ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಸ್ನೂಕರ್‌ ಟೂರ್‌ ಟೆನ್ ರೆಡ್ಸ್‌ ಚಾಂಪಿಯನ್‌ಷಿಪ್‌: ಪಂಕಜ್‌ ಅಡ್ವಾಣಿ ಹಾದಿ

ಮನನ್‌ಗೆ ಮಣಿದ ಅಮೀರ್‌ ಸರ್ಖೋಷ್‌
Last Updated 23 ಏಪ್ರಿಲ್ 2019, 18:53 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ಬಾರಿಯ ಸ್ನೂಕರ್ ಏಷ್ಯಾಕಪ್ ಚಾಂಪಿಯನ್ ಮತ್ತು 2017ರ ವಿಶ್ವ ಸ್ನೂಕರ್ ಚಾಂಪಿಯನ್‌ಷಿಪ್‌ನ ರನ್ನರ್ ಅಪ್ ಇರಾನ್‌ನ ಅಮೀರ್ ಸರ್ಖೋಷ್‌ ವಿರುದ್ಧ ಭಾರತದ ಮನನ್ ಚಂದ್ರ ಪಾರಮ್ಯ ಮೆರೆದರು.

ಎಸಿಬಿಎಸ್‌ (ಏಷ್ಯನ್‌ ಕಾನ್ಫೆಡರೇಷನ್ ಆಫ್‌ ಬಿಲಿಯರ್ಡ್ ಸ್ಪೋರ್ಟ್ಸ್‌) ಏಷ್ಯನ್‌ ಸ್ನೂಕರ್ ಟೂರ್‌ 10 ರೆಡ್ಸ್ ಚಾಂಪಿಯನ್‌ಷಿಪ್‌ನ ಮೂರನೇ ಲೆಗ್‌ನ ಎರಡನೇ ದಿನ ಮನನ್‌ ಎದುರಾಳಿಯನ್ನು 4–1ರಿಂದ ಸೋಲಿಸಿದರು. ವಸಂತ ನಗರದಲ್ಲಿರುವ ಕರ್ನಾಟಕ ರಾಜ್ಯ ಬಿಲಿಯರ್ಡ್ಸ್‌ ಸಂಸ್ಥೆ ಆವರಣದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಸಿ ಗುಂಪಿನ ಎರಡನೇ ಸುತ್ತಿನ ಪಂದ್ಯದ ಎರಡನೇ ಫ್ರೇಮ್‌ನಲ್ಲಿ ಮಾತ್ರ ಮನನ್ ಚಂದ್ರ ಹಿನ್ನಡೆ ಅನುಭವಿಸಿದರು. ಉಳಿದ ನಾಲ್ಕು ಫ್ರೇಮ್‌ಗಳಲ್ಲಿ ಭರ್ಜರಿ ಆಟವಾಡಿ ಜಯ ತಮ್ಮದಾಗಿಸಿಕೊಂಡರು.

ಮೊದಲ ದಿನ ಮಿಶ್ರ ಫಲ ಕಂಡಿದ್ದ 21 ಬಾರಿಯ ವಿಶ್ವ ಚಾಂಪಿಯನ್‌, ಭಾರತದ ಪಂಕಜ್ ಅಡ್ವಾಣಿ ಎರಡನೇ ದಿನವೂ ನಿರಾಸೆ ಅನುಭವಿಸಿದರು. ಎ ಗುಂಪಿನ ಮೂರನೇ ಹಣಾಹಣಿಯಲ್ಲಿ ಖತಾರ್‌ನ ಅಲಿ ಅಲೊಬೈದ್ಲಿ ಅವರನ್ನು ಮಣಿಸಿದ ಪಂಕಜ್‌ ಸಂಜೆ ನಡೆದ ರೋಚಕ ನಾಲ್ಕನೇ ಹಣಾಹಣಿಯಲ್ಲಿ 3–4ರಲ್ಲಿ ಇರಾನ್‌ನ ಎಹ್ಸಾನ್ ಹೈದರಿಗೆ ಮಣಿದರು.

ಭಾರತದ ಸಂದೀಪ್ ಗುಲಾಟಿ, ಸೌರವ್ ಕೊಠಾರಿ, ಆದಿತ್ಯ ಮೆಹ್ತಾ ಮತ್ತು ಲಕ್ಷ್ಮಣ್‌ ರಾವತ್‌ ಗೆದ್ದು ಸಂಭ್ರಮಿಸಿದರೆ, ಕಮಲ್ ಚಾವ್ಲಾ ಮತ್ತು ಯೋಗೇಶ್ ಕುಮಾರ್‌ ಮಿಶ್ರ ಫಲ ಕಂಡರು.

