ಶನಿವಾರ, ಆಗಸ್ಟ್ 24, 2019
28 °C

ಟಿ.ಟಿ:ಆಕಾಶ್‌, ಕರುಣಾಗೆ ಕಿರೀಟ

Published:
Updated:
Prajavani

ಬೆಂಗಳೂರು: ಕೆ.ಜೆ.ಆಕಾಶ್‌ ಮತ್ತು ಕರುಣಾ ಗಜೇಂದ್ರನ್‌ ಅವರು ಕರ್ನಾಟಕ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಜೂನಿಯರ್‌ ಬಾಲಕರ ಮತ್ತು ಬಾಲಕಿಯರ ವಿಭಾಗಗಳಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಗುರುವಾರ ನಡೆದ ಫೈನಲ್‌ನಲ್ಲಿ ಆಕಾಶ್‌ 11–6, 7–11, 11–7, 11–4, 4–11, 11–13, 12–10ರಲ್ಲಿ  ಸುಜನ್‌ ಆರ್‌.ಭಾರದ್ವಾಜ್‌ ಅವರನ್ನು ಸೋಲಿಸಿದರು.

ಇದಕ್ಕೂ ಮೊದಲು ನಡೆದಿದ್ದ ಸೆಮಿಫೈನಲ್‌ ಪಂದ್ಯಗಳಲ್ಲಿ ಆಕಾಶ್‌ 11–7, 12–14, 11–9, 8–11, 13–11, 11–9ರಲ್ಲಿ ಸಮ್ಯಕ್ ಕಶ್ಯಪ್‌ ಎದುರೂ, ಸುಜನ್‌ 8–11, 11–4, 9–11, 11–8, 11–6, 11–5ರಲ್ಲಿ ಪಿ.ಯಶವಂತ್‌ ವಿರುದ್ಧವೂ ಗೆದ್ದಿದ್ದರು.

ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಕರುಣಾ 12–10, 9–11, 9–11, 12–10, 6–11, 11–9, 6–11ರಲ್ಲಿ ಅದಿತಿ ಪಿ.ಜೋಶಿ ಅವರನ್ನು ಪರಾಭವಗೊಳಿಸಿದರು.

ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಅದಿತಿ 11–6, 12–10, 11–8, 11–13, 11–8ರಲ್ಲಿ ತೃಪ್ತಿ ಪುರೋಹಿತ್‌ ಎದುರೂ, ಕರುಣಾ 11–6, 11–7, 12–14, 11–8, 11–4ರಲ್ಲಿ ಪಿ.ಎಂ.ಶ್ವೇತಾ ವಿರುದ್ಧವೂ ವಿಜಯಿಯಾಗಿದ್ದರು.

Post Comments (+)