ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋರ್ಚುಗಲ್‌ ಓಪನ್‌ ಟಿ.ಟಿ: ಮಾನವ್‌ ಠಕ್ಕರ್‌ಗೆ ಪ್ರಶಸ್ತಿ

Last Updated 29 ನವೆಂಬರ್ 2018, 20:01 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಮಾನವ್‌ ಠಕ್ಕರ್‌ ಅವರು ಗುಮಾರಸ್‌ನಲ್ಲಿ ನಡೆಯುತ್ತಿರುವ ಪೋರ್ಚುಗಲ್‌ ಜೂನಿಯರ್‌ ಮತ್ತು ಕೆಡೆಟ್‌ ಓಪನ್‌ ಟೇಬಲ್‌ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ ಮತ್ತು ಡಬಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್ಸ್‌ನಲ್ಲಿ ಮಾನವ್‌ 11–5, 7–11, 10–12, 11–8, 9–11, 11–4, 11–9 ರಿಂದ ಜೀತ್‌ ಚಂದ್ರ ಅವರನ್ನು ಮಣಿಸಿದರು. ಅವರು ಸೆಮಿಫೈನಲ್‌ ನಲ್ಲಿ ಭಾರತದ ಸ್ನೇಹಿತ್‌ ಅವರನ್ನು 11–8, 6–11, 11–7, 11–5, 7–11, 6–11, 11–4 ರಿಂದ ಮಣಿಸಿದರು.

ಜೀತ್‌ ಚಂದ್ರ ಅವರು ಟೂರ್ನಿಯ ಆರಂಭದಿಂದಲೂ ಉತ್ತಮ ಆಡಿದ್ದರು. ಅವರು ಸೆಮಿಫೈನಲ್ಸ್‌ನಲ್ಲಿ 12–10, 7–10, 11–7, 8–11, 11–5, 11–5 ರಿಂದ ಸ್ಪ್ಯಾನಿಯರ್ಡ್‌ ಮಾರ್ಕ್‌ ಗುಟೆರಜ್‌ ಅವರನ್ನು ಸೋಲಿಸಿದ್ದರೇ ಕ್ವಾರ್ಟರ್‌ ಫೈನಲ್‌ನಲ್ಲಿ 11–5, 9–11 ಚೀನಾದ ತಾವೊ ಯುಚಾಂಗ್‌ ಅವರನ್ನು ಪರಾಜಯಗೊಳಿಸಿದ್ದರು.

ಪುರುಷರ ಡಬಲ್ಸ್‌ ವಿಭಾಗದಲ್ಲಿ ಎದುರಾಳಿಗಳ ತೀವ್ರ ಪೈಪೋಟಿಯನ್ನು ಹಿಮ್ಮೆಟ್ಟಿಸಿದಮಾನವ್‌ ಮತ್ತು ಮಾನುಷ್‌ ಶಾ ಜೋಡಿಯು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಈ ಜೋಡಿಯು 11–7, 11–6, 13–5, 7–11, 11–6 ರಿಂದಜೀತ್‌ ಚಂದ್ರ ಮತ್ತು ಸ್ನೇಹಿತ್‌ ಸುರಜ್ಜುಲಾ ಅವರನ್ನು ಸೋಲಿಸಿದ್ದರು.

ಸೆಲೆನಾದೀಪ್ತಿ ಮತ್ತು ಸ್ವಸ್ತಕಾಗೆ ಕಂಚು:ಜೂನಿಯರ್‌ ಬಾಲಕಿಯರ ಸಿಂಗಲ್ಸ್‌ ವಿಭಾಗದಲ್ಲಿಸೆಲೆನಾದೀಪ್ತಿ ಸೆಲ್ವಕುಮಾರ್‌ ಹಾಗೂ ಡಬಲ್ಸ್‌ನಲ್ಲಿ ಸ್ವಸ್ತಿಕಾ ಘೋಷ್‌ಕಂಚಿನ ಪದಕ ಗಳಿಸಿದರು.

ಅಗ್ರ ಶ್ರೇಯಾಂಕದ ಆಟಗಾರ್ತಿ ಸೆಲೆನಾ ದೀಪ್ತಿ ಸೆಮಿಫೈನಲ್ಸ್‌ನಲ್ಲಿ 8–11, 16–18, 8–11, 3–11 ರಿಂದ ಪೋರ್ಚುಗಲ್‌ನ ಲಿಯು ಯಾಂಗ್ಜಿ ಎದುರು ಶರಣಾದರು.

ಜೂನಿಯರ್‌ ಬಾಲಕಿಯರ ಡಬಲ್ಸ್‌ ವಿಭಾಗದಲ್ಲಿ ಸ್ವಸ್ತಿಕಾ ಹಾಗೂ ಇಟಲಿಯ ಮೇರಿ ಚಾಪೆಟ್‌ ಜೋಡಿಯು ಸೆಮಿಫೈನಲ್ಸ್‌ನಲ್ಲಿ 7–11, 6–11, 9–11 ರಿಂದ ರಾಕ್ವೆಲ್‌ ಮಾರ್ಟಿನ್ಸ್‌ ಮತ್ತು ಸಿಲಿಯಾ ಸಿಲ್ವಾ ಎದುರು ಸೋತು, ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT