ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್‌: ಸೆಮಿಗೆ ಮನೀಷ್‌

Last Updated 25 ಫೆಬ್ರುವರಿ 2019, 19:00 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಮನೀಷ್‌ ಕೌಶಿಕ್‌, ಇರಾನ್‌ನ ಚಾಬಹರ್‌ನಲ್ಲಿ ನಡೆಯುತ್ತಿರುವ ಮ್ಯಾಕ್ರನ್‌ ಕಪ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಭಾನುವಾರ ರಾತ್ರಿ ನಡೆದ ಪುರುಷರ 60 ಕೆ.ಜಿ. ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಮನೀಷ್‌ 5–0 ಪಾಯಿಂಟ್ಸ್‌ನಿಂದ ಸಲಾರ್‌ ಮೌಮಿವಾಂಡ್‌ ಅವರನ್ನು ಪರಾಭವಗೊಳಿಸಿದರು.

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕ ಗೆದ್ದ ಸಾಧನೆ ಮಾಡಿರುವ ಮನೀಷ್, ಪಾದರಸದಂತಹ ಚಲನೆ, ನಿಖರ ಮತ್ತು ವೇಗದ ಪಂಚ್‌ಗಳ ಮೂಲಕ ಎದುರಾಳಿಯನ್ನು ಹೈರಾಣಾಗಿಸಿದರು.

69 ಕೆ.ಜಿ.ವಿಭಾಗದಲ್ಲಿ ರಿಂಗ್‌ಗೆ ಇಳಿದಿದ್ದ ದುರ್ಯೋಧನ ಸಿಂಗ್‌ ನೇಗಿ ಕೂಡಾ ನಾಲ್ಕರ ಘಟ್ಟ ಪ್ರವೇಶಿಸಿದರು.

ಕ್ವಾರ್ಟರ್‌ ಫೈನಲ್‌ನಲ್ಲಿ ನೇಗಿ, ಕಮ್ಯಾಬ್‌ ಮೊರಾಡಿ ಎದುರು ಗೆದ್ದರು.

64 ಕೆ.ಜಿ. ವಿಭಾಗದ ಎಂಟರ ಘಟ್ಟದ ಪೈಪೋಟಿಯಲ್ಲಿ ರೋಹಿತ್‌ ಟೋಕಾಸ್‌ 5–0ರಲ್ಲಿ ತುರ್ಕಮೆನಿಸ್ತಾನದ ಟುಗ್ರುಯಿಬಾಗ್‌ ಅವರನ್ನು ಪರಾಭವಗೊಳಿಸಿದರು.

81 ಕೆ.ಜಿ.ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಮನೀಷ್‌ ಪನ್ವಾರ್‌ 0–5ರಲ್ಲಿ ಕೀವನ್‌ ಸಫಾರಿ ಎದುರು ಸೋತರು.

ಟೂರ್ನಿಯಲ್ಲಿ ಭಾರತದ ಒಟ್ಟು ಎಂಟು ಮಂದಿ ಬಾಕ್ಸರ್‌ಗಳು ನಾಲ್ಕರ ಘಟ್ಟ ಪ್ರವೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT