ಶುಕ್ರವಾರ, ಸೆಪ್ಟೆಂಬರ್ 20, 2019
21 °C
ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿ

ಕೆನರಾ ಬ್ಯಾಂಕ್‌ ತಂಡಕ್ಕೆ ಪ್ರಶಸ್ತಿ

Published:
Updated:
Prajavani

ಬೆಂಗಳೂರು: ಕೆನರಾ ಬ್ಯಾಂಕ್‌ ತಂಡದವರು ಕರ್ನಾಟಕ ಟೇಬಲ್‌ ಟೆನಿಸ್‌ ಸಂಸ್ಥೆ ಆಶ್ರಯದ ಆರ್‌.ಎಸ್‌.ಶಕುಂತಲಾ ಸ್ಮಾರಕ ರಾಜ್ಯ ರ‍್ಯಾಂಕಿಂಗ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಶನಿವಾರ ನಡೆದ ಫೈನಲ್‌ನಲ್ಲಿ ಕೆನರಾ ಬ್ಯಾಂಕ್‌ 3–1ರಲ್ಲಿ ಎಂ.ಎಸ್‌.ಎಸ್‌.ಟಿ.ಟಿ.ಎ–ಬಿ ತಂಡವನ್ನು ಮಣಿಸಿತು.

ಮೊದಲ ಸಿಂಗಲ್ಸ್‌ನಲ್ಲಿ ಕಣಕ್ಕಿಳಿದಿದ್ದ ಬಿ.ಸೋಹಮ್‌ 9–11, 11–4, 11–9, 11–6ರಲ್ಲಿ ಶ್ರೇಯಸ್‌ ಕುಲಕರ್ಣಿ ಅವರನ್ನು ಮಣಿಸಿ ಕೆನರಾ ಬ್ಯಾಂಕ್‌ ತಂಡಕ್ಕೆ 1–0 ಮುನ್ನಡೆ ತಂದುಕೊಟ್ಟರು.

ಎರಡನೇ ಸಿಂಗಲ್ಸ್‌ನಲ್ಲಿ ತನ್ಮಯ್‌ ರಾಣೆ 11–9, 9–11, 11–8, 11–5ರಲ್ಲಿ ಸಮರ್ಥ್‌ ಕುರ್ಡಿಕೇರಿ ವಿರುದ್ಧ ಗೆದ್ದರು.

ಮೂರನೇ ಸಿಂಗಲ್ಸ್‌ನಲ್ಲಿ ಎಂ.ಎಸ್‌.ಎಸ್‌. ಟಿ.ಟಿ.ಎ. ತಂಡದ ನಿಖಿಲ್‌ ನಂದಾ 9–11, 11–5, 5–11, 11–8, 11–7ರಲ್ಲಿ ಮರಿಯಾ ರೋನಿ ಅವರನ್ನು ಮಣಿಸಿ ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿದರು.

ನಾಲ್ಕನೇ ಸಿಂಗಲ್ಸ್‌ನಲ್ಲಿ ಸೋಹಮ್‌ ಪರಿಣಾಮಕಾರಿ ಆಟ ಆಡಿದರು. ಅವರು 11–9, 13–11, 8–11, 11–4ರಲ್ಲಿ ಸಮರ್ಥ್‌ ಕುರ್ಡಿಕೇರಿ ಎದುರು ಗೆದ್ದು ಕೆನರಾ ಬ್ಯಾಂಕ್‌ ತಂಡದ ಸಂಭ್ರಮಕ್ಕೆ ಕಾರಣರಾದರು.

Post Comments (+)