ಎರಡನೇ ದಿನದ ಫಲಿತಾಂಶಗಳು

ಎ ಗುಂಪು:

ಭಾರತದ ಪಂಕಜ್ ಅಡ್ವಾಣಿಗೆ ಖತಾರ್‌ನ ಅಲಿ ಅಲೊಬೈದ್ಲಿ ವಿರುದ್ಧ 4–2ರಿಂದ ಜಯ (ಫ್ರೇಮ್‌ ವಿವರ: 03-59 (59), 26-63 (49), 70 (47)-00, 57-25, 43 (43)-40, 67-38); ಭಾರತದ ಯೋಗೇಶ್ ಕುಮಾರ್‌ಗೆ ಹಾಂಕಾಂಗ್‌ನ ಫಂಗ್‌ ಕ್ವಾಕ್‌ ವಾಯ್‌ ವಿರುದ್ಧ 4–3ರಿಂದ ಜಯ (16-59, 08-89 (57), 53-40, 60-16, 21-50, 39-25, 66-42); ಖತಾರ್‌ನ ಅಲಿ ಅಲೊಬೈದ್ಲಿಗೆ ಭಾರತದ ಯೋಗೇಶ್ ಕುಮಾರ್ ವಿರುದ್ಧ 4–3ರಿಂದ ಗೆಲುವು (43-00, 46-17, 31-70, 15-51, 05-75, 56-17, 54-12); ಇರಾನ್‌ನ ಎಹ್ಸಾನ್ ಹೈದರಿ ನೆಶಾದ್‌ಗೆ ಪಂಕಜ್ ಅಡ್ವಾಣಿ ವಿರುದ್ಧ 4–3ರಿಂದ ಜಯ (43-46, 65 (65)-00, 36-53, 45-00, 00-79 (79), 48-09, 62-09).

ಬಿ ಗುಂಪು: ಹಾಂಕಾಂಗ್‌ನ ಚೆಂಗ್‌ ಕಾ ವಾಯ್‌ಗೆ ಭಾರತದ ಕಮಲ್ ಚಾವ್ಲಾ ಎದುರು 4–0ಯಿಂದ ಜಯ (43-13, 58 (58)-12, 51-40, 39-29); ಭಾರತದ ಸಂದೀಪ್ ಗುಲಾಟಿಗೆ ಖತಾರ್‌ನ ಮೊಹ್ಸೆನ್‌ ಬುಕ್‌ಶೈಶಾ ವಿರುದ್ಧ 4–2ರಿಂದ ಜಯ (104 (96)-00, 37-09, 46-10, 45-47, 13-59, 62-08); ಭಾರತದ ಕಮಲ್‌ ಚಾವ್ಲಾಗೆ ಖತಾರ್‌ನ ಮೊಹ್ಸೆನ್‌ ಬುಕ್‌ಶೈಶ ವಿರುದ್ಧ 4–1ರಿಂದ ಗೆಲುವು (55-08, 53-29, 24-59, 50-49, 61-16); ಹಾಂಕಾಂಗ್‌ನ ಚೆಂಗ್‌ ಕಾ ವಾಯ್‌ಗೆ ಥಾಯ್ಲೆಂಡ್‌ನ ತನಾವತ್‌ ತಿರಪೊಂಗ್‌ಪೈಬೂನ್‌ ವಿರುದ್ಧ 4–1ರಿಂದ ಜಯ (101 (93)-01, 00-82 (78), 76 (69)-17, 62 (43)-00, 63 (62)-00)‌.

ಸಿ ಗುಂಪು: ಭಾರತದ ಸೌರವ್‌ ಕೊಠಾರಿಗೆ ಸಿರಿಯಾದ ಯಜನ್‌ ಅಲ್ಹದದ್‌ ವಿರುದ್ಧ 4–2ರಿಂದ ಜಯ (14-48, 53-07, 50-36, 34-40, 57-09, 43-29); ಭಾರತದ ಮನನ್ ಚಂದ್ರಗೆ ಇರಾನ್‌ನ ಅಮೀರ್‌ ಸರ್ಕೋಷ್‌ ವಿರುದ್ಧ 4–1ರಿಂದ ಜಯ (47-29, 01-92, 48-01, 68-12, 96-01).

ಡಿ ಗುಂಪು: ಭಾರತದ ಆದಿತ್ಯ ಮೆಹ್ತಾಗೆ ಥಾಯ್ಲೆಂಡ್‌ನ ಪೊಂಗ್ಸಕೊರ್ನ್‌ ಚೊಂಗ್‌ಜೈರಕ್‌ ವಿರುದ್ಧ 4–3ರಿಂದ ಜಯ (60 (60)-39, 51-36, 28-41, 17-73 (73), 17-55 (42), 58 (58)-00, 40-32); ಭಾರತದ ಲಕ್ಷ್ಮಣ್ ರಾವತ್‌ಗೆ ಮ್ಯಾನ್ಮಾರ್‌ನ ಆಂಗ್ ಫಿಯೊ ಎದುರು 4–2ರಿಂದ ಜಯ (23-41, 35-63, 68 (68)-04, 42-02, 33-25, 49-01).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT