ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಶಂಕರ್‌ಗೆ 6ನೇ ಸ್ಥಾನ

ಮೊನಾಕೊ ಡೈಮಂಡ್‌ ಲೀಗ್‌ ಕೂಟದ ಲಾಂಗ್‌ಜಂಪ್‌
Last Updated 11 ಆಗಸ್ಟ್ 2022, 13:36 IST
ಅಕ್ಷರ ಗಾತ್ರ

ಮೊನಾಕೊ: ಕಾಮನ್‌ವೆಲ್ತ್‌ ಕ್ರೀಡಾಕೂಟದ ಬೆಳ್ಳಿ ಪದಕ ವಿಜೇತ ಭಾರತದ ಲಾಂಗ್‌ಜಂಪ್‌ ಸ್ಪರ್ಧಿ ಮುರಳಿ ಶ್ರೀಶಂಕರ್‌, ಮೊನಾಕೊದಲ್ಲಿ ನಡೆದ ಡೈಮಂಡ್‌ ಲೀಗ್‌ ಕೂಟದಲ್ಲಿ ಆರನೇ ಸ್ಥಾನ ಪಡೆದರು.

ಬುಧವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಅವರು 7.94 ಮೀ. ಸಾಧನೆ ಮಾಡಿದರು. ಶ್ರೀಶಂಕರ್‌ ಆರು ಆರು ದಿನಗಳ ಹಿಂದೆಯಷ್ಟೆ 8.08 ಮೀ. ಜಿಗಿದು ಕಾಮನ್‌ವೆಲ್ತ್‌ ಕೂಟದಲ್ಲಿ ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ್ದರು. ಅದೇ ಸಾಧನೆಯನ್ನು ಪುನರಾವರ್ತಿಸಲು ವಿಫಲರಾದರು.

ಅಮೆರಿಕದ ಯೂಜಿನ್‌ನಲ್ಲಿ ಕಳೆದ ತಿಂಗಳು ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅವರು 7.96 ಮೀ. ಸಾಧನೆಯೊಂದಿಗೆ ಏಳನೇ ಸ್ಥಾನ ಪಡೆದುಕೊಂಡಿದ್ದರು.

23 ವರ್ಷದ ಶ್ರೀಶಂಕರ್‌ ತಮ್ಮ ಚೊಚ್ಚಲ ಡೈಮಂಡ್‌ ಲೀಗ್‌ನ ಮೊದಲ ಪ್ರಯತ್ನದಲ್ಲಿ 7.61 ಮೀ. ಜಿಗಿದರು. ಆ ಬಳಿಕದ ಪ್ರಯತ್ನಗಳಲ್ಲಿ 7.84 ಮೀ. ಮತ್ತು 7.83 ಮೀ. ಸಾಧನೆ ಮೂಡಿಬಂತು. ಐದನೇ ಪ್ರಯತ್ನದಲ್ಲಿ ಅವರ ಉತ್ತಮ ಸಾಧನೆ (7.94 ಮೀ.) ದಾಖಲಾಯಿತು.

ಟೋಕಿಯೊ ಒಲಿಂಪಿಕ್ಸ್‌ನ ಕಂಚಿನ ಪದಕ ವಿಜೇತ ಕ್ಯೂಬಾದ ಮೈಕೆಲ್ ಮಾಸೊ ಅವರು 8.35 ಮೀ. ಸಾಧನೆಯೊಂದಿಗೆ ಚಿನ್ನ ಗೆದ್ದುಕೊಂಡರು.

ಒಲಿಂಪಿಕ್‌ ಚಾಂಪಿಯನ್‌ ಗ್ರೀಸ್‌ನ ಮಿಲ್ಟಿಯಾಡಿಸ್ ಟೆಂಟೊಗ್ಲು (8.31 ಮೀ.) ಬೆಳ್ಳಿ ಹಾಗೂ ಅಮೆರಿಕದ ಮಾರ್ಕಿಸ್‌ ಡೆಂಡಿ (8.31 ಮೀ.) ಕಂಚು ಪಡೆದರು.

ಜಮೈಕದ ಟಜಯ್‌ ಗೇಲ್‌ (8.06 ಮೀ.) ಮತ್ತು ಸ್ವೀಡನ್‌ನ ತೊಬಿಯಸ್ ಮಾಂಟ್ಲೆರ್‌ (7.96 ಮೀ.) ಅವರು ಕ್ರಮವಾಗಿ ನಾಲ್ಕು ಹಾಗೂ ಐದನೇ ಸ್ಥಾನ ಗಳಿಸಿದರು.

ಶ್ರೀಶಂಕರ್‌ ಅವರು ಆ.30 ರಂದು ಸ್ವಿಟ್ಜರ್‌ಲೆಂಡ್‌ನ ಲಾಸನ್‌ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್‌ ಟೂರ್‌ ಸಿಲ್ವರ್‌ ಲೇಬಲ್‌ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT