗೋಪಾಲ್‌ ಮತ್ತು ಪ್ರಾಚಿತಾ ಪದ್ಮನಾಭ 21–15, 21–16ರಲ್ಲಿ ಸ್ತುತಿ ಮಹೇಶ್‌ ಮತ್ತು ದಿಶಾ ಉತ್ತಯ್ಯ ಮೇಲೂ, ಕಿಶಾ ಕೊಠಾರಿ ಮತ್ತು ಸೃಷ್ಠಿ ನಿತಿನ್‌ ಮೊಘೆ 21–9, 21–6ರಲ್ಲಿ ತಮನ್ನ ರಾತುರಿ ಮತ್ತು ಪರ್ಲ್‌ ಶರ್ಮಾ ವಿರುದ್ಧವೂ ಗೆದ್ದರು.

Post Comments (+)