ಮಂಗಳವಾರ, ಜನವರಿ 21, 2020
23 °C
ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಬಾಲ್‌ ಬ್ಯಾಡ್ಮಿಂಟನ್‌

ಮಂಗಳೂರು ವಿ.ವಿ. ‘ಹ್ಯಾಟ್ರಿಕ್‌’ ಡಬಲ್‌ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಪೂರ್ವ ಆಟ ಆಡಿದ ಮಂಗಳೂರು ವಿಶ್ವವಿದ್ಯಾಲಯದ ಮಹಿಳಾ ತಂಡದವರು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಬಾಲ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಫೈನಲ್‌ನಲ್ಲಿ ಲಾವಣ್ಯ ಮುಂದಾಳತ್ವದ ಮಂಗಳೂರು ವಿ.ವಿ. ತಂಡವು 32–35, 35–26, 35–27ರಲ್ಲಿ ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯ ವಿರುದ್ಧ ಗೆದ್ದಿತು. ಇದರೊಂದಿಗೆ ಚಾಂಪಿಯನ್‌ಷಿಪ್‌ನಲ್ಲಿ ಸತತ ಆರು ಮತ್ತು ಒಟ್ಟಾರೆ 10ನೇ ಪ್ರಶಸ್ತಿ ಜಯಿಸಿದ ಹಿರಿಮೆಗೆ ಭಾಜನವಾಯಿತು.

ಅಂತಿಮ ಘಟ್ಟದ ಪೈಪೋಟಿಯ ಮೊದಲ ಸೆಟ್‌ನಲ್ಲಿ ದಿಟ್ಟ ಹೋರಾಟ ನಡೆಸಿಯೂ ನಿರಾಸೆ ಕಂಡ ಲಾವಣ್ಯ ಬಳಗವು ನಂತರದ ಎರಡು ಸೆಟ್‌ಗಳಲ್ಲೂ ಮೋಡಿ ಮಾಡಿತು.

ಕ್ವಾರ್ಟರ್‌ ಫೈನಲ್‌ನಲ್ಲಿ ಮಧುರೈನ ಕಾಮರಾಜ ವಿ.ವಿ. ತಂಡದ ವಿರುದ್ಧ ನೇರ ಸೆಟ್‌ಗಳಿಂದ ಗೆದ್ದು ಸತತ 17ನೇ ಬಾರಿ ಸೆಮಿಫೈನಲ್‌ ಲೀಗ್‌ಗೆ ಲಗ್ಗೆ ಇಟ್ಟ ದಾಖಲೆ ಬರೆದಿದ್ದ ಮಂಗಳೂರು ವಿ.ವಿ. ತಂಡವು ನಂತರ ಕೋಯಮತ್ತೂರಿನ ಭಾರತೀಯಾರ್‌ ವಿ.ವಿ. ಮತ್ತು ಆತಿಥೇಯ ಆಂಧ್ರ ವಿ.ವಿ.ತಂಡಗಳನ್ನು ಮಣಿಸಿ ಫೈನಲ್‌ ಪ್ರವೇಶಿಸಿತ್ತು.

ಚಾಂಪಿಯನ್‌ಷಿಪ್‌ನಲ್ಲಿ ದೇಶದ ವಿವಿಧ ಭಾಗಗಳಿಂದ ಒಟ್ಟು 80 ತಂಡಗಳು ಪಾಲ್ಗೊಂಡಿದ್ದವು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು