ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿ: ಸೇಂಟ್‌ ಅಂಥೋನಿ ಕಾಲೇಜಿಗೆ ಪ್ರಶಸ್ತಿ

Last Updated 30 ಸೆಪ್ಟೆಂಬರ್ 2022, 13:23 IST
ಅಕ್ಷರ ಗಾತ್ರ

ಬೆಂಗಳೂರು: ಸೇಂಟ್ ಅಂಥೋನಿ ಕಾಲೇಜಿನ ಬಾಲಕ ಮತ್ತು ಬಾಲಕಿಯರ ತಂಡಗಳು ಇಲ್ಲಿ ನಡೆದ ಜಿಲ್ಲಾಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡವು.

ಪಿಇಎಸ್‌ ಕಾಲೇಜು ಮತ್ತು ಬೆಂಗಳೂರು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ವಿದ್ಯಾಪೀಠ ವೃತ್ತದ ಬಳಿಯ ಶಂಕರ್‌ನಾಗ್ ಕ್ರೀಡಾಂಗಣದಲ್ಲಿ ಇತ್ತೀಚಿಗೆ ಟೂರ್ನಿ ನಡೆದಿತ್ತು.

ಫೈನಲ್‌ನಲ್ಲಿ ಸೇಂಟ್‌ ಅಂಥೋನಿ ಬಾಲಕರ ತಂಡವು ಬಿಇಎಸ್‌ ಕಾಲೇಜು ತಂಡವನ್ನು ಮಣಿಸಿತು. ಬಾಲಕಿಯರ ವಿಭಾಗದಲ್ಲಿ ಎಚ್‌ಎಸ್‌ಆರ್‌ ಬಡಾವಣೆಯ ಬಿಬಿಎಂಪಿ ಕಾಲೇಜಿನ ಬಾಲಕಿಯರ ತಂಡವು ಎರಡನೇ ಸ್ಥಾನ ಗಳಿಸಿತು.

ವಿಜೇತರಿಗೆ ಅಂತರರಾಷ್ಟ್ರೀಯ ಮಾಜಿ ಕಬಡ್ಡಿ ಪಟು ಬಿ.ಸಿ. ರಮೇಶ್ ಟ್ರೋಫಿ ವಿತರಿಸಿದರು. ಪಿಇಎಸ್‌ ವಿಶ್ವವಿದ್ಯಾಲಯದ ಕ್ರೀಡಾ ನಿರ್ದೇಶಕ ಎಂ.ಎಸ್‌. ವಿನಯ್‌ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT