ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ಬುಲ್ಸ್‌ಗೆ ಭರ್ಜರಿ ಜಯ

ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್ ಲೀಗ್‌: ಕೊಡಗು ಟೈಗರ್ಸ್‌ಗೆ ನಿರಾಸೆ
Last Updated 16 ಆಗಸ್ಟ್ 2022, 15:08 IST
ಅಕ್ಷರ ಗಾತ್ರ

ಬೆಂಗಳೂರು: ಅಮೋಘ ಆಟವಾಡಿದ ಮಂಡ್ಯ ಬುಲ್ಸ್ ತಂಡದವರು ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್‌ ಲೀಗ್‌ ಟೂರ್ನಿಯಲ್ಲಿ ಮಂಗಳವಾರ ಭರ್ಜರಿ ಜಯ ದಾಖಲಿಸಿದರು.

ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ (ಕೆಬಿಎ) ಅಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಬುಲ್ಸ್ 7–0ಯಿಂದ ಕೊಡಗು ಟೈಗರ್ಸ್ ಸವಾಲು ಮೀರಿತು. ಈ ಗೆಲುವಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಕೊಡಗು ಟೂರ್ನಿಯಿಂದ ಹೊರಬಿದ್ದಿತು.

ಮೊದಲ ಮಹಿಳಾ ಸಿಂಗಲ್ಸ್ ಹಣಾಹಣಿಯಲ್ಲಿ ಬುಲ್ಸ್ ತಂಡದ ಅನನ್ಯಾ ಪ್ರವೀಣ್‌15-13, 14-15, 15-7ರಿಂದ ರುಜುಲಾ ರಾಮು ಎದುರು ಗೆದ್ದು ಮುನ್ನಡೆ ಒದಗಿಸಿದರು. ರುಜುಲಾ ತೀವ್ರ ಪೈಪೋಟಿ ನೀಡಿದರೂ ಅನನ್ಯಾ ಅವರ ಮಿಂಚಿನ ವೇಗದ ಸ್ಮ್ಯಾಷ್‌ಗಳ ಎದುರು ಸೋಲು ಕಾಣಬೇಕಾಯಿತು.

ಪುರುಷರ ಡಬಲ್ಸ್ ಸೆಣಸಾಟದಲ್ಲಿ ಆಶಿತ್ ಸೂರ್ಯ ಮತ್ತು ಸಾಯಿ ಪ್ರತೀಕ್‌15-8,15-8ರಿಂದ ಸೈಫ್ ಅಲಿ ಮತ್ತು ವಸಂತ್ ಕುಮಾರ್ ಅವರನ್ನು ಮಣಿಸಿ ಮುನ್ನಡೆಯನ್ನು2–0ಗೆ ಹೆಚ್ಚಿಸಿದರು. ಪುರುಷರ ಸಿಂಗಲ್ಸ್ ಪಂದ್ಯವನ್ನು ಉಭಯ ತಂಡಗಳು ‘ಟ್ರಂಪ್‌ ಮ್ಯಾಚ್‌‘ ಆಗಿ ತೆಗೆದುಕೊಂಡಾಗ ಆಟ ರಂಗೇರಿತು. ಈ ಸೆಣಸಾಟದಲ್ಲಿ ಬುಲ್ಸ್‌ನ ಅನಿರುದ್ಧ ದೇಶಪಾಂಡೆ15-10, 15-9ರಿಂದ ಕೊಡಗು ತಂಡದ ಸನೀತ್ ದಯಾನಂದ್ ಅವರಿಗೆ ಸೋಲುಣಿಸಿದರು. ಇದರೊಂದಿಗೆ ಬುಲ್ಸ್ ಎರಡು ಪಾಯಿಂಟ್ಸ್ ಗಳಿಸಿದರೆ, ಎದುರಾಳಿ ತಂಡಕ್ಕೆ ಒಂದು ನೆಗೆಟಿವ್‌ ಪಾಯಿಂಟ್‌ ಸಿಕ್ಕಿತು.

ಮಿಶ್ರ ಡಬಲ್ಸ್‌ನಲ್ಲಿ ಮಧುಸೂದನ್‌ ಎಂ.– ಋತು ಮಿಶ್ರಾ 9-15, 8-15ರಿಂದ ಕೊಡಗು ತಂಡದ ಸನೀತ್‌– ರಮ್ಯಾ ವೆಂಕಟೇಶ್ ಎದುರು ಸೋತರು. ಆದರೆ ‘ಸೂಪರ್‌’ ಪಂದ್ಯದಲ್ಲಿ ಬುಲ್ಸ್ ತಿರುಗೇಟು ನೀಡಿತು. ಆಶಿತ್, ಸಾಯಿ ಪ್ರತೀಕ್‌ ಮತ್ತು ಮಧುಸೂದನ್ ಅವರಿದ್ದ ತಂಡವು21-13ರಿಂದ ಸೈಫ್ ಅಲಿ, ಆದರ್ಶ ಕುಮಾರ್ ಮತ್ತು ವಸಂತ್ ಕುಮಾರ್ ಎದುರು ಗೆದ್ದು ಸಂಭ್ರಮಿಸಿತು.

ಬುಧವಾರದ ಪಂದ್ಯಗಳು

ಮಲ್ನಾಡ್‌ ಫಾಲ್ಕನ್ಸ್–ಮೈಸೂರು ಪ್ಯಾಂಥರ್ಸ್

ಮಧ್ಯಾಹ್ನ 3 ಗಂಟೆ

ಕೆಜಿಎಫ್‌ ವೂಲ್ವ್ಸ್–ಬೆಂಗಳೂರು ಲಯನ್ಸ್

ಸಂಜೆ 6 ಗಂಟೆ

ನೇರ ಪ್ರಸಾರ: ಯೂರೊ ಸ್ಪೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT