ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹೀಂದ್ರಾ ಆಫ್‌ರೋಡ್‌ ತರಬೇತಿ ಅಕಾಡೆಮಿ

Last Updated 16 ನವೆಂಬರ್ 2018, 18:19 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿ ಭಾಗದ ಮೋಟರ್‌ ರೇಸ್ ಸಾಹಸ ಕ್ರೀಡೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹೀಂದ್ರಾ ಅಡ್ವೆಂಚರ್‌ ಬ್ರಾಡ್‌ ಅಡಿಯಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿ ಹಾಗೂ ಪನ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಮಹೀಂದ್ರಾ 2ನೇ ಆಫ್‌ರೋಡ್‌ ತರಬೇತಿ ಅಕಾಡೆಮಿ ಕೇಂದ್ರಕ್ಕೆ ಶುಕ್ರವಾರ ಇಲ್ಲಿ ಚಾಲನೆ ನೀಡಲಾಯಿತು.

ಮಂಗಳೂರು ಆಫ್‌ರೋಡ್‌ ತರಬೇತಿ ಅಕಾಡೆಮಿಯಲ್ಲಿ ಬೇಸಿಕ್ ಲೆವೆಲ್-ಗೆಟ್ಟಿಂಗ್ ಡರ್ಟ್‌ ಹಾಗೂ ಇಂಟರ್‍ ಮೀಡಿಯೇಟ್ ಲೆವೆಲ್- ಟ್ರಯಲ್‌ ಸರ್‍ವೈವರ್ ಎಂಬ ಎರಡು ಕೋರ್ಸ್‌ ಆರಂಭವಾಗಿವೆ. ಗ್ಲೋಬಲ್ ಎಕ್ಸ್‌ಪ್ಲೋರರ್ ಹೆಸರಿನ ಉನ್ನತ ಹಂತದ ಕೋರ್ಸ್ಅನ್ನು 3ನೇ ಹಂತದಲ್ಲಿ ಇಗತ್‍ಪುರಿಯಲ್ಲಿರುವ ಆಫ್‍ರೋಡ್ ಅಕಾಡೆಮಿ ಕೇಂದ್ರ ಕಚೇರಿಯಲ್ಲೇ ನಡೆಸಲಾಗುತ್ತಿದೆ. ತರಬೇತಿ ವಾರಾಂತ್ಯದಲ್ಲಿ ನಡೆಯಲಿವೆ. ಬೇಸಿಕ್ ಕೋರ್ಸ್, ಟ್ರಯಲ್‌ ಕೋರ್ಸ್‌ಗಳು 1ರಿಂದ 2 ದಿನಗಳ ಕಾಲ ನಡೆಯುತ್ತವೆ. ಅಕಾಡೆಮಿ ವತಿಯಿಂದ ಕಾರ್ಪೊರೇಟ್ ಸಂಸ್ಥೆಗಳಿಗೆ ವಿಶೇಷ ಕೋರ್ಸ್‌ಗಳನ್ನೂ ಆರಂಭಿಸಲಾಗಿದೆ.

2ನೇ ಆಫ್‍ರೋಡ್ ತರಬೇತಿ ಅಕಾಡೆಮಿ ತರಬೇತಿ ಕೇಂದ್ರವನ್ನು ಮಹೀಂದ್ರಾ ಅಡ್ವೆಂಚರ್ ಇನಿಶಿಯೇಟಿವ್ ಮುಖ್ಯಸ್ಥ ಬಿಜೊಯ್ ಕುಮಾರ್ ವೈ ಉದ್ಘಾಟಿಸಿದರು. ‘ಮಹೀಂದ್ರಾ ಅಡ್ವೆಂಚರ್ ಆಫ್‍ರೋಡ್ ತರಬೇತಿ ಅಕಾಡೆಮಿಯನ್ನು ಇಗತ್‍ಪುರಿಯಲ್ಲಿ ಆರಂಭಿಸಿ ಐದು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದ ಬಳಿಕ, 2ನೇ ಕೇಂದ್ರವನ್ನು ಮಂಗಳೂರಿನಲ್ಲಿ ಉದ್ಘಾಟಿಸಲಾಗುತ್ತಿದೆ. ತರಬೇತಿ ಶನಿವಾರ ಆರಂಭ ಆಗಲಿದ್ದು, 11 ಜನರು ನೋಂದಣಿ ಮಾಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT