ಸೋಮವಾರ, ಜನವರಿ 20, 2020
27 °C
ಸರ್ಗಿ ಟಿವಿಯಾಕೊವ್‌ ದಾಖಲೆ ಮುರಿದ ನಾರ್ವೆಯ ನಿಪುಣ

ದೀರ್ಘ ಕಾಲ ಅಜೇಯ: ಕಾರ್ಲ್‌ಸನ್‌ ದಾಖಲೆ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ವಿಜ್ಕ್‌ ಆನ್‌ ಜೀ : ಸರ್ಗಿ ಟಿವಿಯಾಕೊವ್‌ ಅ ವಿಜ್ಕ್‌ ಆನ್‌ ಜೀ ಟೂರ್ನಿಯಲ್ಲಿ ಮಂಗಳವಾರ ನಾಲ್ಕನೇ ಸುತ್ತಿನ ಪಂದ್ಯವನ್ನು ‘ಡ್ರಾ’ ಮಾಡಿಕೊಳ್ಳುವ ಮೂಲಕ ನಾರ್ವೆಯ ಆಟಗಾರ ಸತತ 111 ಪಂದ್ಯಗಳಲ್ಲಿ ಸೋಲರಿಯದ ಸಾಧನೆ ದಾಖಲಿಸಿದರು.

ಈ ಹಿಂದಿನ ದಾಖಲೆ ರಷ್ಯ ಸಂಜಾತ ಡಚ್‌ ಗ್ರ್ಯಾಂಡ್‌ಮಾಸ್ಟರ್‌ ಸರ್ಗಿ ಟಿವಿಯಾಕೊವ್‌ ಅವರ ಹೆಸರಿನಲ್ಲಿತ್ತು. ಅವರು ಶಾಸ್ತ್ರೀಯ ಮಾದರಿಯ ಆಟದಲ್ಲಿ ಸತತವಾಗಿ 110 ಪಂದ್ಯಗಳಲ್ಲಿ ಅಜೇಯರಾಗಿ ಉಳಿದಿದ್ದರು. ಚೆಸ್‌ನಲ್ಲಿ ಕ್ಲಾಸಿಕಲ್‌, ರ‍್ಯಾಪಿಡ್‌, ಬ್ಲಿಟ್ಜ್‌ ಮಾದರಿಗಳಿವೆ.

ಕಾರ್ಲ್‌ಸನ್‌, ನಾಲ್ಕನೇ ಸುತ್ತಿನಲ್ಲಿ ಜೋರ್ಡೆನ್‌ ವಾನ್‌ ಫಾರೀಸ್ಟ್‌ ವಿರುದ್ಧ ಪಾಯಿಂಟ್‌ ಹಂಚಿಕೊಂಡರು. ಮೊದಲು ಈ ದಾಖಲೆಗೆ ಪಾತ್ರರಾಗುವುದನ್ನು ಕಾರ್ಲ್‌ಸನ್‌ ಇಷ್ಟಪಟ್ಟಿರಲಿಲ್ಲ. ನಾರ್ವೇಜಿಯನ್‌ ಲೀಗ್‌ನಲ್ಲಿ ಗಳಿಸಿದ್ದ ಎರಡು ಗೆಲುವನ್ನು ಇದರಲ್ಲಿ ಸೇರಿಸಲು ಅವರು ಸಿದ್ಧರಿರಲಿಲ್ಲ. ‌ಆದರೆ ನಿಲುವನ್ನು ಬದಲಿಸುವುದಾಗಿ 29 ವರ್ಷದ ಕಾರ್ಲ್‌ನಸ್‌ ‘ಗಾರ್ಡಿಯನ್‌’ಗೆ ತಿಳಿಸಿದರು. 

ಪ್ರತಿಕ್ರಿಯಿಸಿ (+)