ಬುಧವಾರ, ನವೆಂಬರ್ 20, 2019
25 °C
ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಮಹಿಳೆಯರ ಸ್ಕ್ವಾಷ್‌

ಮದ್ರಾಸ್ ವಿವಿ ಚಾಂಪಿಯನ್‌: ಮಾಹೆ ರನ್ನರ್ ಅಪ್‌

Published:
Updated:
Prajavani

ಉಡುಪಿ: ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಮಹಿಳೆಯರ ಸ್ಕ್ವಾಷ್‌ ಚಾಂ‍‍‍ಪಿಯನ್‌ ಶಿಪ್‌ ಕಿರೀಟ ಮದ್ರಾಸ್‌ ವಿವಿ ಮುಡಿಗೇರಿತು. ಆತಿಥೇಯ ಮಣಿಪಾಲದ ಮಾಹೆ ವಿಶ್ವವಿದ್ಯಾಲಯ ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಶುಕ್ರವಾರ ಮಾಹೆ ಮರೇನಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಮದ್ರಾಸ್‌ ವಿವಿ 3–0 ಗೇಮ್‌ಗಳಿಂದ ಮಾಹೆ ವಿವಿಯನ್ನು ಪರಾಭವಗೊಳಿಸಿತು.

ಮದ್ರಾಸ್‌ ವಿವಿ ಆಟಗಾರ್ತಿ ಶಿವಾನಿ 11-4, 9-11, 11-4, 11-4 ಪಾಯಿಂಟ್ಸ್‌ಗಳ ಅಂತರದಿಂದ ಮಾಹೆ ವಿವಿಯ ಆಯನ್ ವಿರುದ್ಧ ಗೆದ್ದು ಬೀಗಿದರೆ, ಉಳಿದ ಪಂದ್ಯಗಳಲ್ಲಿ ರಿತಿಕಾ 11-2, 11-0, 11-0 ಅಂತರದಲ್ಲಿ ಮುಸ್ಕಾನ್ ವಿರುದ್ಧ ಹಾಗೂ ಕೃತಿಕಾ 11-7, 11-5, 11-4 ಅಂತರದಲ್ಲಿ ಸುರಿತಾ ಅವರನ್ನು ಸೋಲಿಸಿದರು.

ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ರಾಯ್‌ಪುರದ ಪಂಡಿತ್ ರವಿಶಂಕರ್ ಶುಕ್ಲ ವಿವಿಯು 3-1 ಗೇಮ್‌ಗಳಿಂದ ಸಾವಿತ್ರಿಬಾಯಿ ಫುಲೆ ವಿವಿಯನ್ನು ಮಣಿಸಿತು.

ಕಳೆದ ವರ್ಷ ನಡೆದಿದ್ದ ಟೂರ್ನಿಯಲ್ಲೂ ಮದ್ರಾಸ್‌ ವಿವಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಮಾಹೆ ರನ್ನರ್ ಅಪ್‌ ಆಗಿತ್ತು. ಈ ವರ್ಷ ಕೂಡ ಹಿಂದಿನ ಫಲಿತಾಂಶವೇ ಮರುಕಳಿಸಿದೆ. ವಿಜೇತ ತಂಡಕ್ಕೆ ಮಾಹೆ ಕುಲಪತಿ ಡಾ.ಎಚ್‌.ಎಸ್‌.ಬಲ್ಲಾಳ್‌ ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು.

ಪ್ರತಿಕ್ರಿಯಿಸಿ (+)