ಬಾಕ್ಸಿಂಗ್‌: ತಿಂಗಮಿಲಾಗೆ ಚಿನ್ನ

7

ಬಾಕ್ಸಿಂಗ್‌: ತಿಂಗಮಿಲಾಗೆ ಚಿನ್ನ

Published:
Updated:

ನವದೆಹಲಿ: ಭಾರತದ ತಿಂಗಮಿಲಾ ಡುಂಗೆಲ್‌ ಅವರು ಪೊಲೆಂಡ್‌ನಲ್ಲಿ ನಡೆಯುತ್ತಿರುವ 13ನೇ ಆವೃತ್ತಿಯ ಅಂತರರಾಷ್ಟ್ರೀಯ ಸಿಲೆಸಿಯನ್‌ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ ಜೂನಿಯರ್‌ ವಿಭಾಗದಲ್ಲಿ ಚಿನ್ನದ ಸಾಧನೆ ಮಾಡಿದರು.

ಶುಕ್ರವಾರ ನಡೆದ 48 ಕೆ. ಜಿ. ವಿಭಾಗದ ಫೈನಲ್‌ನಲ್ಲಿ ತಿಂಗಮಿಲಾ ಅವರು ಜರ್ಮನಿಯ ಮಾರಿಯಾ ಎಲೆನಾ ಅವರನ್ನು ಮಣಿಸಿದರು. ತಿಂಗಮಿಲಾ, ಮಣಿಪುರದಲ್ಲಿ ಹಿರಿಯ ಬಾಕ್ಸಿಂಗ್‌ ಪಟು ಮೇರಿ ಕೋಮ್‌ ಅವರು ಸ್ಥಾಪಿಸಿರುವ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಜೂನಿಯರ್‌ ವಿಭಾಗದಲ್ಲಿ ಸಂದೀಪ್‌ ಕೌರ್‌ ಅವರೂ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 51 ಕೆ. ಜಿ. ವಿಭಾಗದಲ್ಲಿ ಅವರು ಪೊಲೆಂಡ್‌ನ ಇಜ್ಬಾಲಾ ರೊಜ್ಕಾಜೆಕ್‌ ಅವರನ್ನು ಸೋಲಿಸಿದರು.

54 ಕೆ. ಜಿ. ವಿಭಾಗದ ಫೈನಲ್‌ ಪಂದ್ಯದಲ್ಲಿ ನೇಹಾ ಅವರು ಲಾಟ್ವಿಯಾದ ನಿಕೊಲಿನಾ ಬೋಕ್‌ ವಿರುದ್ಧ ಮಣಿದು ಬೆಳ್ಳಿಯ ಪದಕ ಪಡೆದರು. 63 ಕೆ. ಜಿ. ವಿಭಾಗದ ಅಂತಿಮ ಹಣಾಹಣಿಯಲ್ಲಿ ದಿನೇಶಾ ನಾಯಕ್‌, ಸರ್ಬಿಯಾದ ನೀನಾ ಸ್ಟಾಜ್ಕೊವಿಕ್‌ ಅವರ ಎದುರು ಸೋತು ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದರು.

ಫೈನಲ್‌ಗೆ ಮನೀಶಾ: ಸೀನಿಯರ್‌ ವಿಭಾಗದಲ್ಲಿ ಭಾರತದ ಮನೀಶಾ ಅವರು ಫೈನಲ್‌ ಪ್ರವೇಶಿಸಿದ್ದಾರೆ. 

54 ಕೆ. ಜಿ. ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಮನೀಶಾ, 5–0ಯಿಂದ ರಷ್ಯಾದ ವಿಕ್ಟೋರಿಯಾ ಕುಲೆಶೋವಾ ಅವರನ್ನು ಪರಾಭವಗೊಳಿಸಿದರು. ಇತ್ತೀಚೆಗೆ ನಡೆದ ವಿಶ್ವ ಯೂತ್‌ ಚಾಂಪಿಯನ್‌ಷಿಪ್‌ನಲ್ಲಿ ಅವರು ಬೆಳ್ಳಿಯ ಸಾಧನೆ ಮಾಡಿದ್ದರು. 

‘ಮನೀಶಾ ಅತ್ಯುತ್ತಮ ಸಾಮರ್ಥ್ಯ ತೋರಿದರು. ನಿರೀಕ್ಷೆಗೂ ಮೀರಿ ಉತ್ತಮ ಆಟವಾಡಿದರು’ ಎಂದು ಅವರ ಕೋಚ್‌ ರಫೆಲ್ಲೆ ಬರ್ಗಾಮಾಸ್ಕೊ ಹೇಳಿದರು. 

 

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !