ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ನುಮೂಳೆಯ ಆರೋಗ್ಯಕ್ಕೆ ಅರ್ಧಕಟಿ ಚಕ್ರಾಸನ

Last Updated 18 ಮೇ 2018, 19:30 IST
ಅಕ್ಷರ ಗಾತ್ರ

ಇದೊಂದು ನಿಂತುಕೊಂಡು ಪಾರ್ಶ್ವಕ್ಕೆ ಬಾಗುವ ಭಂಗಿಯಾಗಿದೆ. ಬೆನ್ನುನೋವಿನ ನಿಯಂತ್ರಣಕ್ಕೆ ಈ ಆಸನ ತುಂಬಾ ಸಹಕಾರಿಯಾಗಿದೆ. ಕಟಿ ಎಂದರೆ ಸೊಂಟ. ಅರ್ಧ ಚಕ್ರದ ಆಕಾರದಲ್ಲಿ ಸೊಂಟವನ್ನು ಬಾಗಿಸುವ ವಿಧಾನ. ಆದ್ದರಿಂದ ಈ ಆಸನಕ್ಕೆ ಅರ್ಧಕಟಿ ಚಕ್ರಾಸನ ಎಂದು ಹೆಸರು.

ಅಭ್ಯಾಸ ಕ್ರಮ: ಪ್ರಥಮವಾಗಿ ತಾಡಾಸನದಲ್ಲಿ ನೆಲೆಸಬೇಕು. ಉಸಿರನ್ನು ತೆಗೆದುಕೊಳ್ಳುತ್ತಾ ಬಲಗೈಯನ್ನು ತಲೆಯ ಮೇಲೆ ನೇರವಾಗಿರಿಸಬೇಕು, ತೋಳುಗಳು ಬಲ ಕಿವಿಯನ್ನು ಸ್ಪರ್ಶಿಸಬೇಕು. ಎಡಗೈ ಎಡತೊಡೆಯ ಮೇಲೆ ನೇರವಾಗಿ ಇರಿಸಬೇಕು. ಅನಂತರ ಉಸಿರನ್ನು ಬಿಡುತ್ತ ನಿಧಾನವಾಗಿ ಎಡಬದಿಗೆ ಬಾಗಬೇಕು. ಸಮಸ್ಥಿತಿಯಲ್ಲಿ (20 ಸೆಕೆಂಡು) ಸಮ ಉಸಿರಾಟ. ಹಾಗೆ ಇನ್ನೊಂದು ಬದಿ ಅಭ್ಯಾಸ ಮಾಡಬೇಕು. ಈ ಆಸನವನ್ನು ಮೂರರಿಂದ ಆರು ಬಾರಿ ಅಭ್ಯಾಸ ಮಾಡಿ.

ಉಪಯೋಗಗಳು: ಇದೊಂದು ಸರಳ ಆಸನವಾಗಿದೆ. ಬೆನ್ನುನೋವು ಬಲುಬೇಗನೆ ನಿಯಂತ್ರಣವಾಗುತ್ತದೆ. ಭುಜಗಳ ಭಾಗ, ಕುತ್ತಿಗೆ ಭಾಗ ಬಲಗೊಳ್ಳುತ್ತದೆ. ಪಿತ್ತಕೋಶದ ಕಾರ್ಯ ಸಮರ್ಪಕವಾಗಿ ನಿರ್ವಹಿಸುತ್ತದೆ. ಸೊಂಟಕ್ಕೆ ಉತ್ತಮ ವ್ಯಾಯಾಮ ಒದಗಿ ಬರುತ್ತದೆ.

ವಿಶೇಷ ಸೂಚನೆ: ನಿಧಾನವಾಗಿ ದೇಹವನ್ನು ಬಿಗಿಗೊಳಿಸದೇ ಅಭ್ಯಾಸ ಮಾಡಿರಿ. ಅಭ್ಯಾಸ ಮಾಡುವ ಶಿಸ್ತು ಬದ್ಧವಾಗಿ ಕ್ರಮವತ್ತಾಗಿ ಉಸಿರಿನ ಗತಿಯೊಂದಿಗೆ ಅಭ್ಯಾಸ ನಡೆಸಿರಿ. ಉತ್ತಮ ಪೋಷಕಾಂಶಗಳನ್ನು ಸೇವಿಸಿರಿ. ಆರಂಭದಲ್ಲಿ ಯೋಗ ಅಭ್ಯಾಸ ಮಾಡುವವರು ಯೋಗದ ಬಗೆಗಿನ ಮಾಹಿತಿಯನ್ನು ಗುರುಮುಖೇನ ಅರಿತುಕೊಂಡು ಕ್ರಮವತ್ತಾಗಿ ಅಭ್ಯಾಸ ಮಾಡಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT