ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಮಂಗಲ: ಚೊಂಬಿನಲ್ಲಿ ತಲೆ ಸಿಕ್ಕಿಸಿಕೊಂಡ ಬೆಕ್ಕು !

Last Updated 28 ಮಾರ್ಚ್ 2018, 13:24 IST
ಅಕ್ಷರ ಗಾತ್ರ

ಬೆಂಗಳೂರು: ನೆಲಮಂಗಲ ತಾಲ್ಲೂಕಿನ ಕೆರೆಕತ್ತಿಗನೂರಿನ ಮನೆಯೊಂದರಲ್ಲಿ ಹಾಲು ಕುಡಿಯಲು ಹೋಗಿದ್ದ ಬೆಕ್ಕೊಂದು, ಚೊಂಬಿನಲ್ಲಿ ತಲೆ ಸಿಕ್ಕಿಸಿಕೊಂಡು ಹೊರಗೆ ಬರಲಾರದೆ ಪರದಾಡಿತು.

ಗ್ರಾಮದ ನಿವಾಸಿಯೊಬ್ಬರ ಮನೆಯಲ್ಲಿ ಬೆಕ್ಕು ಸಾಕಲಾಗಿದೆ. ಚೊಂಬಿನಲ್ಲಿದ್ದ ಹಾಲು ಕುಡಿಯಲು ಪ್ರಯತ್ನಿಸಿತ್ತು. ಅದರೊಳಗೆ ತಲೆ ಹಾಕಿದ್ದ ಬೆಕ್ಕು, ಹಾಲು ಕುಡಿದು ಮುಗಿಸಿತ್ತು. ಅದಾದ ನಂತರ, ತಲೆಯನ್ನು ಚೊಂಬಿನಿಂದ ಹೊರಗೆ ತೆಗೆಯಲು ಸಾಧ್ಯವಾಗಿರಲಿಲ್ಲ. ಆಗ, ತಲೆಗೆ ಸಿಕ್ಕಿಸಿಕೊಂಡಿದ್ದ ಚೊಂಬಿನ ಸಮೇತವೇ ಮನೆ ಹಾಗೂ ಹೊರಗಿನ ರಸ್ತೆಯಲ್ಲೆಲ್ಲ ಓಡಾಡುತ್ತಿತ್ತು.

ಅದನ್ನು ಗಮನಿಸಿದ್ದ ಯುವಕನೊಬ್ಬ, ಚೊಂಬಿನಿಂದ ಬೆಕ್ಕು ರಕ್ಷಿಸಿದ್ದ. ಆ ವೇಳೆ ಬೆಕ್ಕು ಮಾಡಿದ್ದ ರಂಪಾಟವನ್ನು ಮತ್ತೊಬ್ಬ ಯುವಕ, ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾನೆ. ಈ ವಿಡಿಯೊ ವೈರಲ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT